UPSC Prelims: ಮೇ 28 ರಂದು ಒಂದು ಗಂಟೆಗೂ ಮೊದಲೇ ನಮ್ಮ ಮೆಟ್ರೋ ಕಾರ್ಯಾರಂಭ- ವೇಳೆ ತಿಳಿಯಿರಿ
ಬೆಂಗಳೂರು, ಮೇ 28: ಮೇ 28 ರಂದು ( ಭಾನುವಾರ ) ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ಸಮಯವನ್ನು ಬದಲಾಯಿಸಿದೆ. ಒಂದು ಗಂಟೆಗೂ ಮೊದಲೇ ಮೆಟ್ರೋ ಕಾರ್ಯಾರಂಭ ಮಾಡಲು ನಿರ್ಧಿರಿಸಿದೆ.
ಭಾನುವಾರ, ಮೆಟ್ರೋ ಸೇವೆಗಳು ಸಾಮಾನ್ಯ ಆರಂಭದ ಸಮಯ 7 ಗಂಟೆಗೆ ಬದಲಾಗಿ 6 ಗಂಟೆಗೆ ಪ್ರಾರಂಭವಾಗಲಿವೆ. ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಸೇರಿದಂತೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯವನ್ನು ಪ್ರಕಟಿಸಲಾಗಿದೆ.

ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸುಗಮ ಪ್ರಯಾಣವನ್ನು ನೀಡುವ ಉದ್ದೇಶದಿಂದ ಪ್ರಾರಂಭದ ಸಮಯವನ್ನು ಒಂದು ಗಂಟೆಗೂ ಮುಂಚಿತವಾಗಿ ಕಾರ್ಯಾರಂಭ ಮಾಡಲು ನಿರ್ಧಾರಿಸಲಾಗಿದೆ. ಅಭ್ಯರ್ಥಿಗಳು ತಮ್ಮ ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಅನಾನುಕೂಲತೆ ಇಲ್ಲದಂತೆ ತಲುಪಲು ಈ ವಿಶೇಷ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಬೈಯಪ್ಪನಹಳ್ಳಿ-ಕೃಷ್ಣರಾಜಪುರ ಮೆಟ್ರೊ ವಿಭಾಗದ 2 ಕಿಲೋಮೀಟರ್ ದೂರದ ಮಾರ್ಗವನ್ನು ಜುಲೈ 15 ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಕೃಷ್ಣರಾಜಪುರ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗ, ನೇರಳೆ ಮಾರ್ಗದ ವಿಸ್ತರಣೆಯನ್ನು ಪ್ರಧಾನಿ ಇತ್ತೀಚೆಗೆ ಉದ್ಘಾಟಿಸಿದರು.

ಈ ಮಾರ್ಗವು 13.71 ಕಿಲೋಮೀಟರ್‌ಗಳಷ್ಟು ವ್ಯಾಪಿಸಿದ್ದು, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಬೈಯ್ಯಪ್ಪನಹಳ್ಳಿ ಮತ್ತು ಕೆಆರ್ ಪುರ ಮೆಟ್ರೊ ನಿಲ್ದಾಣದ ಸಂಪರ್ಕ ಕಡಿತಗೊಂಡು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಹೇಳಲಾಗುತ್ತಿದೆ.
ಯುಪಿಎಸ್‌ಇ ಪ್ರಿಲಿಮ್ಸ್
ಮೇ 28 ರಂದು ಸಿವಿಲ್ ಸರ್ವಿಸಸ್ ಪ್ರಿಲಿಮ್ಸ್ 2023 ಪರೀಕ್ಷೆಯನ್ನು ನಡೆಸಲು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) ಸಿದ್ಧವಾಗಿದೆ. ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸಲಾಗುವುದು. ಮುಂಜಾನೆ ಶಿಫ್ಟ್‌ನಲ್ಲಿ ಜಿಎಸ್‌ಐ ಮತ್ತು ಮಧ್ಯಾಹ್ನ ಪಾಳಿಯಲ್ಲಿ ಸಿಎಸ್‌ಎಟಿಯನ್ನು ನಡೆಸಲಾಗುವುದು. ಪರೀಕ್ಷೆಯಲ್ಲಿ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಅಧಿಕೃತ ವೆಬ್‌ಸೈಟ್ - upsconline.nic.in ಅಥವಾ upsc.gov.in ನಿಂದ ಡೌನ್‌ಲೋಡ್ ಮಾಡಬಹುದು.

ಪರೀಕ್ಷೆಯನ್ನು ಸ್ಥಳೀಯ ಪೊಲೀಸರ ಕಣ್ಗಾವಲು ಅಡಿಯಲ್ಲಿ ನಡೆಸಲಾಗುವುದರಿಂದ, ಪರೀಕ್ಷೆಯ ದಿನದಂದು ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಅನುಸರಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ಪ್ರವೇಶ ಪತ್ರದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಯ ದಿನದಂದು ತಮ್ಮ ಪ್ರವೇಶ ಕಾರ್ಡ್‌ನಲ್ಲಿ ನಮೂದಿಸಲಾದ ಫೋಟೋ ಐಡಿ ಪುರಾವೆಯನ್ನು ಒಯ್ಯುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳು ಎರಡು ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರಗಳನ್ನು ಕೊಂಡೊಯ್ಯಬೇಕಾಗುತ್ತದೆ. ಪರೀಕ್ಷಾ ಹಾಲ್‌ಗೆ ಪ್ರತಿ ಶಿಫ್ಟ್‌ಗೆ ಒಂದನ್ನು ತೋರಿಸಬೇಕಾಗುತ್ತದೆ. ಆದಾಗ್ಯೂ, ಪ್ರವೇಶ ಕಾರ್ಡ್‌ನಲ್ಲಿ ಮುದ್ರಿತ ಫೋಟೋ ಅಸ್ಪಷ್ಟವಾಗಿದ್ದರೆ ಮಾತ್ರ ಇವುಗಳನ್ನು ಬಳಸಲಾಗುತ್ತದೆ.
ಒಎಮ್‌ಆರ್ ಶೀಟ್‌ನಲ್ಲಿ ಉತ್ತರಗಳನ್ನು ಗುರುತಿಸಲು ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ಅನುಮತಿಸಲಾಗಿದೆ. ಮತ್ತೊಂದು ಬಣ್ಣದ ಪೆನ್ ಅನ್ನು ಬಳಸುವುದರಿಂದ ಅಭ್ಯರ್ಥಿಯ ಅನರ್ಹತೆಗೆ ಕಾರಣವಾಗುತ್ತದೆ.
ಅಭ್ಯರ್ಥಿಗಳು ಪರೀಕ್ಷೆಯ ಸಮಯಕ್ಕಿಂತ ಕನಿಷ್ಠ ಒಂದು ಗಂಟೆ ಮೊದಲು ಪರೀಕ್ಷಾ ಹಾಲ್‌ಗೆ ತಲುಪಲು ಸೂಚಿಸಲಾಗಿದೆ. ಪರೀಕ್ಷೆ ಪ್ರಾರಂಭವಾದ ನಂತರ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷಾ ಹಾಲ್‌ಗೆ ಅನುಮತಿಸಲಾಗುವುದಿಲ್ಲ.
ಪರೀಕ್ಷಾ ಹಾಲ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಮೊಬೈಲ್ ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳಂತಹ ಗ್ಯಾಜೆಟ್‌ಗಳನ್ನು ಅನುಮತಿಸಲಾಗುವುದಿಲ್ಲ.
ಅಭ್ಯರ್ಥಿಗಳು ನೀರಿನ ಬಾಟಲಿಗಳು, ಸಣ್ಣ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಗಳು ಮತ್ತು ಫೇಸ್ ಮಾಸ್ಕ್‌ಗಳನ್ನು ಪರೀಕ್ಷಾ ಹಾಲ್‌ಗೆ ಕೊಂಡೊಯ್ಯಲು ಅನುಮತಿಸಲಾಗಿದೆ.












Click it and Unblock the Notifications