ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ 28ರಿಂದ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ದಾಖಲಾತಿ ಪರಿಶೀಲನೆ

By Nayana
|
Google Oneindia Kannada News

ಬೆಂಗಳೂರು, ಜೂನ್‌ 27: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2018ನೇ ಸಾಲಿನ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ದಾಖಲೆ ಪರಿಶೀಲನೆಯನ್ನು ಜೂನ್‌ 28ರಂದು ಪ್ರಾರಂಭಿಸಲಿದೆ.

ದಾಖಲೆ ಪರಿಶೀಲನೆಯ ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ವೇಳಾಪಟ್ಟಿಯ ಪ್ರಕಾರ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.

ಪಿಜಿ ಮೆಡಿಕಲ್ ಶುಲ್ಕ ಶೇ.15ರಷ್ಟು ಹೆಚ್ಚಳ: ಸರ್ಕಾರಿ ಸೀಟಿಗೆ 5.6 ಲಕ್ಷ ಪಿಜಿ ಮೆಡಿಕಲ್ ಶುಲ್ಕ ಶೇ.15ರಷ್ಟು ಹೆಚ್ಚಳ: ಸರ್ಕಾರಿ ಸೀಟಿಗೆ 5.6 ಲಕ್ಷ

ಆದರೆ, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಜಿಯಲ್ಲಿ ಮಾಹಿತಿ ಬದಲಾವಣೆ ಮಾಡಿಕೊಂಡಿದ್ದಲ್ಲಿ ಅಥವಾ ಅಲ್ಪಸಂಖ್ಯಾತ, ಎನ್‌ಆರ್‌ಐ ಸೀಟುಗಳಿಗೆ ಅರ್ಹತೆ ಇದ್ದಲ್ಲಿ ಅಂತ ಅಭ್ಯರ್ಥಿಗಳು ಮಾತ್ರ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು. ಮಾಹಿತಿಗಾಗಿ ವೆಬ್‌ಸೈಟ್‌ ವೀಕ್ಷಿಸಬಹುದು.

Verification for medical courses from June 28

ಇದೀಗ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ನಿಗದಿ ಕುರಿತು ಚರ್ಚೆಗಳು ನಡೆಯುತ್ತಿವೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಭಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಶೇ.15ರಷ್ಟು ಹೆಚ್ಚಳ ಮಾಡಿದೆ.

ಆದರೆ, ಕಾಲೇಜುಗಳು ಶುಲ್ಕ ಹೆಚ್ಚಿಸಲಿದ್ದರೆ ಸರ್ಕಾರದೊಂದಿಗೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲವೆಂದು ಪಟ್ಟು ಹಿಡಿದಾಗ ಅಂತಿಮ ಕ್ಷಣದಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಶೇ.15ರಷ್ಟು ಶುಲ್ಕ ಹೆಚ್ಚಳದಿಂದ ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ 4.40 ಲಕ್ಷ ರೂ ಇರುವ ಸರ್ಕಾರಿ ಕೋಟಾದ ಪಿಜಿ ವೈದ್ಯಕೀಯ ಶುಲ್ಕ 5.06 ಲಕ್ಷ ರೂ ಗೆ ಹೆಚ್ಚಲಿದೆ. 6.60 ಲಕ್ಷ ರೂ ಇರುವ ಆಡಳಿತ ಮಂಡಳಿ ಕೋಟಾದ ವೈದ್ಯ ಸೀಟಿನ ಶುಲ್ಕ 7.59 ಲಕ್ಷ ರೂ ಆಗಲಿದೆ. ಅದೇ ರೀತಿ ಆಡಳಿತ ಮಂಡಳಿಯ ಡೆಂಟಲ್ ಸೀಟು ಶುಲ್ಕ ಪ್ರಸ್ತುತ 3.52 ಲಕ್ಷ ರೂ ಇದ್ದು, ಅದು 4.04ನ ಲಕ್ಷ ರೂಗೆ, ಸರ್ಕಾರಿ ದಂತ ವೈದ್ಯಕೀಯ ಸೀಟು 2.58 ಲಕ್ಷ ರೂ ಗೆ ಏರಲಿದೆ.

English summary
Karnataka Examination Authority will conduct document verification for medical and dental courses from June 28. Detailed time table for verification has been announced in KEA website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X