Taxi Fare: ಟ್ಯಾಕ್ಸಿ ದರ, ಸಾರಿಗೆ ಇಲಾಖೆ ಮಹತ್ವದ ಆದೇಶ
ಬೆಂಗಳೂರು, ಸೆಪ್ಟೆಂಬರ್ 03: ಸಾರಿಗೆ ಇಲಾಖೆ ಕರ್ನಾಟಕ ಟ್ಯಾಕ್ಸಿಗಳ ಪ್ರಯಾಣ ದರದ ಕುರಿತು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ರಾಜ್ಯದ ಎಲ್ಲಾ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ/ ಪ್ರಾದೇಶಿಕ/ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು/ ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಈ ಕುರಿತು ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.
ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಕರ್ನಾಟಕ ರಾಜ್ಯಾದ್ಯಂತ (ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಹ ಒಳಗೊಂಡಂತೆ) ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಪಡಿಸಿರುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಆದೇಶದ ವಿವರ: ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರು ನಗರ ಮಿತಿಯೊಳಗೆ ಆಚರಣೆ ಮಾಡುವ ಎಲ್ಲಾ ಟ್ಯಾಕ್ಸಿ ಸೇವೆಗಳಿಗೆ 'ಒಂದು ನಗರ ಒಂದು ದರ' ನೀತಿಯನ್ನು ಅನುಷ್ಠಾಗೊಳಿಸುವಂತೆ President, Federation of Karnataka State Private Transport Associations, Bangalore ಇವರು ಕೋರಿರುತ್ತಾರೆ.
ಈ ಕುರಿತು ಪರಿಶೀಲಿಸಲಾಗಿ, ಈಗಾಗಲೇ ಸರ್ಕಾರವು ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ (ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಹ ಒಳಗೊಂಡಂತೆ) ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಪಡಿದಿಸಿ ಆದೇಶಿಸಿದೆ.
ಅದರಂತೆ ಈ ಕಛೇರಿ ಪತ್ರದಲ್ಲಿ ಸರ್ಕಾರದ ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಗೆ ಸಂಬಂಧಿಸಿದ ನಿರ್ದೇಶನಗಳಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಸೂಚಿಸಲಾಗಿರುತ್ತದೆ ಎಂದು ಹೇಳಿದೆ.
ಆದ್ದರಿಂದ ಸರ್ಕಾರವು ಪರಿಷ್ಕರಿಸಿರುವ ಪರಿಷ್ಕೃತ ದರಗಳನ್ನು ಕರ್ನಾಟಕ ರಾಜ್ಯಾದ್ಯಂತ (ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಹ ಒಳಗೊಂಡಂತೆ) ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳು ಪರಿಷ್ಕೃತ ದರಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಕರ್ನಾಟಕ ಸರ್ಕಾರ 2024ರ ಫೆಬ್ರವರಿಯಲ್ಲಿ ರಾಜ್ಯಾದ್ಯಂತ (ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಹ ಒಳಗೊಂಡಂತೆ) ಮತ್ತು ಅಗ್ರಿಗೇಟರ್ ನಿಯಮಗಳಡಿ ಸಂಚಾರ ಮಾಡುವ ಓಲಾ, ಊಬರ್ ಸೇರಿ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಏಕರೂಪಗೊಳಿಸಿ ಆದೇಶವನ್ನು ಹೊರಡಿಸಿತ್ತು.
ಈ ಆದೇಶದಂತೆ ಟ್ಯಾಕ್ಸಿಗಳನ್ನು ಅವುಗಳ ಖರೀದಿ ಮೌಲ್ಯದ ಮೇಲೆ ಮೂರು ಭಾಗವಾಗಿ ಮಾಡಲಾಗಿತ್ತು. 10 ಲಕ್ಷದ ತನಕದ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿ. ಮೀ.ಗಳಿಗೆ 100 ರೂ., ಬಳಿಕ ಪ್ರತಿ ಕಿ. ಮೀ.ಗೆ 24 ರೂ. ಪ್ರಯಾಣ ದರ ನಿಗದಿ ಮಾಡಲಾಗಿತ್ತು.
10 ರಿಂದ 15 ಲಕ್ಷ ರೂ. ತನಕದ ಟ್ಯಾಕ್ಸಿಗಳಿಗೆ. 115 ರೂ.ಗಳು, 4 ಕಿ. ಮೀ. ನಂತರದ ಪ್ರತಿ ಕಿ. ಮೀ.ಗೆ 28 ರೂ. ದರವನ್ನು ನಿಗದಿ ಮಾಡಲಾಗಿದೆ. 15 ಲಕ್ಷ ರೂ.ಗಳಿಂದ ಹೆಚ್ಚಿನ ಟ್ಯಾಕ್ಸಿಗಳಿಗೆ 130 ರೂ.ಗಳು, 4 ಕಿ. ಮೀ. ನಂತರದ ಪ್ರತಿ ಕಿ. ಮೀ.ಗೆ 32 ರೂ. ದರವನ್ನು ನಿಗದಿಗೊಳಿಸಿತ್ತು. ಏಪ್ರಿಲ್ 1, 2024ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಟ್ಯಾಕ್ಸಿಗಳು ವಸೂಲಿ ಮಾಡುತ್ತಿವೆ ಎಂಬುದು ಜನರ ಆರೋಪವಾಗಿದೆ.












Click it and Unblock the Notifications