• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಂದು ಪೈಸೆಯನ್ನೂ ತಗೊಳ್ಳಲ್ಲ!

|
Google Oneindia Kannada News

ಬೆಂಗಳೂರು, ಆ. 05: ಸಾಧನೆ ಯಾರೊಬ್ಬರ ಸೊತ್ತು ಅಲ್ಲ. ಅದು ಸಾಧಕರ ಸೊತ್ತು ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಇಡೀ ದೇಶಾದ್ಯಂತ ಸಾಬೀತಾಗಿದೆ. ಅನೇಕ ಯುವಕ-ಯುವತಿಯರು ತಮ್ಮ ಎಲ್ಲಾ ಕಷ್ಟಗಳನ್ನು ಬದಿಗೊತ್ತಿ ಪ್ರತಿಷ್ಠಿತ ಯುಪಿಎಎಸ್‌ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ.

ಬಹುಶಃ ನಮ್ಮ ದೇಶದಲ್ಲಿ ಪ್ರಭಾವಿಗಳ ಪ್ರಭಾವ ನಡೆಯದ ಸಂಸ್ಥೆಯೊಂದಿದ್ದರೆ ಅದು ಯುಪಿಎಸ್‌ಸಿ ಬೋರ್ಡ್‌ ಮಾತ್ರ. ಹೀಗಾಗಿ ಅಲ್ಲಿ ಸಾಧನೆಯೊಂದೇ ಲೆಕ್ಕಕ್ಕೆ ಬರುತ್ತದೆ. ಹೀಗೆ ಅತ್ಯಂತ ಕೆಳ ಮಟ್ಟದಿಂದ ಬರುವ ಯುವಕ-ಯುವತಿಯರಲ್ಲಿ ಒಂದಿಷ್ಟು ಅಧಿಕಾರಗಳು ಕೊನೆಯವರೆಗೂ ಪ್ರಾಮಾಣಿಕರಾಗಿಯೇ ಇರುತ್ತಾರೆ. ಶಾಮಿಯಾನಾ ಹಾಕುತ್ತ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರ ಮಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ತಾವು ಓದಿದ್ದು ಕೇವಲ 3ನೇ ತರಗತಿ ಆದರೂ ಮಗನನ್ನು ಐಎಎಸ್ ಆಫೀಸರ್ ಮಾಡುವ ಕನಸನ್ನು ನನಸು ಮಾಡಿದ್ದಾರೆ.

ಯುಪಿಎಸ್ ಸಿ ಫಲಿತಾಂಶ; ಕರ್ನಾಟಕದಿಂದ rank ಪಡೆದವರು ಇವರು...ಯುಪಿಎಸ್ ಸಿ ಫಲಿತಾಂಶ; ಕರ್ನಾಟಕದಿಂದ rank ಪಡೆದವರು ಇವರು...

ತಂದೆಯ ಕನಸು

ತಂದೆಯ ಕನಸು

ಇದು ಮಗನ ಸಾಧನೆಯೊ ಅಥವಾ ಅಪ್ಪನ ಸಾಧನೆಯೊ ಎಂಬು ಹೇಳುವುದು ಮಾಡುವುದು ಕಷ್ಟ. ತಂದೆಯ ಉದ್ಯೋಗ ಸಭೆ, ಸಮಾರಂಭಗಳಲ್ಲಿ ಶಾಮಿಯಾನಾ ಹಾಕುವುದು. 3ನೇ ತರಗತಿ ಓದಿರುವ ತಂದೆ, ರಾಜಕಾರಣಿಗಳ ಕಾರ್ಯಕ್ರಮಗಳ ಸಂದರ್ಭದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೋಡುತ್ತಿದ್ದರು. ಆ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲನೆ ಮಾಡುತ್ತಿದ್ದ ಐಪಿಎಸ್ ಅಧಿಕಾರಿಗಳು, ಜೊತೆಗೆ ಇರುತ್ತಿದ್ದ ಜಿಲ್ಲಾಧಿಕಾರಿಗಳನ್ನು ನೋಡುತ್ತಿದ್ದ ತಂದೆಗೆ ತನ್ನ ಮಗ ಹೀಗೆ ದೊಡ್ಡ ಅಧಿಕಾರಿ ಆಗಬೇಕು ಎಂಬ ಕನಸು.

ದೊಡ್ಡ ಅಧಿಕಾರಿ ಆಗಲು ಏನು ಓದಬೇಕು ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದಿದ್ದು ಐಎಎಸ್ ಪರೀಕ್ಷೆ ಎಂಬ ಕಠಿಣ ಸವಾಲು. ಅದೆಲ್ಲ ನಮ್ಮಂಥವರಿಂದ ಆಗದ ಮಾತು ಬಿಡಿ ಎಂದವರಿಗೆ ಕಡಿಮೆ ಏನಿಲ್ಲ. ಆದರೆ ಪೆಂಡಾಲ್ ಹಾಕುತ್ತ ಊರಿಂದ ಊರಿಗೆ ಅಲೆಯುತ್ತಿದ್ದ, ಕೆಲ ಬಾರಿ ಅನೇಕ ಕಷ್ಟಗಳನ್ನೂ ಎದುರಿಸುತ್ತಿದ್ದ ವಿರೇಶ್ ಕಲಾದಗಿ ಎಂಬುವರು ಮಾತ್ರ ಕನಸು ನನಸು ಮಾಡಿಕೊಳ್ಳಲು ಪ್ರಯತ್ನ ಆರಂಭಿಸಿದರು. ಅದರ ಫಲವೇ ಪುತ್ರ ವಿರೇಶ್ ಕಲಾದಗಿ ಇದೀಗ ಯುಪಿಎಸ್‌ಸಿ ಪಾಸ್ ಮಾಡಿದ್ದಾರೆ.

ಯುಪಿಎಸ್ ಸಿ ಪರೀಕ್ಷೆ; ಕಡೂರಿನ ಯಶಸ್ವಿನಿಗೆ 71ನೇ rankಯುಪಿಎಸ್ ಸಿ ಪರೀಕ್ಷೆ; ಕಡೂರಿನ ಯಶಸ್ವಿನಿಗೆ 71ನೇ rank

ಹಳ್ಳಿ ಹುಡುಗ

ಹಳ್ಳಿ ಹುಡುಗ

ಹೌದು, ಬಾಗಲಕೋಟೆ ಜಿಲ್ಲೆ ಜಮಖಂಡಿ ಸಮೀಪದ ನಗರ ಸಮೀಪದ ಕಡಪಟ್ಟಿ ಗ್ರಾಮದ ರಾಜ್ ಪೆಂಡಾಲ್‍ನ ವಿರೇಶ ಕಲಾದಗಿ ಅವರ ಪುತ್ರ ಆನಂದ ಕಲಾದಗಿ ಯುಪಿಎಸ್‌ ಪರೀಕ್ಷೆಯಲ್ಲಿ 446ನೇ rank ಪಡೆದುಕೊಂಡಿದ್ದಾರೆ. ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸುತ್ತಿದ್ದಂತೆಯೇ ಆನಂದ ಕಲಾದಗಿ ಅವರು, ದೆಹಲಿಯಲ್ಲಿ ಕೋಚಿಂಗ್ ಪಡೆದುಕೊಂಡರು. ಮೊದಲ ಪ್ರಯತ್ನ ವಿಫಲ. ಈಗ ಎರಡನೇ ಪ್ರಯತ್ನದಲ್ಲಿ 446 rank ಪಡೆದು ತಂದೆಯ ಕನಸನ್ನು ಈಡೇರಿಸುವ ಮೂಲಕ ಈಗ ಐಎಎಸ್ ಹುದ್ದೆಯ ನೀರಿಕ್ಷೆಯಲ್ಲಿದ್ದಾರೆ.


ತಂದೆ ಸಾಕಷ್ಟು ತೊಂದರೆಯಲ್ಲಿದ್ದರು. ನನ್ನ ಮಗನ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗಬಾರದು ಎಂದು ಮಗ ಆನಂದನನ್ನು ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳದೆ, ಓದುವಂತೆ ಪ್ರೇರಣೆ ನೀಡಿದ್ದಾರೆ. ತಂದೆಗೆ ಹೆಸರು ತಂದಿದ್ದಕ್ಕೆ ಬಹಳ ಸಂತೋಷವಾಗಿದೆ ಎಂದು ತಾಯಿ ಸಮಿತ್ರಾ ಅವರು ಪುತ್ರನ ಸಾಧನೆ ಹೊಗಳಿದರು. ನನ್ನ ಮಗ ಐಎಎಸ್ ಆಫಿಸರ್ ಆಗಬೇಕು ಎಂದು ಕನಸನ್ನು ಕಟ್ಟಿಕೊಂಡು ಮಗನನ್ನು ಬೆಳೆಸಿದೆ. ಅದೇ ರೀತಿ ನನ್ನ ಕನಸನ್ನು ನನ್ನ ಮಗ ಇಡೆರಿಸಿದ್ದಾನೆ. ನನಗೆ ಬಹಳ ಖುಷಿಯಾಗಿದೆ ಎಂದು ವಿರೇಶ ಕಲಾದಗಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಇಷ್ಟಪಟ್ಟು ಓದಿದ್ದು

ಇಷ್ಟಪಟ್ಟು ಓದಿದ್ದು

ಯುಪಿಎಸ್ಸಿಗೆ ತಯಾರಿ ನಡೆಸುವ ಸಂದರ್ಭದಲ್ಲಿ ದಿನವೂ 7 ರಿಂದ 8 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಗುರಿ ಇಟ್ಟುಕೊಂಡು, ಇಷ್ಟಪಟ್ಟು ಓದಿದೆ. ಉನ್ನತ ಗುರಿ ಇಟ್ಟುಕೊಂಡು ಸಾಧನೆಗೆ ಮುಂದಾದರೆ ಏಳ-ಬಿಳು ಸಾಮಾನ್ಯ. ಆದರೆ ನಮ್ಮ ಗುರಿ ಮುಟ್ಟುವ ತನಕ ಸತತ ಪ್ರಯತ್ನ ಇಟ್ಟುಕೊಳ್ಳಲೇಬೇಕು. ಈ ನನ್ನ ಸಾಧನೆ ತಂದೆ-ತಾಯಿ ಅವರ ಪ್ರೇರಣೆಯಿಂದ ಸಾಧ್ಯವಾಗಿದೆ ಎನ್ನುತ್ತಾರೆ ಆನಂದ ಕಲಾದಗಿ.

ಜಮಖಂಡಿ ನಗರದ ತುಂಗಳ ಸಂಸ್ಥೆಯಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ಓದಿದ್ದು. ನಂತರ 2017ರಲ್ಲಿ ಬೆಳಗಾವಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಮುಗಿಸಿದ ಬಳಿಕ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ಆರಂಭಿಸಿದೆ. ಮೊದಲ ಪ್ರಯತ್ನದಲ್ಲಿ ಪ್ರಿಲಿಮಿನರಿ ಪರೀಕ್ಷೆಯನ್ನೂ ಪಾಸ್ ಮಾಡಲು ಆಗಲಿಲ್ಲ. ಇದೀಗ 2019ರಲ್ಲಿ ಮತ್ತೆ ಯುಪಿಎಸ್‌ಸಿ ಪರೀಕ್ಷೆ ಬರೆದು, 446 ಶ್ರೇಣಿ ಬಂದಿದೆ ಎಂದು ತಮ್ಮ ಸಂತೋಷವನ್ನು ಆನಂದ್ ಹಂಚಿಕೊಂಡರು.

ಮೈಸೂರು ಮೂಲದ ಯುವತಿಗೆ ಯುಪಿಎಸ್ ‌ಸಿಯಲ್ಲಿ 465ನೇ rankಮೈಸೂರು ಮೂಲದ ಯುವತಿಗೆ ಯುಪಿಎಸ್ ‌ಸಿಯಲ್ಲಿ 465ನೇ rank

ಡಾ. ರಾಜ್ ಬಗ್ಗೆ ಪ್ರಶ್ನೆ

ಡಾ. ರಾಜ್ ಬಗ್ಗೆ ಪ್ರಶ್ನೆ

ನನ್ನ ಈ ಶ್ರೇಣಿಗೆ ಐಎಎಸ್ ಹುದ್ದೆ ಸಿಗಬಹುದು. ಇಲ್ಲದಿದ್ದರೆ ಕಂದಾಯ ಇಲಾಖೆಯಲ್ಲಿ ಹುದ್ದೆ ನಿರೀಕ್ಷೆ ಇದೆ. ಓದುವುದಕ್ಕಿಂತ ಬರೆಯುವುದರತ್ತ ಹೆಚ್ಚು ಒತ್ತು ಕೊಡುತ್ತಿದ್ದೆ. ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ನಡೆಸಿದೆ. ಫೆಬ್ರುವರಿಯಲ್ಲಿ ಸಂದರ್ಶನ ಮುಗಿದಿದೆ. ಎರಡೂವರೆ ವರ್ಷಗಳಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದೆ. ಐಚ್ಚಿಕ ಕನ್ನಡ ವಿಷಯ ತೆಗೆದುಕೊಂಡಿದ್ದೆ. ಸಂದರ್ಶನದಲ್ಲಿ ಬೆಳಗಾವಿ ಘಟನಾವಳಿ, ಕನ್ನಡ ಸಾಹಿತ್ಯ, ಡಾ.ರಾಜ್ ಕುಮಾರ್ ಬಗ್ಗೆ ಪ್ರಶ್ನೆ ಕೇಳಿದರು.

ಪೈಸೆಯನ್ನೂ ತಗೊಳ್ಳಲ್ಲ

ಪೈಸೆಯನ್ನೂ ತಗೊಳ್ಳಲ್ಲ

ಇನ್ನು ಯುಪಿಎಸ್​ಸಿ ಪರೀಕ್ಷೆಯಲ್ಲಿ ಒಂದೇ ಒಂದು ಪೈಸೆ ತಗೆದುಕೊಳ್ಳೋದಿಲ್ಲ. ಸಾಮಾನ್ಯ ವಿದ್ಯಾರ್ಥಿಗಳು ಐಎಎಸ್ ಆಗಬಹುದು. ಸತತ ಪ್ರಯತ್ನವಿರಬೇಕು, ಗುಂಪಾಗಿರದೇ ವೈಯಕ್ತಿಕ ಓದಿನತ್ತ ಗಮನ ಕೊಡಬೇಕು. ಪಿಯುಸಿ ಮುಗಿಸಿದಾಗ ತಂದೆಯ ಪ್ರೇರಣೆಯಂತೆ ನನಗೆ ಐಎಎಸ್ ಬಗ್ಗೆ ಸ್ಪಷ್ಟತೆ ಸಿಕ್ಕಿತು.

2017ರಲ್ಲಿ ನಂದಿನಿ ಕೆ.ಆರ್. ಐಚ್ಚಿಕ ಕನ್ನಡ ವಿಷಯ ತೆಗೆದುಕೊಂಡು ಮೊದಲ rank ಪಡೆದಿದ್ದರು. ಹೀಗಾಗಿ ನನಗೆ ನಂದಿನಿ ಕೆ ಆರ್ ಸ್ಫೂರ್ತಿಯಾದರು. ನನ್ನ ಸಾಧನೆಯನ್ನು ತಂದೆ ತಾಯಿ ಅವರಿಗೆ ಅರ್ಪಿಸುತ್ತೇನೆ ಎಂದು ತಮ್ಮ ಸಂತಸವನ್ನು ಆನಂದ್ ಹಂಚಿಕೊಂಡರು.

ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಉತ್ತರ ಕನ್ನಡ ಜಿಲ್ಲೆಯಿಂದ ನಾಲ್ವರು ತೇರ್ಗಡೆಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಉತ್ತರ ಕನ್ನಡ ಜಿಲ್ಲೆಯಿಂದ ನಾಲ್ವರು ತೇರ್ಗಡೆ

English summary
Ananda Kalagagi, son of Virash Kalakagi of Raj Pendal of Kadapatti village near the city of Jamakhandi in Bagalkot district, has secured the rank of 446 in UPSC examination. Ananda Kalagagi, who was completing mechanical engineering, got coaching in Delhi. The first attempt failed. He is now under the purview of the IAS with his 446 rank on his second attempt and fulfilling his father's dream.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X