Get Updates
Get notified of breaking news, exclusive insights, and must-see stories!

ಶೃಂಗೇರಿ: ವಿಧುಶೇಖರ ಭಾರತಿ ಸ್ವಾಮೀಜಿ ಹೊಸ ಜಗದ್ಗುರು

ಶೃಂಗೇರಿ, ಜ.23: ಋಷ್ಯಶೃಂಗರ ತಪೋಭೂಮಿ,ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಶಾರದಾಂಬಾ ದೇವಿಯ ದೇವಾಲಯ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಇಂದು ಐತಿಹಾಸಿಕ ದಿನ.

ಶ್ರೀ ಶಾರದಾ ಪೀಠದ 37ನೇ ಪೀಠಾಧಿಪತಿಯಾಗಿ ಆಯ್ಕೆಯಾಗಿದ್ದ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮ ಅವರು ಜ.23ರಂದು ಸನ್ಯಾಸ ಸ್ವೀಕರಿಸಿದರು. ಭಾರತೀ ತೀರ್ಥ ಸ್ವಾಮೀಜಿಗಳು ಶಿಷ್ಯ ಪರಿಗ್ರಹ ಕಾರ್ಯಕ್ರಮದಲ್ಲಿ ಸನ್ಯಾಸತ್ವ ನೀಡಿ 'ವಿಧುಶೇಖರ ಭಾರತಿ' ಎಂಬ ನಾಮಧೇಯವನ್ನು ನೀಡಿದ್ದಾರೆ.

ವೆಂಕಟೇಶ್ವರ ಪ್ರಸಾದ ಶರ್ಮ: ಶೃಂಗೇರಿ ಮಠದ ಉತ್ತರಾಧಿಕಾರಿಯಾಗಿರುವ ವಿಧುಶೇಖರ ಭಾರತಿ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು. ಕುಪ್ಪಾ ವೆಂಕಟೇಶ್ವರ ಪ್ರಸಾದ್. ವೇದಮೂರ್ತಿ ಶಿವಸುಬ್ರಹ್ಮಣ್ಯ ಅವಧಾನಿ ಹಾಗೂ ಸೀತಾ ದಂಪತಿಗಳ ಪುತ್ರ.[ಶೃಂಗೇರಿ ಶಾರದಾ ಪೀಠದ ಗುರು ಪರಂಪರೆ]

Vidhushekara Bharati is the next anointed Jagadguru of Sringeri Sharada Peetham

ಅವಧಾನಿಗಳು ಪ್ರಸ್ತುತ ತಿರುಮಲ ತಿರುಪತಿಯ ಧರ್ಮಗಿರಿ ಪಾಠ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಲಿದ್ದಾರೆ. ವೇದವಿದ್ಯಾ ಪಾರಂಗತರಾದ ಅವಧಾನಿಗಳಿಗೆ ದೊಡ್ಡ ಸಂಖ್ಯೆಯ ಶಿಷ್ಯಸಮೂಹವಿದ್ದು ಅಂಥ ಪಂಡಿತೋತ್ತಮರ ಪುತ್ರರಾದ ವೆಂಕಟೇಶ್ವರ ಪ್ರಸಾದ್ ರವರು ಕೆಲ ಕಾಲದವರೆಗೆ ತಿರುಪತಿಯಲ್ಲಿಯೇ ವೇದಾಧ್ಯಯನದಲ್ಲಿ ತೊಡಗಿದ್ದು ಕಳೆದ ಐದುವರ್ಷಗಳಿಂದ ಶೃಂಗೇರಿಯಲ್ಲಿ ನೆಲೆಸಿ ವೇದಾಧ್ಯಯನದಲ್ಲಿ ತೊಡಗಿದ್ದಾರೆ.

ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ಈ ಶುಭ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮಿತ ಭಾಷಿಯೂ, ಸದಾ ಅಧ್ಯಯನಶೀಲರೂ ಆಗಿರುವ ವೆಂಕಟೇಶ್ವರ ಪ್ರಸಾದರಿಗೆ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳೇ ವೈಯುಕ್ತಿಕವಾಗಿ ಪಾಠ ಮಾಡುತ್ತಿರುವುದು ವಿಶೇಷವಾಗಿದೆ. ಯಾರಿಗಾಗಲೀ ಶ್ರೀಗಳು ಸ್ವತಃ ಪಾಠ ಮಾಡುವುದು ವಿರಳವಾಗಿದ್ದು ವೆಂಕಟೇಶ್ವರಪ್ರಸಾದರಲ್ಲಿನ ಅಗಾಧ ಪ್ರತಿಭಾ ಶಕ್ತಿಯು ಶ್ರೀಗಳ ದೃಷ್ಟಿಗೆ ಬಿದ್ದಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.. ನ್ಯಾಯಶಾಸ್ತ್ರ, ಮೀಮಾಂಸೆ, ವೇದಾಂತ ಶಾಸ್ತ್ರಗಳಲ್ಲಿ ಇವರು ಪಾಂಡಿತ್ಯಸಾಧಿಸುತ್ತಲ್ಲಿದ್ದಾರೆ.['ಅದ್ವೈತ' ಸನ್ಯಾಸಿಗಳ 'ದಶನಾಮ' ಮೂಲ ಹುಡುಕುತ್ತಾ...]

ಶ್ರೀಮಠದಲ್ಲಿ ಗುರು-ಶಿಷ್ಯ ಪರಂಪರೆಗೆ ಅತ್ಯಂತ ಉನ್ನತ ಸ್ಥಾನವಿದ್ದು, 40 ವರ್ಷಗಳ ಹಿಂದೆ ನಾವು ಪಡೆದಿದ್ದ ಶಿಷ್ಯತ್ವ ಸ್ವೀಕಾರದಂತೆ ಇದೀಗ ನಮಗೆ ಶಿಷ್ಯ ಪರಿಗ್ರಹ ನೀಡುವ ಅವಕಾಶ ಒದಗಿ ಬಂದಿದೆ. ಸಕಲ ಸದ್ಗುಣಗಳನ್ನು ಹೊಂದಿರುವ ಶಿಷ್ಯನನ್ನು ನಾವು ಆಯ್ಕೆ ಮಾಡಿದ್ದು, 5-6 ವರ್ಷಗಳಿಂದ ಅವರಿಗೆ ಶಾಸ್ತ್ರಾಭ್ಯಾಸ ಪಾಠ ಕಲಿಸುತ್ತಿದ್ದೇವೆ ಎಂದು ಭಾರತೀ ತೀರ್ಥ ಸ್ವಾಮೀಜಿಗಳು ಉತ್ತರಾಧಿಕಾರಿ ಘೋಷಣೆಗೂ ಮುನ್ನ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+