ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಎಚ್ಚರ

|
Google Oneindia Kannada News

ಬೆಂಗಳೂರು, ಮೇ 20 : ಕೊರೊನಾ ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಕೋವಿಡ್ - 19 ಸೋಂಕಿತರೊಂದಿಗೆ ದ್ವಿತೀಯ ಹಂತದ ಸಂಪರ್ಕ ಹೊಂದಿರುವವರು ಹಾಗೂ ರಾಜ್ಯದ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಜನರನ್ನು ವಿವಿಧ ಜಿಲ್ಲೆಗಳಲ್ಲಿ ಹೋಂ ಕ್ವಾರಂಟೈನ್‌ಗೆ ಹಾಕಲಾಗುತ್ತದೆ.

ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮೇಲೆ ಆಧುನಿಕ ತಂತ್ರಜ್ಞಾನದ ಜಿಯೋ ಫೆನ್ಸಿಂಗ್ ಮೂಲಕ ಕಣ್ಗಾವಲು ಇಡಲಾಗಿದೆ. ಯಾರಾದರೂ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಬಂದರೆ ತಕ್ಷಣ ಮಾಹಿತಿ ಲಭ್ಯವಾಗುತ್ತದೆ.

ಶಿವಮೊಗ್ಗದಲ್ಲಿ ಪೊಲೀಸ್, ವೈದ್ಯರು ಸೇರಿ ಅನೇಕರಿಗೆ ಕ್ವಾರಂಟೈನ್!ಶಿವಮೊಗ್ಗದಲ್ಲಿ ಪೊಲೀಸ್, ವೈದ್ಯರು ಸೇರಿ ಅನೇಕರಿಗೆ ಕ್ವಾರಂಟೈನ್!

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಹೊರಗೆ ತಿರುಗಾಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಕಡ್ಡಾಯವಾಗಿ 14 ದಿನಗಳ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.

ಬಿಗ್ ನ್ಯೂಸ್; ಕ್ವಾರಂಟೈನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ ಬಿಗ್ ನ್ಯೂಸ್; ಕ್ವಾರಂಟೈನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ

Violation Of Home Quarantine Policy Get Ready For Institutional Quarantine

ಕೋವಿಡ್ - 19 ಹರಡುವಿಕೆ ತಡೆಯಲು ಜನರು ಸಹ ಸಹಕಾರ ನೀಡಬೇಕು. ಒಂದು ವೇಳೆ ಹೋಂ ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿಗಳು ಮನೆಗಳಿಂದ ಹೊರಬಂದರೆ ಸುತ್ತಮುತ್ತಲಿನ ಸಾರ್ವಜನಿಕರೂ ಕೂಡ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತಹ ವ್ಯವಸ್ಥೆ ಮಾಡಲಾಗಿದೆ.

ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭ ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭ

ಬೇರೆ ಜಿಲ್ಲೆಗಳಿಂದ ಬಂದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡುವ ನಿಯಮ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಜಾರಿಯಲ್ಲಿದೆ. ಜಿಲ್ಲೆಗೆ ಬಂದಾಗ ಅವರ ಆರೋಗ್ಯ ತಪಾಸಣೆ ನಡೆಸಿ ಹೋಂ ಕ್ವಾರಂಟೈನ್‌ಗೆ ಸೂಚನೆ ನೀಡಲಾಗುತ್ತದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ತುರ್ತು ಕೆಲಸಕ್ಕಾಗಿ ಬೇರೆ ಜಿಲ್ಲೆಯಿಂದ ಆಗಮಿಸಿದ್ದರೆ ಅವರನ್ನು ಕ್ವಾರಂಟೈನ್ ಮಾಡುವುದಿಲ್ಲ. ಪಾಸು ಪಡೆಯುವಾಗಲೇ ಅವರು ಎರಡೂ ಮಾರ್ಗದ ಪಾಸು ಪಡೆದಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ಆಗಲಿದ್ದಾರೆ.

English summary
Secondary contacts of Covid-19 patient should go for home quarantine. If they skip the home quarantine rules must go for 14 days of institutional quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X