ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಹೊಸ್ತಿಲಲ್ಲಿ ಜಗಳ್ ಬಂದಿ, ಜನರಿಗೆ ಪುಕ್ಕಟೆ ಮನರಂಜನೆ!

|
Google Oneindia Kannada News

ಇನ್ನೇನು ಕರ್ನಾಟಕ ಚುನಾವಣೆ ಕಣ್ಣೆದುರು ಇದೆ. ಅದನ್ನು ಸೂಚಿಸುವಂತೆ ರಾಜ್ಯದ ಪ್ರಮುಖ ಪಕ್ಷಗಳ ನಾಯಕರು ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ. ಕೆಲ ಘಟನೆಗಳನ್ನು ಹಿನ್ನೆಲೆಯಾಗಿ ಏಕವಚನದ ಪ್ರಯೋಗ ಕೂಡ ನಡೆಯುತ್ತಿದೆ ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಎಂಬ ಯಾವುದೇ ವ್ಯತ್ಯಾಸವಿಲ್ಲದೇ ಎಲ್ಲ ಪಕ್ಷದಿಂದಲೂ ಮಾತಿನ ಕೂರುಂಬು ಪ್ರಯೋಗವಾಗಿದೆ.

ಈ ವಿಚಾರದಲ್ಲಿ ಮೊದಲು, ಎರಡನೇ ಸ್ಥಾನ ಎಂದು ನೀಡಬೇಕು ಅಂತೇನಾದರೂ ಅಂದುಕೊಂಡರೆ ಕೇಂದ್ರದಲ್ಲಿ ಕೌಶಲ ಖಾತೆಯ ರಾಜ್ಯ ಸಚಿವರಾಗಿರುವ -ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಮೊದಲ ಸ್ಥಾನ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೆಗಡೆ ಮಾಡುತ್ತಿರುವ ಟೀಕೆಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಪಾಪದಪಿಂಡ ಸಿದ್ದರಾಮಯ್ಯ ಹುಟ್ಟಿದ ಜಾಗದಲ್ಲೇ ಮುಗಿಸಿಬಿಡಿ: ಸಚಿವ ಹೆಗಡೆಪಾಪದಪಿಂಡ ಸಿದ್ದರಾಮಯ್ಯ ಹುಟ್ಟಿದ ಜಾಗದಲ್ಲೇ ಮುಗಿಸಿಬಿಡಿ: ಸಚಿವ ಹೆಗಡೆ

ಇನ್ನು ನಂತರದ ಸ್ಥಾನದಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಇದ್ದಾರೆ. ಸಿಎಂಗೆ ಪೈಪೋಟಿ ನೀಡುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಇದ್ದಾರೆ. ನಾನೇನು ಕಡಿಮೆ ಎಂಬಂತೆ ಕೆ.ಎಸ್.ಈಶ್ವರಪ್ಪನವರು ನಾಲಗೆಯನ್ನು ಕತ್ತಿಯಂತೆ ಬಳಸಿ ಇರಿಯುತ್ತಾರೆ. ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷದ ನಾಯಕರನ್ನು ಜರಿಯುತ್ತಾರೆ.

ಹೀಗೆ, ಇತ್ತೀಚೆಗೆ ತುಂಬ ಖಾರವಾದ ಮಾತುಗಳನ್ನಾಡಿದ ನಾಯಕರ ಹೇಳಿಕೆಗಳ ಪಟ್ಟಿಯನ್ನು ಇಲ್ಲಿ ಮಾಡಲಾಗಿದೆ.

ಅನಂತಕುಮಾರ ಹೆಗಡೆ

ಅನಂತಕುಮಾರ ಹೆಗಡೆ

ಸಿದ್ದರಾಮಯ್ಯ ಎಂಬ ಪಾಪದ ಪಿಂಡ ಎಲ್ಲಿ ಹುಟ್ಟಿದೆಯೋ ಅದನ್ನು ಅಲ್ಲೇ ಮುಗಿಸಬೇಕು. ಈ ಸರಕಾರ ಯಾರಿಗೂ ಬೇಡದ್ದಾಗಿದೆ. ಈ ಪಿಂಡವನ್ನು ಕಿತ್ತು ಹಾಕದಿದ್ದರೆ ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರೋದು ಕಷ್ಟ.

"ಸಿದ್ದರಾಮಯ್ಯ ವೋಟಿನ ಆಸೆಗೆ ಏನಬೇಕಾದ್ರು ಮಾಡುತ್ತಾರೆ. ವೋಟಿಗಾಗಿ ಯಾರು ಬೇಕೋ ಅವರ ಬೂಟ್‌ ಸಹ ನೆಕ್ಕುವ ಸ್ಥಿತಿಗೆ ತಲುಪಿದ್ದಾರೆ".

ಅನಂತಕುಮಾರ್ ಹೆಗಡೆ ಸಂಸದ ಆಗಲು ಸಹ ನಾಲಾಯಕ್: ಸಿದ್ದರಾಮಯ್ಯಅನಂತಕುಮಾರ್ ಹೆಗಡೆ ಸಂಸದ ಆಗಲು ಸಹ ನಾಲಾಯಕ್: ಸಿದ್ದರಾಮಯ್ಯ

ಯಡಿಯೂರಪ್ಪ

ಯಡಿಯೂರಪ್ಪ

ಸಿದ್ದರಾಮಯ್ಯ ಅವರು ನನ್ನನ್ನು ಕಂಡರೆ ಮೋದಿಗೆ ಭಯ ಎಂಬ ಹೇಳಿಕೆ ನೀಡುತ್ತಾರೆ. ಹಾಗೆ ನೋಡಿದರೆ ಮೋದಿ ಮುಂದೆ ಸಿದ್ದರಾಮಯ್ಯ ಬಚ್ಚಾ. ನಾಚಿಕೆ ಆಗಬೇಕು ನಿಮಗೆ.

'ಬಿ.ಆರ್.ಪಾಟೀಲ್ ಓರ್ವ ನಂಬಿಕೆ ದ್ರೋಹಿ, ಮೋಸಗಾರ, ಆತ ನನ್ನ ಹೆಸರು ಬಳಸಿ ಚುನಾವಣೆ ಗೆದ್ದಿದಾರೆ'

'ಎಂ.ಬಿ.ಪಾಟೀಲ್ ಸೊಕ್ಕಿನಿಂದ ಮೆರೆಯುತ್ತಿದ್ದಾನೆ, ಮುಖ್ಯಮಂತ್ರಿಯನ್ನು ಕಮಿಷನ್ ಏಜೆಂಟ್ ಎಂದರೆ ನೀನು ಮಾನನಷ್ಟ ಕೇಸ್ ಹಾಕ್ತೀಯಾ? ಏ.. ಎಂ ಬಿ ಪಾಟೀಲ ನಿಮ್ಮಂತವರನ್ನು ಬಾಳ ಜನರನ್ನು ನೋಡಿದ್ದೇನೆ ಇಂತಹ ಬೆದರಿಕೆಯನ್ನು ಬಿಟ್ಟುಬಿಡು ಮರಳಿನ ಜೊತೆಗೆ ಮಣ್ಣು ಸೇರಿಸಿ ಕೆಲಸ ಮಾಡಿಸಿರುವ ನಿನ್ನನ್ನು ದೇವರು ಕ್ಷಮಿಸೊದಿಲ್ಲ'

ಏ... ಎಂ.ಬಿ.ಪಾಟೀಲ ನಿನ್ನನ್ನು ಜೈಲಿಗೆ ಕಳಿಸಿಯೇ ತೀರುತ್ತೇನೆ: ಯಡಿಯೂರಪ್ಪಏ... ಎಂ.ಬಿ.ಪಾಟೀಲ ನಿನ್ನನ್ನು ಜೈಲಿಗೆ ಕಳಿಸಿಯೇ ತೀರುತ್ತೇನೆ: ಯಡಿಯೂರಪ್ಪ

ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ

"ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ. ನನ್ನ ಹಣ ಕಳೆದುಕೊಳ್ಳುವುದಕ್ಕೆ, ವರ್ಷಗಳ ಕಾಲ ಜೈಲಿನಲ್ಲಿ ಕಳೆಯುವುದಕ್ಕೆ ಅವರೇ ಕಾರಣ" .

ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ: ಗಾಲಿ ರೆಡ್ಡಿ ವಾಗ್ದಾಳಿಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ: ಗಾಲಿ ರೆಡ್ಡಿ ವಾಗ್ದಾಳಿ

ಈಶ್ವರಪ್ಪ

ಈಶ್ವರಪ್ಪ

"ಸಿದ್ದರಾಮಯ್ಯ ಗಂಡೋ, ಹೆಣ್ಣೋ? ಎಂಬ ಸಂಶಯ ಇದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯನನ್ನು ಗಂಡು ಅಂತಾ ಕರೀಬೇಕೋ ಹೆಣ್ಣು ಅಂತಾ ಕರೀಬೇಕೋ ಗೊತ್ತಿಲ್ಲ. ಆಂಜನೇಯ ಸಿಎಂ ಅವರ ನಾಯಿ. ಯಾವಾಗಲೂ ಅವರ ಬಾಲ ಹಿಡಿದುಕೊಂಡು ಹೋಗುತ್ತಿರುತ್ತಾರೆ. ಅವರ ಬಾಲ ಅಲ್ಲಾಡಿಸುವುದು ಇನ್ನೂ ನಾಲ್ಕೈದು ತಿಂಗಳು ಮಾತ್ರ".

ಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ: ಈಶ್ವರಪ್ಪ ವ್ಯಂಗ್ಯಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ: ಈಶ್ವರಪ್ಪ ವ್ಯಂಗ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

"ಬಿಎಸ್ ಯಡಿಯೂರಪ್ಪ ಅವರಿಗೆ ಬುದ್ಧಿ ಇಲ್ಲ. ಕೆಎಸ್ ಈಶ್ವರಪ್ಪಗೆ ಬುದ್ಧಿ ಮಾಂದ್ಯ. ಇನ್ನು ಅನಂತಕುಮಾರ್ ಹೆಗಡೆಗೆ ಸಂಸ್ಕಾರವೋ ಸಂಸ್ಕೃತಿಯೋ ಯಾವುದೂ ಗೊತ್ತಿಲ್ಲ. ಇವರೆಲ್ಲರಿಗೆ ನನ್ನನ್ನು ಕಂಡರೆ ಹೊಟ್ಟೆಕಿಚ್ಚು"

"ಸಂಸದ ನಳಿನ್ ಕುಮಾರ್ ಕಟೀಲ್ ಏನು ಮಾತಾಡುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಅವರಿಗೆ ಸ್ವಲ್ಪವೂ ಬುದ್ಧಿಯಿಲ್ಲ; ಸಂಸ್ಕಾರವಿಲ್ಲ,"

"ಅನಂತಕುಮಾರ್ ಹೆಗಡೆ ಸಚಿವರಾಗುವುದಕ್ಕಲ್ಲ, ಸಂಸದ ಆಗಲು ಸಹ ನಾಲಾಯಕ್".

ಸಿದ್ದರಾಮಯ್ಯ ವೋಟಿನಾಸೆಗೆ ಬೂಟು ನೆಕ್ತಾರೆ ಎಂದು ನಾಲಿಗೆ ಹರಿಬಿಟ್ಟ ಹೆಗಡೆಸಿದ್ದರಾಮಯ್ಯ ವೋಟಿನಾಸೆಗೆ ಬೂಟು ನೆಕ್ತಾರೆ ಎಂದು ನಾಲಿಗೆ ಹರಿಬಿಟ್ಟ ಹೆಗಡೆ

ಕೃಷ್ಣ ಬೈರೇಗೌಡ

ಕೃಷ್ಣ ಬೈರೇಗೌಡ

" ಬಿಜೆಪಿ ನಾಯಕರು ಸಂಸ್ಕಾರವನ್ನೇ ಮರೆತು ಮಾತನಾಡುತ್ತಿದ್ದಾರೆ. ಬಿಜೆಪಿ ಹಿಂದೂ ಧರ್ಮವನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದು, ಕೇವಲ ಹೆಸರಿಗೆ ಮಾತ್ರ ಹಿಂದೂ ಎಂದು ಹೇಳಿಕೊಳ್ಳುತ್ತಿದೆ. ಆದರೆ ಹಿಂದೂಗಳ ಸಂಸ್ಕೃತಿಯನ್ನು ಅದು ಪಾಲನೆ ಮಾಡುವುದಿಲ್ಲ"

ವೋಟಿಗಾಗಿ ಮಾತ್ರ ಹಿಂದೂ, ಹೆಗಡೆಗೆ ಕೃಷ್ಣ ಬೈರೆಗೌಡ ತಿರುಗೇಟುವೋಟಿಗಾಗಿ ಮಾತ್ರ ಹಿಂದೂ, ಹೆಗಡೆಗೆ ಕೃಷ್ಣ ಬೈರೆಗೌಡ ತಿರುಗೇಟು

ಸಿ.ಟಿ.ರವಿ

ಸಿ.ಟಿ.ರವಿ

"ನಮ್ಮ ಕಡೆ ಇಸ್ಪೀಟ್ ಆಡೋರು ಆಟದಲ್ಲಿ ಸೋಲಬಾರದು ಅಂತ ಯಂತ್ರ ಕಟ್ಟಿಸ್ತಾರೆ. ಹಾಗೇ ಸಿದ್ದರಾಮಯ್ಯ ಕೂಡ ಪರಮೇಶ್ವರ್ ಸೋಲಲಿ ಅಂತ ಯಂತ್ರ ಕಟ್ಟಿಸಿದ್ರಾ?"

ಸಿಟಿ ರವಿ- ಸಿದ್ದು ಮಧ್ಯೆ ಸದನದಲ್ಲಿ ಸ್ವಾರಸ್ಯಕರ ಚರ್ಚೆಸಿಟಿ ರವಿ- ಸಿದ್ದು ಮಧ್ಯೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ

ವಿ.ಶ್ರೀನಿವಾಸ್ ಪ್ರಸಾದ್

ವಿ.ಶ್ರೀನಿವಾಸ್ ಪ್ರಸಾದ್

ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಸಂಸ್ಕೃತಿ ಇಲ್ಲದ ಸಚಿವರಾಗಿದ್ದು, ತನ್ನ ಖಾತೆಯ ಕೆಲಸ ಮಾಡುವ ಬದಲು ಸಿದ್ದರಾಮಯ್ಯನ ಇಷ್ಟ ಕಷ್ಟಗಳನ್ನು ಪೂರೈಸುವ ಸೇವಕನಾಗಿದ್ದಾನೆ ಇಂತಹವರಿಂದ ರಾಜ್ಯದ ಅಭಿವೃದ್ದಿ ಸಾಧ್ಯವಿಲ್ಲ

ಸಿದ್ದರಾಮಯ್ಯ ಉಪಕಾರ ಸ್ಮರಣೆ ಇಲ್ಲದ ದುರಹಂಕಾರದ ಮನುಷ್ಯ: ಶ್ರೀನಿವಾಸ್ ಪ್ರಸಾದ್ಸಿದ್ದರಾಮಯ್ಯ ಉಪಕಾರ ಸ್ಮರಣೆ ಇಲ್ಲದ ದುರಹಂಕಾರದ ಮನುಷ್ಯ: ಶ್ರೀನಿವಾಸ್ ಪ್ರಸಾದ್

ರಮಾನಾಥ ರೈ

ರಮಾನಾಥ ರೈ

ಬಿಜೆಪಿಯ ಪರಿವರ್ತನಾ ಯಾತ್ರೆ ಪ್ರಾರಂಭದಲ್ಲೇ ವಿಫಲಗೊಂಡಿದೆ. ಸಭೆಗೆ ಜನ ಸೇರುವುದೂ ಕೂಡಾ ಕಡಿಮೆಯಾಗಿದೆ. ಸೀರೆ ಕೊಟ್ಟರೂ ಜನ ಪರಿವರ್ತನಾ ಯಾತ್ರೆ ಕಡೆಗೆ ಬರುತ್ತಿಲ್ಲ. ಇದರಿಂದ ಯಡಿಯೂರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡು ಏನೇನೋ ಮಾತನಾಡುತ್ತಿದ್ದಾರೆ.

ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಸಚಿವ ರಮಾನಾಥ ರೈಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಸಚಿವ ರಮಾನಾಥ ರೈ

ಯು.ಟಿ.ಖಾದರ್

ಯು.ಟಿ.ಖಾದರ್

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜಿಲ್ಲೆಗೆ ಬಂದು ಪಕ್ಷದ ವಿಚಾರ ತಿಳಿಸಿದರೆ ಯಾರಿಗೂ ಸಮಸ್ಯೆಯಿಲ್ಲ. ಆದರೆ ಸಿಎಂ ವಿರುದ್ಧ ಕೀಳಾಗಿ ಮಾತನಾಡುವುದು ಸರಿಯಲ್ಲ . ಚೆಕ್ ಮುಖಾಂತರ ದುಡ್ಡು ಸ್ವೀಕರಿಸಿದ್ದ ಯಡಿಯೂರಪ್ಪ , ಅವರೇ ನೇಮಿಸಿದ ಲೋಕಾಯುಕ್ತರ ಮೂಲಕ ಜೈಲಿಗೆ ಹೋದವರು.

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

ನನಗೆ ಬಸವನ ಬಾಲ ಬಡುಕ ಎಂದು ಸಮ್ಮೇಳನದಲ್ಲಿ ಅವಮಾನ ಮಾಡಿ ಚಂಪಾ ಅವರು ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಚಂಪಾ ಅವರು ಬಾಯಿ ಬಿಟ್ಟರೆ ಉಚ್ಚೆಯ ವಾಸನೆ ಬರುತ್ತದೆ.

ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ

"ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ಎರಡೂ ರಾಜಕೀಯ ಪ್ರೇರಿತ ಸಭೆಗಳು. ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳಲು ಎಂಟು ಕೋಟಿ ಹಣ ವ್ಯಯ ಮಾಡಿದ್ದಾರೆ. ಈ ಹಿಂದೆ ನಡೆದ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಇಷ್ಟು ಹಣ ಕೊಟ್ಟ ನಿದರ್ಶನಗಳು ನನ್ನ ಗಮನಕ್ಕೆ ಬಂದಿಲ್ಲ. ಸರಕಾರದ ಹಣವನ್ನು ಬಳಸಿಕೊಂಡು ಸಾಹಿತ್ಯದ ಹೆಸರಿನಲ್ಲಿ ರಾಜಕೀಯ ಸಮ್ಮೇಳನ ಮಾಡಿಕೊಂಡಿದ್ದಾರೆ"

English summary
Verbal war between political leaders ahead of Karnataka assembly polls. Here is the leaders like Ananth Kumar Hegade, Siddaramaiah, Yeddyurappa, HD Kumaraswamy personal attack statements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X