ಒಳ್ಳೆ ಸುದ್ದಿ, ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ

Written By:
Subscribe to Oneindia Kannada

ವಿಜಯಪುರ, ಜೂನ್, 18: ಕಳೆದ ವಾರ ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆ ಪರಿಣಾಮ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಇದು ಅಣೆಕಟ್ಟು ವ್ಯಾಪ್ತಿಯ ರೈತರ ಸಂತಸಕ್ಕೆ ಕಾರಣವಾಗಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಭಾನುವಾರ ಮಧ್ಯಾಹ್ನ ದಿಂದಲೇ 625 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ ಭಾನುವಾರ 518. 90 ಮೀಟರ್‌ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟ 519.60 ಮೀಟರ್‌.[ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ]

rain

ಭಾನುವಾರ ಸಂಜೆ ಒಳಹರಿವು 1.40 ಲಕ್ಷ ಕ್ಯುಸೆಕ್‌ಗೆ ಇಳಿದಿರುವು ದ ರಿಂದ ಜಲಾಶಯದಿಂದ ನದಿಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಆದರೆ ವಿದ್ಯುತ್‌ ಉತ್ಪಾದನೆ ನಂತರ 45 ಸಾವಿರ ಕ್ಯುಸೆಕ್‌ ಸೇರಿ ಒಟ್ಟು 45,625 ಕ್ಯುಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನಲ್ಲಿ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮತ್ತೆರಡು ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ. ಇನ್ನೂ ಎರಡು ಸೇತುವೆಗಳು ಮಾತ್ರ ಮುಳುಗಡೆ ಸ್ಥಿತಿಯಲ್ಲಿಯೇ ಇವೆ.[ದೇಶದ ಶೇ. 89 ಭಾಗಕ್ಕೆ ವರುಣನ ಕೃಪೆ, ಕರ್ನಾಟಕದ ಕತೆ?]

ಕಾರದಗಾ-ಭೋಜ್ ಮತ್ತು ಭೋಜ್‌ವಾಡಿ-ಕುನ್ನೂರ ಗ್ರಾಮ ಗಳ ಮಧ್ಯದ ಸೇತುವೆಗಳು ಭಾನುವಾರ ಸಂಚಾರಕ್ಕೆ ಮುಕ್ತಗೊಂಡಿದ್ದು, ಮಲಿಕವಾಡ - ದತ್ತವಾಡ, ಕಲ್ಲೋಳ-ಯಡೂರ ಸೇತುವೆಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲಿಯೇ ಇವೆ.

ವಿವಿಧೆಡೆ ಮಳೆ: ಧಾರವಾಡ ನಗರದಲ್ಲಿ ಸುಮಾರು ಎರಡು ತಾಸು ಸಾಧಾರಣ ಮಳೆಯಾಗಿದ್ದು, ಹುಬ್ಬಳ್ಳಿ ನಗರದಲ್ಲಿ ತುಂತುರು ಮಳೆಯಾಗಿದೆ. ಆದರೆ ಗದಗ ನಗರದಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ರಭಸದ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಮುಂದುವರಿದಿದೆ. ಜುಲೈ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಭಾರೀ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆಯನ್ನು ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Following heavy rain in the catchment areas of Almatti dam, the water level in the dam went up and reached 518 metres on Sunday, July 17. The region has been receiving good rain for the last 15 days.
Please Wait while comments are loading...