ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?

Posted By:
Subscribe to Oneindia Kannada

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಸೇರಿದಂತೆ, ಈ ಹಿಂದೆ ಹಲವು ಬಾರಿ ಬುದ್ದಿ ಕಲಿಸಿದರೂ, ಹಿಂದಿಯನ್ನರು ಬುದ್ದಿ ಕಲಿಯುತ್ತಿಲ್ಲ, ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರಕಾರವೂ ಪಾಠ ಕಲಿಯುತ್ತಿಲ್ಲ. ಹೋಗಲಿ ಇಲ್ಲಿಗೆ ಬಂದು ಸೂರು ಕಟ್ಟುಕೊಂಡಿರುವ ಹಿಂದಿವಾಲಾಗಳು ಕನ್ನಡವನ್ನಾದರೂ ಕಲಿಯುತ್ತಿದ್ದಾರಾ.. ಅದೂ ಇಲ್ಲಾ.. ಬದಲಿಗೆ ನಮ್ಮವರೇ ಇತರ ಭಾಷೆಗಳನ್ನು ಕಲಿಯುತ್ತಿದ್ದಾರೆ ಎನ್ನುವುದು ಕೂಡಾ ಅಷ್ಟೇ ವಾಸ್ತವತೆ.

ಒಂದು ನಾಲ್ಕೈದು ರಾಜ್ಯಗಳಲ್ಲಿ ಹಿಂದಿ ವ್ಯಾವಹಾರಿಕ ಭಾಷೆಯಾಗಿದೆ ಎಂದು ಅದನ್ನೇ, ನಮ್ಮ ರಾಷ್ಟ್ರಭಾಷೆ ಎಂದು ವ್ಯವಸ್ಥಿತವಾಗಿ ಸುಳ್ಳು ಬೋಧನೆ ಮಾಡುವವರು ಸುತ್ತುವರಿದಿರುವ ಈ ಹೊತ್ತಿನಲ್ಲಿ, ಕನ್ನಡಿಗರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ, ಹಿಂದಿಯನ್ನರ ಕೈಗೆ ಎಕ್ಕಾ, ರಾಜಾ..ರಾಣಿ.. ಕನ್ನಡಿಗರ ಬಾಯಿಗೆ ಹಿಡಿಮಣ್ಣು ಗ್ಯಾರಂಟಿ.

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ: ಕರವೇ ವಿಶಿಷ್ಟ ಹೋರಾಟ

ವಿಚಾರಕ್ಕೆ ಬರುವುದಾದರೆ, ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ತಡೆಯುವಲ್ಲಿ ಬಹುತೇಕ ಯಶಸ್ವಿಯಾದ ಬೆನ್ನಲ್ಲೇ ಮತ್ತೊಂದು ಹೋರಾಟಕ್ಕೆ ಕನ್ನಡಿಗರು ಸಜ್ಜಾಗಬೇಕಾಗಿದೆ. ರಾಜ್ಯದಿಂದ ಕಾರ್ಯ ನಿರ್ವಹಿಸುವ ಗ್ರಾಮೀಣ ಬ್ಯಾಂಕುಗಳ 9ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

3ವರ್ಷದ ಹಿಂದೆ 10ನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಓದಿದವರಿಗೆ ಪ್ರಾತಿನಿಧ್ಯ ಸಿಗುತ್ತಿತ್ತು. ರಿಸರ್ವ್ ಬ್ಯಾಂಕ್ ಈಗ ಕೂಡಾ ಹೇಳುವುದು ಇದನ್ನೇ.. ಆದರೆ ಐಬಿಪಿಎಸ್ ( Institute of Banking Personnel Selection) ವ್ಯವಸ್ಥೆಯನ್ನು ಕೇಂದ್ರ ಸರಕಾರ ಜಾರಿಗೆ ತಂದ ನಂತರ, ಪರಿಸ್ಥಿತಿ ಹೇಗೆ ಬದಲಾಗಿದೆ ಅಂದರೆ, ಸ್ಥಳೀಯ ಭಾಷೆಯ ಅವಶ್ಯಕತೆ ಇಲ್ಲದೆಯೇ ಬರೀ ಹಿಂದಿ ಮತ್ತು ಇಂಗ್ಲಿಷ್ ಬಲ್ಲವರಿಗೆ ಮೊದಲ ಮಣೆಯಂತಾಗಿದೆ.

ಕರವೇ ನಲ್ನುಡಿ ಸಂಪಾದಕರ ಜೊತೆಗೊಂದು ಸಂದರ್ಶನ

ಹೀಗಾಗಿ, ಒಂಬತ್ತು ಸಾವಿರ ಬ್ಯಾಂಕಿಂಗ್ ವಲಯದ ನೇಮಕಾತಿಯಲ್ಲಿ ನಮ್ಮವರಿಗೆ ಸಿಗುವುದು ಚಿಲ್ಲರೆ ಮುನ್ನೂರೋ, ನಾಲ್ನೂರೋ ಹುದ್ದೆಗಳು. ಆ ಮೂಲಕ ಬ್ಯಾಂಕಿಂಗ್ ವಲಯದಲ್ಲಿ ಹಿಂದಿಯನ್ನರ ಪ್ರಾಭಲ್ಯ ಹೆಚ್ಚಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆ ಬ್ಯಾಂಕಿಂಗ್ ಪರೀಕ್ಷೆ ನಡೆಯುವ ಹದಿನೈದು ಜಿಲ್ಲಾಕೇಂದ್ರಗಳ ಮೇಲೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಮುಂದೆ ಓದಿ..

ಬೊಟ್ಟು ಮಾಡಿ ತೋರಿಸಬೇಕಾಗಿರುವುದು ನಮ್ಮ ರಾಜಕಾರಣಿಗಳತ್ತ

ಬೊಟ್ಟು ಮಾಡಿ ತೋರಿಸಬೇಕಾಗಿರುವುದು ನಮ್ಮ ರಾಜಕಾರಣಿಗಳತ್ತ

ಇಂದು ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಗಾಗಿ ಇಷ್ಟೊಂದು ಹೋರಾಟ ನಡೆಸಬೇಕಾಗಿರುವ ದುರ್ಗತಿ ಬಂದಿರುವುದಕ್ಕೆ ಮೊದಲು ಬೊಟ್ಟು ಮಾಡಿ ತೋರಿಸಬೇಕಾಗಿರುವುದು ನಮ್ಮ ರಾಜಕಾರಣಿಗಳತ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತು ಪಡಿಸಿ ಎರಡೂ ರಾಷ್ಟ್ರೀಯ ಪಕ್ಷಗಳು ಹಿಂದಿ ಹೇರಿಕೆಯ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿಲ್ಲ ಎನ್ನುವುದು ಒಂದೆಡೆಯಾದರೆ ಪ್ರಾದೇಶಿಕ ಪಕ್ಷವೂ ಕಾಟಾಚಾರದ ವಿರೋಧ ವ್ಯಕ್ತ ಪಡಿಸಿ ಸುಮ್ಮನಾಗಿದೆ.

ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್ ಜಿ ಸಿದ್ದರಾಮಯ್ಯ ಅವರಿಂದ ಸಿಎಂಗೆ ಪತ್ರ

ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್ ಜಿ ಸಿದ್ದರಾಮಯ್ಯ ಅವರಿಂದ ಸಿಎಂಗೆ ಪತ್ರ

ಕೇಂದ್ರ ಸರಕಾರದ ನೇಮಕಾತಿ ನೀತಿ ರಾಜ್ಯಗಳ ಸ್ಥಳೀಯ ಜನಾಂಗ, ಸಂಸ್ಕೃತಿಗಳ ಮೇಲಿನ ನೇರ ಪ್ರಹಾರ, ಇದನ್ನು ಕೂಡಲೇ ಪ್ರತಿಭಟಿಸದೇ ಇದ್ದಲ್ಲಿ ಸಾಮಾಜಿಕ ಸಂಘರ್ಷಗಳಿಂದಾಗಿ ಜನಸಾಮಾನ್ಯರಲ್ಲಿ ಅಸಹನೆಯ ತೀವ್ರತೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್ ಜಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಹಿಂದಿ ಹೇರಿಕೆಯಿಲ್ಲ ಎನ್ನುವ ಕೇಂದ್ರ ಸರಕಾರದ ಹೇಳಿಕೆ ಬರೀ ಬೊಗಳೆ

ಹಿಂದಿ ಹೇರಿಕೆಯಿಲ್ಲ ಎನ್ನುವ ಕೇಂದ್ರ ಸರಕಾರದ ಹೇಳಿಕೆ ಬರೀ ಬೊಗಳೆ

ಬಲವಂತದ ಹಿಂದಿ ಹೇರಿಕೆಯಿಲ್ಲ ಎನ್ನುವ ಕೇಂದ್ರ ಸರಕಾರದ ಹೇಳಿಕೆ ಬರೀ ಬೊಗಳೆ. ಇತ್ತೀಚೆಗೆ ಒರಿಸ್ಸಾ ಸರಕಾರದ ಜೊತೆ ಹಿಂದಿಯಲ್ಲಿ ವ್ಯವಹರಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಘಟನೆ ನಮ್ಮ ಮುಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎಂಎನ್ಎಸ್ ದೊಡ್ಡ ಮಟ್ಟದಲ್ಲಿ ಉತ್ತರ ಭಾರತೀಯರ ಮತ್ತು ಬಿಹಾರಿಗಳ ವಿರುದ್ದ ರಸ್ತೆಗಿಳಿದಿದ್ದವು. ಈಗ ಪಕ್ಕದ ಆಂಧ್ರ, ತಮಿಳುನಾಡಿನಲ್ಲೂ ಹಿಂದಿ ವಿರುದ್ದ ಹೋರಾಟ ಆರಂಭವಾಗಿದೆ.

ಮುಂದಿನ ತಿಂಗಳು ಸೆಪ್ಟಂಬರ್ ಒಂಬತ್ತು ಮತ್ತು ಹತ್ತರಂದು ಪರೀಕ್ಷೆ

ಮುಂದಿನ ತಿಂಗಳು ಸೆಪ್ಟಂಬರ್ ಒಂಬತ್ತು ಮತ್ತು ಹತ್ತರಂದು ಪರೀಕ್ಷೆ

ಮುಂದಿನ ತಿಂಗಳು ಸೆಪ್ಟಂಬರ್ ಒಂಬತ್ತು ಮತ್ತು ಹತ್ತರಂದು ಒಂಬತ್ತು ಸಾವಿರ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳಿಗೆ ಹಿಂದಿವಾಲಾಗಳು ಆಯ್ಕೆಯಾಗುವುದು ಬಹುತೇಕ ಖಚಿತ. ಕನ್ನಡ ಗೊತ್ತಿಲ್ಲದ ಬ್ಯಾಂಕ್ ಅಧಿಕಾರಿಗಳಿಂದ ಗ್ರಾಮೀಣ ಭಾಗದ ಜನರಿಗೆ ಮತ್ತು ರೈತರಿಗೆ ಬ್ಯಾಂಕ್ ಸೌಲಭ್ಯದ ಬಗ್ಗೆ ಹೇಗೆ ತಿಳಿಯಲು ಸಾಧ್ಯ. ಕೆಲವೊಂದು ಕಡೆ ಬ್ಯಾಂಕಿನ ಚಲನ್ ಗಳೂ ಹಿಂದಿಯಲ್ಲಿ ಇರುವುದನ್ನು ನಾವು ನೋಡಿದ್ದೇವೆ. ಇದು ಹೀಗೇ ಮುಂದುವರಿಯಲು ಸಾಧ್ಯವಿಲ್ಲ ಎನ್ನುವುದು ಕರವೇ ನಲ್ನುಡಿ ಸಂಪಾದಕ ದಿನೇಶ್ ಕುಮಾರ್ ಅವರ ಅಭಿಪ್ರಾಯ.

ಸಿಂಗಲ್ ಹ್ಯಾಂಡೆಡ್ ಆಗಿ ಹೋರಾಟ ನಡೆಸಿದ್ದು ನಾರಾಯಣ ಗೌಡರ ಕರವೇ

ಸಿಂಗಲ್ ಹ್ಯಾಂಡೆಡ್ ಆಗಿ ಹೋರಾಟ ನಡೆಸಿದ್ದು ನಾರಾಯಣ ಗೌಡರ ಕರವೇ

ನಮ್ಮ ಮೆಟ್ರೋ ಹಿಂದಿ ಹೇರಿಕೆ ವಿಚಾರದಲ್ಲಿನ ಹೋರಾಟದಲ್ಲಿ ಸಿಂಗಲ್ ಹ್ಯಾಂಡೆಡ್ ಆಗಿ ಹೋರಾಟ ನಡೆಸಿದ್ದು ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಣ. ಕರವೇ, ಬ್ಯಾಂಕಿಂಗ್ ವಲಯದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಮತ್ತೊಂದು ಬೃಹತ್ ಮಟ್ಟದ ಹೋರಾಟಕ್ಕೆ ಸಜ್ಜಾಗಿದೆ.

ನಾರಾಯಣ ಗೌಡರ ನೇತೃತ್ವದ ಹೋರಾಟಕ್ಕೆ ಕೈಜೋಡಿಸೋಣ

ನಾರಾಯಣ ಗೌಡರ ನೇತೃತ್ವದ ಹೋರಾಟಕ್ಕೆ ಕೈಜೋಡಿಸೋಣ

ಸೆಪ್ಟಂಬರ್ ಒಂಬತ್ತು ಮತ್ತು ಹತ್ತರಂದು ರಾಜ್ಯದ ಸುಮಾರು ಹದಿನೈದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಬ್ಯಾಂಕಿಂಗ್ ನೇಮಾಕಾತಿ ಪ್ರಕ್ರಿಯೆಗೆ ಶತಾಯಗತಾಯು ತಡೆಯೊಡ್ಡಲು ನಾರಾಯಣ ಗೌಡರ ಕರವೇ ಬಣ ಸಜ್ಜಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಯಬಾರದು, ನಡೆದರೂ ಕನ್ನಡಿಗರಿಗೆ ಮನ್ನಣೆ ಸಿಗಬೇಕು ಎನ್ನುವ ನಾರಾಯಣ ಗೌಡರ ನೇತೃತ್ವದ ಹೋರಾಟಕ್ಕೆ ನಾವೆಲ್ಲಾ ಕೈಜೋಡಿಸಬೇಕಾಗಿದೆ.

ಸ್ಥಳೀಯರಿಗೆ ಆದ್ಯತೆ ನೀಡಬೇಕು ಎನ್ನುವ ತಿಳುವಳಿಕೆಯಿಲ್ಲದ ಕೇಂದ್ರ

ಸ್ಥಳೀಯರಿಗೆ ಆದ್ಯತೆ ನೀಡಬೇಕು ಎನ್ನುವ ತಿಳುವಳಿಕೆಯಿಲ್ಲದ ಕೇಂದ್ರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತೀಯ ಎಲ್ಲಿ ಬೇಕಾದರೂ ನೆಲೆಸಬಹುದು ಎನ್ನುವುದು ಸತ್ಯವಾದರೂ, ಆಯಾಯ ರಾಜ್ಯಗಳ ಜನರು ಕೆಲಸ ಅರಸಿಕೊಂಡು ಇನ್ನೊಂದು ಊರಿಗೆ ಹೋಗಲು ಸಾಧ್ಯವೇ? ಸ್ಥಳೀಯರಿಗೆ ಸರಕಾರೀ ಮಟ್ಟದ ಮತ್ತು ಖಾಸಗಿ ಸಂಸ್ಥೆಗಳ ಕೆಲಸಗಳಲ್ಲಿ ಮೊದಲು ಆದ್ಯತೆ ನೀಡಬೇಕು ಎನ್ನುವ ಕನಿಷ್ಠ ತಿಳುವಳಿಕೆ ಕೇಂದ್ರ ಸರಕಾರಕ್ಕೆ ಇಲ್ಲದಾಗಿರುವುದು ವಿಪರ್ಯಾಸ.

ಭಾಷಾಭಿಮಾನ, ದೇಶಾಭಿಮಾನ ಇಂತವರಿಂದ ಕಲಿಯಬೇಕೇ?

ಭಾಷಾಭಿಮಾನ, ದೇಶಾಭಿಮಾನ ಇಂತವರಿಂದ ಕಲಿಯಬೇಕೇ?

ಹೋದ ಊರುಗಳಲ್ಲಿ ಕನಿಷ್ಠ ವ್ಯವಹರಿಸಲು ಅಲ್ಲಿನ ಭಾಷೆ ಕಲೀರಯ್ಯಾ ಎನ್ನುವ ತಿಳುವಳಿಕೆಯನ್ನು ಹಿಂದಿವಾಲಾಗಳಿಗೆ ನೀಡುವುದನ್ನು ಬಿಟ್ಟು, ಕನ್ನಡಿಗರನ್ನು ವಿಲನ್ ಎಂದು ಬಿಂಬಿಸಲು ಹೊರಟಿರುವ ಕೆಲವೊಂದು ವಾಹಿನಿಗಳಿಂದ ಭಾಷಾಭಿಮಾನ, ದೇಶಾಭಿಮಾನ ಕಲಿಯುವ ಅವಶ್ಯಕತೆ ಕನ್ನಡಿಗರಿಗಿಲ್ಲ ಎನ್ನುವುದನ್ನು ಇಂಥಾ ವಾಹಿನಿಗಳು ಕಲಿಯುವುದು ಯಾವಾಗ? ನಮ್ಮ ಶ್ರೀಮಂತ ಸಂಸ್ಕೃತಿಯ ಬಗ್ಗೆ ಇವರಿಗೇನು ಗೊತ್ತು..

ಹಿಂದಿ ಭಾಷೆಯ ಮೇಲೆ ನಮಗಿಲ್ಲ ವಿರೋಧ

ಹಿಂದಿ ಭಾಷೆಯ ಮೇಲೆ ನಮಗಿಲ್ಲ ವಿರೋಧ

ಹಿಂದಿ ಭಾಷೆಯ ಮೇಲೆ ನಮಗೇಕೆ ವಿರೋಧ, ಅನಾವಶ್ಯಕ ಹಿಂದಿ ಹೇರಿಕೆಯ ಮೇಲೆ ಮಾತ್ರ ನಮ್ಮ ಆಕ್ರೋಶ. ನಮ್ಮ ಭಾಷಾ ಸ್ವಾಭಿಮಾನದ ಹೋರಾಟ ಬೆಂಗಳೂರಿನ ಯಾವ ರಸ್ತೆಗೂ ಸೀಮಿತವಾಗದೇ, ನಾಡೆನೆಲ್ಲಡೆ ಜಾಗೃತವಾಗಬೇಕಾಗಿದೆ.. ನಮ್ಮ ಭಾಷೆಯ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿದೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IBPS ( Institute of Banking Personnel Selection) has issued a notification to recruit 9000 staffs to regional banks of Karnataka. New set of IBPS rules and guidelines is more benefited to Hindi speaking candidates rather than Kannadigas.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ