ಎಲ್ಲೆಂದರಲ್ಲಿ ಸಿಗರೇಟ್ ತುಂಡುಗಳನ್ನು ಎಸೆಯುತ್ತಿದ್ದರೇ ಇಲ್ಲಿ ಗಮನಿಸಿ: ನಿಮ್ಮ ಈ ನಿರ್ಲಕ್ಷ್ಯಕ್ಕೆ ದಂಡ ಬೀಳಬಹುದು!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಕಳೆದ ವರ್ಷ ನವೆಂಬರ್‌ನಲ್ಲಿ ಸಿಗರೇಟ್ ಮತ್ತು ಬೀಡಿ ತುಂಡುಗಳ ವಿಲೇವಾರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

ಬೆಂಗಳೂರು , ಮಾರ್ಚ್ 08: ಆರಾಮಾಗಿ ಸಿಗರೇಟ್ ಸೇದಿ ದಾರಿಯಲ್ಲಿ, ಅಂಗಡಿಗಳ ಮುಂದಕ್ಕೆ ಹೇಗೆ ಬೇಕೋ ಹಾಗೆ ಎಸೆಯುತ್ತಿದ್ದರೇ ಇನ್ನು ಮುಂದೆ ಎಚ್ಚರವಹಿಸಿ. ನಿಮ್ಮ ಕೃತ್ಯಕ್ಕೆ ಕಡಿವಾಣ ಹಾಕಿ. ಏಕೆಂದರೆ ಈ ನಿಮ್ಮ ಕೆಲಸ ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ಹೌದು ಸಿಗರೇಟ್ ತುಂಡುಗಳನ್ನು ಎಲ್ಲಿಬೇಕೋ ಅಲ್ಲಿ ಎಸೆದರೇ ದಂಡ ವಿಧಿಸಲಾಗುತ್ತದೆ.

ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಿಗರೇಟ್ ತುಂಡುಗಳನ್ನು ನಿರ್ಲಕ್ಷದಿಂದ ಎಸೆಯುವ ಕಾರಣ, ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ದಂಡ ವಿಧಿಸಲು ಚಿಂತನೆ ನಡೆಸಿದೆ. ಕೆಎಸ್‌ಪಿಸಿಬಿ ಮಾರ್ಗಸೂಚಿಗಳನ್ನು ರೂಪಿಸಲು ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ತಂಬಾಕು ತಯಾರಕರು ಸೇರಿದಂತೆ ತಜ್ಞರ ಜೊತೆಗೆ ಸಭೆ ಕರೆದಿದೆ.

Unmindful Disposal of Cigarette Butts May Attract Fines

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಕಳೆದ ವರ್ಷ ನವೆಂಬರ್‌ನಲ್ಲಿ ಸಿಗರೇಟ್ ಮತ್ತು ಬೀಡಿ ತುಂಡುಗಳ ವಿಲೇವಾರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ರಚಿಸುವಂತೆ ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿದೆ. ಹೀಗಾಗಿಯೇ ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಮಾರ್ಚ್ 4 ರಂದು ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ತಂಬಾಕು ತಯಾರಕರಿಗೆ ನೋಟಿಸ್ ಕಳುಹಿಸಿದೆ.

ಸಿಪಿಸಿಬಿಯ ಪ್ರಮುಖ ಶಿಫಾರಸುಗಳನ್ನು ಉಲ್ಲೇಖಿಸಿದ ಸದಸ್ಯ ಕಾರ್ಯದರ್ಶಿ, ಸಿಗರೇಟ್ ಮತ್ತು ಬೀಡಿ ತಯಾರಕರು ತಮ್ಮ ವಿತರಣಾ ಘಟಕಗಳಲ್ಲಿ ಸಿಗರೇಟ್ ತುಂಡುಗಳ ಕಸದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ಸಿಗರೇಟ್ ಪ್ಯಾಕ್‌ನಲ್ಲಿ ಸುರಕ್ಷಿತ ವಿಲೇವಾರಿ ಸೂಚನೆಗಳನ್ನು ಸ್ಪಷ್ಟವಾಗಿ ಒದಗಿಸಬೇಕು ಎಂದು ಹೇಳಿದೆ.

Unmindful Disposal of Cigarette Butts May Attract Fines

ಸಿಗರೇಟ್ ತುಂಡುಗಳ ಕಸ ಹಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಮತ್ತು ಸ್ಥಳೀಯ ಅಧಿಕಾರಿಗಳು ಸಿಗರೇಟ್ ತುಂಡುಗಳನ್ನು ಹಾಕುವವರ ಮೇಲೆ ದಂಡ ವಿಧಿಸಲು ಚಿಂತಿಸಬೇಖು. ಈ ಬಗ್ಗೆ ದಂಡವನ್ನು ಜಾರಿಗೊಳಿಸಲು ಅವಕಾಶ ಕಲ್ಪಿಸುವುದು ಸಿಪಿಸಿಬಿಯ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ ಎಂದು ಸದಸ್ಯ ಕಾರ್ಯದರ್ಶಿ ಹೇಳಿದ್ದಾರೆ.

ಸಿಗರೇಟ್ ತುಂಡುಗಳನ್ನು ಎಲ್ಲಿಬೇಕೋ ಅಲ್ಲಿ ಎಸೆದರೇ ದಂಡ ಹಾಕುವುದು ಸೇರಿದಂತೆ ಹಲವು ವಿಷಯಗಳನ್ನು ಚರ್ಚೆ ಮಾಡಲು ಮಾರ್ಚ್ 15 ರಂದು ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ತಂಬಾಕು ತಯಾರಕರು ಸೇರಿದಂತೆ ತಜ್ಞರ ಜೊತೆಗೆ ಕೆಎಸ್‌ಪಿಸಿಬಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ಇನ್ನು, ನ್ಯೂಜಿಲೆಂಡ್‌ನಲ್ಲಿ 2008 ರ ನಂತರ ಜನಿಸಿದವರು ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಖರೀದಿಸದಂತೆ ಹೊಸ ಕಾನೂನು ಜಾರಿಗೆ ತರಲಾಗಿದೆ. ಇದರಿಂದ ಪ್ರಭಾವಿತವಾಗಿರುವ ರಾಜ್ಯ ಆರೋಗ್ಯ ಇಲಾಖೆಯು 2025 ರ ಹೊತ್ತಿಗೆ ಕರ್ನಾಟಕದಲ್ಲಿ ತಂಬಾಕು ಮುಕ್ತ ಪೀಳಿಗೆಯನ್ನು ರಚಿಸಲು ಇದೇ ಮಾದರಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+