Vande Bharat Express: ನಾಳೆ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ!

ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸಂಚಾರ ಜೂನ್ 26ರಂದು ಆರಂಭವಾಗಲಿದೆ. ಇದಕ್ಕೆ ಮುಂಚಿತವಾಗಿ ರೈಲ್ವೆ ಇಲಾಖೆ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದೆ. ಜೂನ್ 19ರಂದು ಬೆಂಗಳೂರು- ಹುಬ್ಬಳ್ಳಿ-ಧಾರವಾಡ ನಡುವೆ ವಂದೇಭಾರತ್ ರೈಲು ಸಂಚಾರ ನಡೆಸಲಿದೆ.

ಇದು ಪ್ರಯಾಣಿಕರಿಗಾಗಿ ಮಾಡುತ್ತಿರುವ ಸಂಚಾರವಲ್ಲ ಬದಲಾಗಿ, ಟ್ರಯಲ್ ರನ್ ಆಗಿದೆ. ಈಗಾಗಲೇ ಬೆಂಗಳೂರು-ಅರಸೀಕೆರೆ ನಡುವೆ ಯಶಸ್ವಿಯಾಗಿ ಪ್ರಯೋಗಾತ್ಮಕ ಓಡಾಟ ನಡೆಸಿದೆ. ಇನ್ನು ಅರಸೀಕೆರೆಯಿಂದ ಹುಬ್ಬಳ್ಳಿ, ಧಾರವಾಡ ನಡುವೆ ರೈಲು ಸಂಚಾರ ನಡೆಯಲಿದೆ. 8 ಬೋಗಿಗಳನ್ನು ಹೊಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ ಸ್ಪೀಡ್ ರೈಲು ಎನಿಸಿಕೊಂಡಿದೆ.

Vande Bharat

ಜೂನ್ 19ರಿಂದ ಜೂನ್ 25ರವರೆಗೆ ಒಂದು ವಾರಗಳ ಕಾಲ ಪ್ರಯೋಗಾತ್ಮಕ ಸಂಚಾರ ನಡೆಯಲಿದೆ. ಜೂನ್ 26ರಂದು ಅಧಿಕೃತವಾಗಿ ಸಂಚಾರ ಆರಂಭಿಸಲಿದೆ. ಸೋಮವಾರ ಬೆಳಗ್ಗೆ 5.45ಕ್ಕೆ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು ರಾತ್ರಿ 8.10ಕ್ಕೆ ಬೆಂಗಳೂರು ತಲುಪಲಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನಿಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಸೀಕೆರೆಗೆ 2 ಗಂಟೆಯ ಪ್ರಯಾಣ

ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು-ಅರಸೀಕೆರೆ ನಡುವೆ ಯಶಸ್ವಿಯಾಗಿ ಪ್ರಯೋಗಾತ್ಮಕ ಓಡಾಟ ನಡೆಸಿದೆ. ಕೇವಲ ಎರಡು ಗಂಟೆಗಳಲ್ಲಿ ಅರಸೀಕೆರೆಗೆ ತಲುಪಿರುವುದಾಗಿ ವರದಿಯಾಗಿದೆ. ಅರಸೀಕೆರೆಯಿಂದ ಧಾರವಾಡದವರೆಗೆ ಸೋಮವಾರ ಸಂಚಾರ ನಡೆಯಲಿದೆ. ಇನ್ನು ಎರಡು-ಮೂರು ದಿನಗಳಲ್ಲಿ ರೈಲು ವೇಳಾಪಟ್ಟಿ ಮತ್ತು ಟಿಕೆಟ್ ದರ ನಿರ್ಧರಿಸುವುದಾಗಿ ಇಲಾಖೆ ಮೂಲಗಳು ಹೇಳಿವೆ.

ವಾರದಲ್ಲಿ ಆರು ದಿನ ಸಂಚರಿಸಲಿದ್ದು, ಬೆಂಗಳೂರು, ಯಶವಂತಪುರ, ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮಾತ್ರ ವಂದೇಭಾರತ್ ಎಕ್ಸ್‌ಪ್ರೆಸ್ ನಿಲುಗಡೆಯಾಗಲಿದೆ. ಸದ್ಯದ ಮಾಹಿತಿ ಪ್ರಕಾರ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಧಾರವಾಡಕ್ಕೆ ಪ್ರಯಾಣಿಸಲು 6.55 ಗಂಟೆ ಬೇಕಾಗುತ್ತದೆ. ಜನಶತಾಬ್ದಿ ಎಕ್ಸ್‌ಪ್ರೆಸ್ ಸದ್ಯ 7 ಗಂಟೆ ತೆಗೆದುಕೊಳ್ಳುತ್ತದೆ. ಸಾಮಾನ್ಯ ರೈಲುಗಳಲ್ಲಿ ಪ್ರಯಾಣದ ಅವರು 9-10 ಗಂಟೆಗಳಾಗಿದೆ.

ಸದ್ಯ ಬೆಂಗಳೂರು -ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ 8 ಬೋಗಿಗಳನ್ನು ಮಾತ್ರ ಹೊಂದಿರುತ್ತದೆ. ಒಟ್ಟು 530 ಪ್ರಯಾಣಿಕರು ಸಂಚರಿಸಬಹದಾಗಿದೆ. 16 ಬೋಗಿಗಳನ್ನು ಅಳವಡಿಸಲು ಅವಕಾಶ ಇದ್ದರೂ, ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸದ್ಯ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದರೂ, ಧಾರವಾಡ-ಬೆಂಗಳೂರು ನಡುವೆ ಚಲಿಸುವ ರೈಲು, 110 ಕಿಮೀ ವೇಗದಲ್ಲಿ ಮಾತ್ರ ಚಲಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+