ಜೆಡಿಎಸ್ ಪಂಚ ರತ್ನ ಹೆಸರು ಏಕೆ ಇಟ್ಟಿದ್ದಾರೆ? ಅದು ನವಗ್ರಹ ಯಾತ್ರೆ ಎಂದ ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ದಾರಿ ಮಧ್ಯದಲ್ಲಿ ಪಂಚರ್ ಆಗಲಿದೆ. ಅತೃಪ್ತಿ ಅಸಮಾಧಾನ ಕಾಂಗ್ರೆಸ್ ನಲ್ಲಿ ‌ತುಂಬಿ ತುಳುಕುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಒಗ್ಗಟ್ಟಾಗಿ ಇದ್ದೇವೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರು,ಫೆಬ್ರವರಿ4: ಜೆಡಿಎಸ್ ನಡೆಸುತ್ತಿರುವ ಯಾತ್ರೆಗೆ ಪಂಚರತ್ನ ಬದಲಾಗಿ ನವಗ್ರಹ ಯಾತ್ರೆ ಎಂದು ಹೆಸರಿಡಬೇಕಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಂಚ ರತ್ನ ಹೆಸರು ಏಕೆ ಇಟ್ಟಿದ್ದಾರೆ? ಎಂಬ ಬಗ್ಗೆ ಗೊಂದಲ ಆಗಿದೆ‌.ಜೆಡಿಎಸ್ ನಲ್ಲಿ ದೇವೇಗೌಡರು ಹಾಗೂ ಅವರ ಇಬ್ಬರು ಮಕ್ಕಳು. ಇಬ್ಬರು ಮಕ್ಕಳ ಹೆಂಡತಿಯರು. ಹಾಗೂ ಅವರ ಇಬ್ಬರು ಮಕ್ಕಳು, ಒಬ್ಬರು ಎಂಎಲ್ ಸಿ, ಮತ್ತೊಬ್ಬರು ಎಂಪಿ. ಲೆಕ್ಕ ಮಾಡಿದರೆ ಒಟ್ಟು ಒಂಬತ್ತು ಜನ ಇದ್ದಾರೆ. ಈ ನಿಟ್ಟಿನಲ್ಲಿ ಪಂಚ ರತ್ನ ಯಾತ್ರೆ ಬದಲಾಗಿ ನವ ಗೃಹ ಯಾತ್ರೆ ಎಂದು ಹೆಸರು ಇಡಬೇಕಿತ್ತು ಎಂದು ಲೇವಡಿ ಮಾಡಿದರು‌.

ದೇವೇಗೌಡರ ಮನೆಯಲ್ಲಿ ಬಡೆದಾಟ ನಡೆದಿತ್ತು. ಈ ಬಗ್ಗೆ ಹೈಕಮಾಂಡ್ ಬಗೆಹರಿಸುತ್ತೆ ಎನ್ನುತ್ತಾರೆ. ಆವರ ಹೈಕಮಾಂಡ್ ಎಲ್ಲಿ ಇರುವುದು? ಅವರ ಅಡಿಗೆ ಮನೆಯಲ್ಲೇ, ಕುಟುಂಬದಲ್ಲಿ ಒಟ್ಟಿಗೆ ಇರಲು ಯೋಗ್ಯತೆ ಇಲ್ಲ ಅಂದರೆ, ರಾಜ್ಯ ಉದ್ಧಾರ ಮಾಡ್ತಾರಾ? ಎಂದು ಪ್ರಶ್ನಿಸಿದರು.

Union Minister Pralhad Joshi Slams JDS Leaders HD Deve Gowda Family

ಇನ್ನೂ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮಾಡುತ್ತಾರೆ ಕಾಂಗ್ರೆಸ್. ಆದರೆ 60 ವರ್ಷಗಳಲ್ಲಿ 90 ಬಾರಿ ಚುನಾಯಿತ ರಾಜ್ಯ ಸರ್ಕಾರ ಕಿತ್ತು ಎಸಗಿದ್ದಾರೆ. ಪ್ರಜಾಪ್ರಭುತ್ವ ಕತ್ತು ಹಿಸುಕಿದವರು ಇವಾಗ ಪ್ರಜಾಧ್ವನಿ ಯಾತ್ರೆ ಮಾಡುತ್ತಾರೆ. ಕಾಂಗ್ರೆಸ್ ನಲ್ಲಿ ದಿನ ಬಡಿದಾಟ ನಡೆಯುತ್ತಿದೆ‌. ಇದು ಪ್ರಜಾಧ್ವನಿ ಯಾತ್ರೆ ಅಲ್ಲ, ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯ ಹುಡುಕುವ ಕಾರ್ಯಕ್ರಮ ಇದು. ಮುಖ್ಯಮಂತ್ರಿ ಆಗಿದ್ದವರಿಗೆ ತಮ್ಮ ಜಿಲ್ಲೆಯಲ್ಲಿ ನಿಂತು ಗೆಲ್ಲಲು ಯೋಗ್ಯತೆ ಇಲ್ಲ. ಇನ್ನು ರಾಜ್ಯಕ್ಕೆ ಬುದ್ದಿ ಹೇಳುತ್ತೀರಾ? ಎಂದು ವಾಗ್ದಾಳಿ ನಡೆಸಿದರು ‌

ಚಾಮುಂಡೇಶ್ವರಿಯಲ್ಲಿ ಏಕೆ ಸೋಲು ಅನುಭವಿಸಿದ್ದೀರಿ? ಅಲ್ಲಿ ಏನೂ ಕೆಲಸ ಮಾಡಿಲ್ಲ. ಜನರ ಧ್ವನಿ ಅರ್ಥವಾಗಿಲ್ಲ. ಅದಕ್ಕೆ ಸರ್ಜಿಕಲ್ ಸ್ಟ್ರೈಕ್ ಪ್ರಶ್ನೆ ಮಾಡುತ್ತೀರಿ ಎಂದು ಕಿಡಿಕಾರಿದರು‌. ಸಿದ್ದರಾಮಯ್ಯ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ಕಾಂಗ್ರೆಸ್ ಇತಿಹಾಸವನ್ನು ಗಮನಿಸಿದರೆ, ಇಂದಿರಾ ಗಾಂಧಿ ಚಿಕ್ಕಮಗಳೂರು ಬಂದರು. ಅಲ್ಲಿ ಕೈಕೊಟ್ರು. ಸೋನಿಯಾ ಬಳ್ಳಾರಿ ಬಂದರು, ಅಲ್ಲಿ ಕೈಕೊಟ್ರು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಕೈ ಕೊಟ್ಟರು‌. ಚಾಮುಂಡಿ ಶಾಪ ಕೊಟ್ರು. ಇವಾಗ ಬದಾಮಿಗೆ ಕೈಕೊಡುತ್ತಿದ್ದಾರೆ. ಅವರ ಚಿಹ್ನೆ ಪ್ರಕಾರ ಕೈಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+