ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತದಲ್ಲಿ ಲೀನವಾದ ಸಾರಸ್ವತ ಲೋಕದ ಕೀರ್ತಿ

|
Google Oneindia Kannada News

ಬೆಂಗಳೂರು, ಆ.23 : ಶುಕ್ರವಾರ ಸಂಜೆ ನಿಧನಹೊಂದಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಅಂತ್ಯಸಂಸ್ಕಾರ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಶನಿವಾರ ಸಂಜೆ ಸಕಲ ಸರ್ಕಾರಿ ಗೌರವ ಮತ್ತು ಸಂಪ್ರದಾಯದಂತೆ ನಡೆಯಿತು. ಅನಂತಮೂರ್ತಿ ಅವರ ಪುತ್ರ ಶರತ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಮಾಧ್ವ ಸಂಪ್ರದಾಯದಂತೆ ಯುಆರ್‌ಎ ಅಂತಿಮ ಸಂಸ್ಕಾರ ನೆರವೇರಿತು.

ಸಮಯ 4.10 : ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರ ಅಂತ್ಯಗೊಂಡಿದೆ. ಯುಆರ್‌ಎ ಪುತ್ರ ಶರತ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

siddaramaiah

ಸಮಯ 4 ಗಂಟೆ : 15 ಪುರೋಹಿತರಿಂದ ಧಾರ್ಮಿಕ ವಿಧಿ-ವಿಧಾನಗಳ ನೇತೃತ್ವ. ಕುಟುಂಬ ವರ್ಗದವರಿಗೆ ಮಾತ್ರ ಪಾರ್ಥಿವ ಶರೀರಿದ ಬಳಿ ಪ್ರವೇಶ. ಕಾರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ.

ಸಮಯ 3.00 : ಅಂತ್ಯಕ್ರಿಯೆ ವಿಧಿ-ವಿಧಾನಗಳು ಆರಂಭ, ಅನಂತಮೂರ್ತಿ ಪುತ್ರ ಶರತ್‌ರಿಂದ ಕಾರ್ಯಗಳು ಆರಂಭ.

Kalagrama

ಸಮಯ 2.30 : ಅನಂತಮೂರ್ತಿ ಅವರ ಪಾರ್ಥಿವ ಶರೀರ ಕಲಾಗ್ರಾಮ ತಲುಪಿದೆ. ಮೊದಲು ಪೊಲೀಸರು ಸಕಲ ಸರ್ಕಾರಿ ಗೌರವ ಸಲ್ಲಿಸಲಿದ್ದು, ನಂತರ ಅಂತ್ಯಕ್ರಿಯೆ ಧಾರ್ಮಿಕ ವಿಧಿ-ವಿಧಾನಗಳು ಆರಂಭವಾಗಲಿವೆ.

ಮಧ್ಯಾಹ್ನ 2 ಗಂಟೆ : ರವೀಂದ್ರ ಕಲಾಕ್ಷೇತ್ರದಿಂದ ಹೊರಟ ಪಾರ್ಥಿವ ಶರೀರ, ಕೆಲವು ಗಂಟೆಗಳಲ್ಲಿ ಕಲಾಗ್ರಾಮಕ್ಕೆ ತೆರಳುವ ಸಾಧ್ಯತೆ. [ಅನಂತಮೂರ್ತಿ ಅಂತಿಮ ನಮನದ ಚಿತ್ರಗಳು]

ಮಧ್ಯಾಹ್ನ 1 ಗಂಟೆ : ಕಲಾಗ್ರಾಮದಲ್ಲಿ ನಡೆಯುವ ಅನಂತಮೂರ್ತಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. 50 ಕೆಜಿ ಶ್ರೀಗಂಧ, 75 ಕೆಜಿ ತುಪ್ಪ ಸೇರಿದಂತೆ ವಿವಿಧ ವಸ್ತುಗಳನ್ನು ಕಲಾಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ. ಸಂಜೆ 4 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

12 ಗಂಟೆ : ಧಾರ್ಮಿಕ ವಿಧಿವಿಧಾನದಂತೆ ಅನಂತಮೂರ್ತಿ ಅವರು ಅಂತ್ಯಕ್ರಿಯೆ ನಡೆಯಲಿದೆ. ಅನಂತಮೂರ್ತಿ ಪುತ್ರ ಶರತ್ ಇವುಗಳನ್ನು ನೆರವೇರಿಸಲಿದ್ದು, ಪುರೋಹಿತರ ತಂಡ ಅಂತ್ಯಕ್ರಿಯೆಯ ತಯಾರಿಯಲ್ಲಿ ತೊಡಗಿದೆ.

ಸಮಯ 11 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಉಮಾಶ್ರೀ, ಆರ್.ವಿ.ದೇಶಪಾಂಡೆ, ಎಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ ಅವರು ಅನಂತಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದು, ಅನಂತಮೂರ್ತಿ ಅವರ ಪತ್ನಿ ಎಸ್ತಾರ್, ಪುತ್ರ ಶರತ್ ಮತ್ತು ಪುತ್ರಿ ಅನುರಾಧ ಅವರಿಗೆ ಸಾಂತ್ವನ ಹೇಳಿದ್ದಾರೆ.

ಸಮಯ 10 ಗಂಟೆ : ಅನಂತಮೂರ್ತಿ ಅವರ ನಿವಾಸ ಸುರಗಿಯಿಂದ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದತ್ತ ತೆಗೆದುಕೊಂಡು ಹೋಗಲಾಗುತ್ತಿದೆ. ಮಧ್ಯಾಹ್ನ ಎರಡು ಗಂಟೆಯ ತನಕ ಅಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.

ಸಮಯ 9.30 : ಯು.ಆರ್.ಅನಂತಮೂರ್ತಿ ಅವರು ತಮ್ಮ ಅಂತಿಮ ಆಸೆಯನ್ನು ಪುತ್ರ ಶರತ್ ಬಳಿ ಹಂಚಿಕೊಂಡಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿ ಮತ್ತು ಹುಟ್ಟೂರು ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ ಅಂತ್ಯಕ್ರಿಯೆ ಮಾಡಬೇಕೆನ್ನುವುದು ಅನಂತಮೂರ್ತಿ ಅವರ ಅಂತಿಮ ಆಸೆಯಾಗಿತ್ತು. ತಮ್ಮ ಹುಟ್ಟಿದ ಮನೆಯನ್ನು ಗ್ರಂಥಾಲಯ ಮಾಡಬೇಕೆಂದು ಅವರು ಬಯಸಿದ್ದರು. ಆದರೆ, ಅನಿವಾರ್ಯ ಕಾರಣದಿಂದಾಗಿ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

Ananthamurthy

ಸಮಯ 9 ಗಂಟೆ : ಅನಂತಮೂರ್ತಿ ಅವರ ಪಾರ್ಥಿವ ಶರೀರವನ್ನು ಅವರ ಡಾಲರ್ಸ್‌ ಕಾಲೋನಿಯ ಸುರಗಿ ನಿವಾಸದಲ್ಲಿ ಇಡಲಾಗಿದ್ದು, ಸಾಹಿತಿಗಳು, ರಾಜಕಾರಣಿಗಳು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅನಂತಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದ ಸಮೀಪದ ಸಂಸದ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, 10 ಗಂಟೆ ಸುಮಾರಿಗೆ ಅಲ್ಲಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ. [ಕನ್ನಡದ 'ಆಚಾರ್ಯ' ಅನಂತಮೂರ್ತಿ ವ್ಯಕ್ತಿಚಿತ್ರ]

UR Ananthamurthy

ಸಂಸ ಬಯಲು ರಂಗಮಂದಿರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ನಂತರ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದ್ದು ಸಂಜೆ 4 ಗಂಟೆಯ ವೇಳೆಗೆ ಪಾರ್ಥಿವ ಶರೀರ ಕಲಾಗ್ರಾಮ ತಲುಪುವ ಸಾಧ್ಯತೆ ಇದೆ. [ಅನಂತಮೂರ್ತಿ ನಿಧನಕ್ಕೆ ಗಣ್ಯರ ಸಂತಾಪ]

English summary
Jnanpith awardee and renowned Kannada writer U.R.Anantha Murthy funeral held at Karnataka Kalagrama, Jnanabharathi campus, Bangalore University on Saturday, August 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X