ಮಲ್ಯ ಬಗ್ಗೆ ಕರ್ನಾಟಕದ ರಾಜಕಾರಣಿಗಳು ಹೇಳುವುದೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಅದು 2002 ಮತ್ತು 2010 ರ ಸಮಯ, ಕರ್ನಾಟಕದ ರಾಜಕಾರಣಿಗಳು ಪಕ್ಷತೀತವಾಗಿ ವಿಜಯ್ ಮಲ್ಯ ಬೆಂಬಲಕ್ಕೆ ನಿಂತಿದ್ದರು. ಮಲ್ಯ ಅವರನ್ನು ರಾಜ್ಯದ ಪರವಾಗಿ ರಾಜ್ಯಸಭೆಗೂ ಆಯ್ಕೆ ಮಾಡಿ ಕಳಿಸಿದ್ದರು.

ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಲ್ಯ ಸಾಲಗಾರ ಎಂಬ ಹಣೆಪಟ್ಟಿ ಕಟ್ಟಿಕೊಂಡು ನಿಂತಿದ್ದಾರೆ. ಜನರು ಅಂದುಕೊಂಡಂತೆ ಮಲ್ಯ ಲಂಡನ್ ನಲ್ಲಿದ್ದಾರೆ. ನಾವೇ ಚುನಾಯಿಸಿ ಕಳಿಸಿದ ಪ್ರತಿನಿಧಿ ಎಂಥವರು ಎಂದು ರಾಜಕಾರಣಿಗಳು ಲೆಕ್ಕ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.[ಟ್ವಿಟ್ಟರ್‌ನಲ್ಲಿ ಮಾಧ್ಯಮಗಳಿಗೆ ತಿರುಗೇಟು ನೀಡಿದ ಮಲ್ಯ!]

vijay mallya

ಅಂದು ಏನು ಹೇಳಿದ್ದರು? ಇಂದು ಏನು ಹೇಳ್ತಿದ್ದಾರೆ?
ಎಲ್ಲ ಪಕ್ಷಗಳ ಬೆಂಬಲದಲ್ಲೇ ಮಲ್ಯ ಆಯ್ಕೆಯಾಗಿ ರಾಜ್ಯಸಭೆಗೆ ತೆರಳಿದ್ದರೂ ನಾನು ಸ್ವತಂತ್ರ ಅಭ್ಯರ್ಥಿ ಎಂದು ಮಲ್ಯ ಹೇಳಿಕೆ ನೀಡಿದ್ದರು. ಈ ವೇಳೆ ಜಾತ್ಯತೀತ ಜನತಾದಳ (ಜೆಡಿಎಸ್) ಪ್ರಮುಖ ಪಾತ್ರ ವಹಿಸಿತ್ತು. ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ ಕನ್ನಡಿಗ ಎಂಬ ಕಾರಣಕ್ಕೆ ಮಲ್ಯ ಪರವಾಗಿ ನಿಂತುಕೊಂಡಿತ್ತು.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಆದರೆ ಇಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕರಾಗಿರುವ ಜಗದೀಶ್ ಶೆಟ್ಟರ್ ಮಲ್ಯ ಆಯ್ಕೆ ಬಗ್ಗೆ ನೊಂದು ನುಡಿಯುತ್ತಾರೆ. ಜನಸೇವೆ ಮಾಡುತ್ತಾರೆ ಎಂಬ ಕಾರಣಕ್ಕೆ ಆರಿಸಿ ಕಳಿಸಿದರೆ ಅವರೊಬ್ಬ ಸುಸ್ತಿದಾರರಾಗಿ ಹೊರಹೊಮ್ಮಿದ್ದು ದುರ್ದೈವ ಎಂದು ಹೇಳುತ್ತಾರೆ.

ವಿಜಯ್ ಮಲ್ಯ ಪರಾರಿಯಾಗಲು ಎನ್ ಡಿಎ ಕಾರಣ ಎಂದು ಕಾಮಘ್ರೆಸ್ ಗಂಭೀರ ಆರೋಪವನ್ನು ಮಾಡಿದೆ. ಬಿಜೆಪಿ ಸಹ ಇದಕ್ಕೆ ಉತ್ತರ ನೀಡಿದ್ದು ನಿಮ್ಮ ಆಳ್ವಿಕೆ ವೇಳೆ ಯಾರು ಯಾರು ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂಬುದನ್ನು ಲೆಕ್ಕ ಮಾಡಿಎಂದು ಪ್ರತಿ ಸವಾಲು ಹಾಕಿದ್ದಾರೆ. ಇನ್ನೊಂದೆಡೆ ಟ್ವಿಟ್ ಮಾಡಿರುವ ಮಲ್ಯ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Vijay Mallya: A faded star
English summary
In the years 2002 and 2010, politicians in Karnataka made a beeline for Vijay Mallya, the former UB group chairman and ensured that he was elected to the Rajya Sabha. While at that time leaders of political parties in Karnataka justified their decision to elect him as Rajya Sabha member, today the tables have turned.
Please Wait while comments are loading...