ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ದಾಳಿ: ಉಕ್ರೇನ್‌ನಲ್ಲಿನ ಕರ್ನಾಟಕದ ವಿದ್ಯಾರ್ಥಿಗಳಿಗೆ ಊಟ, ನೀರಿಗಾಗಿ ಪರಿದಾಟ

|
Google Oneindia Kannada News

ಬೆಂಗಳೂರು, ಫೆ. 25: ರಷ್ಯಾ ದಾಳಿಯಿಂದ ತತ್ತರಿಸುತ್ತಿರುವ ಉಕ್ರೇನ್‌ನಲ್ಲಿ ರಾಜ್ಯದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಊಟ, ನೀರಿನ ತೊಂದರೆಯೂ ಆಗಿದ್ದು, ಸಹಾಯಕ್ಕಾಗಿ ಸರ್ಕಾರದ ಮೊರೆ ಇಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ 6 ಗಂಟೆಗೆ ಕೆಎಸ್‍ಡಿಎಂಎ ನೋಡಲ್ ಅಕಾರಿ ಡಾ.ಮನೋಜ್ ರಾಜನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬೆಂಗಳೂರಿನ 28, ಮೈಸೂರಿನ 10, ಬಳ್ಳಾರಿ ಮತ್ತು ಹಾಸನದ 5, ಬಾಗಲಕೋಟೆ ಚಾಮರಾಜನಗರ 4, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಕೊಡುಗು, ರಾಯಚೂರು ಜಿಲ್ಲೆಗಳ ತಲಾ 3, ಚಿತ್ರದುರ್ಗ ದಾವಣಗೆರೆ, ಧಾರವಾಡ, ಕಲಬುರಗಿ, ಮಂಡ್ಯ, ಉಡುಪಿ, ವಿಜಾಪುರ ಜಿಲ್ಲೆಗಳ ತಲಾ

ಉಕ್ರೇನ್‌ನಲ್ಲಿ ಸಿಲುಕಿದ ಕರ್ನಾಟಕದ ವಿದ್ಯಾರ್ಥಿಗಳು: 24/7 ಸಹಾಯವಾಣಿ ಆರಂಭಉಕ್ರೇನ್‌ನಲ್ಲಿ ಸಿಲುಕಿದ ಕರ್ನಾಟಕದ ವಿದ್ಯಾರ್ಥಿಗಳು: 24/7 ಸಹಾಯವಾಣಿ ಆರಂಭ

ಇಬ್ಬರು, ಕೋಲಾರ, ಶಿವಮೊಗ್ಗ, ಉತ್ತರಕನ್ನಡದ ತಲಾ ಒಬ್ಬೊಬ್ಬರು ತಾಯ್ನಡಿಗೆ ಮರಳಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

Ukraine Russia War: Students from Karnataka Stranded in Ukraine fight to find food and water

ಮುಖ್ಯವಾಗಿ ವೈದ್ಯಕೀಯ ಕೋರ್ಸ್ ಓದುವುದಕ್ಕಾಗಿ ಉಕ್ರೇನ್‌ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಸದ್ಯ ಭಾರತಕ್ಕೆ ಮರಳಲು ಕಾತರರಾಗಿದ್ದಾರೆ. ಆದರೆ, ಬಹುತೇಕ ಏರ್‌ಪೋರ್ಟ್‌ಗಳು ಬಂದ್ ಆಗಿರುವುದರಿಂದ ಅವರನ್ನು ಕರೆತರುವುದು ಸವಾಲಿನ ಕೆಲಸವಾಗಿದೆ.

ವಸತಿ ನಿಲಯಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ಉಳಿದುಕೊಂಡಿರುವ ರಾಜ್ಯದ ನೂರಾರು ವಿದ್ಯಾರ್ಥಿಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಬೆಳವಣಿಗೆಗಳಿಂದ

ಕೆಲ ಕಾಲ ಸಂಪರ್ಕ ಕಡಿತವಾದರೆ ಆತಂಕಗೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಕೆಲವೆಡೆ ಊಟ, ತಿಂಡಿ, ನೀರಿಗೂ ಸಮಸ್ಯೆಯಾಗಿದೆ. ಏನಾದರೂ ವ್ಯವಸ್ಥೆ ಮಾಡಿ ಎಂದು ವಿದ್ಯಾರ್ಥಿಗಳು ಇಲ್ಲಿನ ಸರ್ಕಾರಕ್ಕೆ ಮತ್ತು ರಾಯಭಾರ ಕಚೇರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಉಕ್ರೇನ್‌ನಿಂದ ನಮ್ಮನ್ನು ಭಾರತಕ್ಕೆ ಮರಳಿ ಕರೆತನ್ನಿ: ವಿದ್ಯಾರ್ಥಿಗಳ ಮನವಿಉಕ್ರೇನ್‌ನಿಂದ ನಮ್ಮನ್ನು ಭಾರತಕ್ಕೆ ಮರಳಿ ಕರೆತನ್ನಿ: ವಿದ್ಯಾರ್ಥಿಗಳ ಮನವಿ

'ನಮ್ಮ ಜೀವಕ್ಕೆ ಅಪಾಯ ಇದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು. ನಾವು ರೈಲು ನಿಲ್ದಾಣದಲ್ಲಿ ಸಿಲುಕಿದ್ದೇವೆ. ಇಲ್ಲಿಂದ ಹೋಗಲು ಟ್ಯಾಕ್ಸಿ, ವಾಹನ ಏನೂ ಸಿಗುತ್ತಿಲ್ಲ. ಇಲ್ಲಿಂದ ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯಿರಿ. ಭಾರತೀಯ ರಾಯಭಾರ ಕಚೇರಿಗೂ ಫೋನ್ ಮಾಡುತ್ತಿದ್ದೇವೆ' ಎಂದು ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಸೆಲಿ ವೀಡಿಯೋ ಮಾಡಿ ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಹಾವೇರಿ ಜಿಲ್ಲೆಯ 8 ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ತಮಗೆ ಸರಿಯಾಗಿ ನೀರು, ಆಹಾರ ಸಹ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಇವರಲ್ಲಿ ರಾಣೇಬೆನ್ನೂರು ತಾಲೂಕಿನ 7 ವಿದ್ಯಾರ್ಥಿಗಳು ಮತ್ತು ಬ್ಯಾಡಗಿ ತಾಲೂಕಿನ ಒಬ್ಬ ವಿದ್ಯಾರ್ಥಿ ಇದ್ದಾರೆ.

ಹೊರಗಡೆ ಓಡಾಡದಂತೆ ಹಾಸ್ಟೆಲ್‌ಗಳ ವಾರ್ಡನ್‌ಗಳು ತಾಕೀತು ಮಾಡುತ್ತಿದ್ದಾರೆ. ಈಗಾಗಲೇ ತೆಗೆದುಕೊಂಡು ಬಂದ ಆಹಾರ ಸಾಮಗ್ರಿ ಒಂದೆರಡು ದಿನಕ್ಕೆ ಸಾಕಾಗುತ್ತದೆ. ಬಳಿಕ ಏನು ಮಾಡಬೇಕು ಎಂಬ ಆತಂಕ ಕೆಲ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಹೆಚ್ಚಿನ ನಿವಾಸಿಗಳನ್ನು ಆಪಾರ್ಟ್‌ಮೆಂಟ್‌ಗಳ ಕೆಳಗಿನ ಬಂಕರ್‌ಗಳಲ್ಲಿ ಇರುವಂತೆ ಸೂಚಿಸಲಾಗಿದೆ.

ವಿದೇಶಾಂಗ ಸಚಿವರೊಂದಿಗೆ ಮಾತುಕತೆ:

ಉಕ್ರೇನ್ ನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ವಿದೇಶಾಂಗ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಇಂದು ಬೆಳಗ್ಗೆ ಕೇಂದ್ರ ವಿದೇಶಾಂಗ ಸಚಿವರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಭಾರತೀಯರ ವಾಪಸಾತಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಿಮಾನಯಾನ ಸ್ಥಗಿತಗೊಂಡಿರುವ ಕಾರಣ ಭೂ ಸಾರಿಗೆ ಮೂಲಕ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಉಕ್ರೇನ್ ನ ಪಶ್ಚಿಮ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಬಹುದಾಗಿದೆ ಎಂಬ ಮಾಹಿತಿಯಿದ್ದು, ಭಾರತೀಯ ರಾಯಭಾರಿ ಕಚೇರಿಯೂ ಎಲ್ಲ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ ಎಂದರು.

Recommended Video

ವಿಕೆಟ್ ಪಡೆದಿದ್ದಕ್ಕೆ ಪುಷ್ಪ ಸ್ಟೈಲ್ ಮಾಡಿ ಸಂಭ್ರಮಿಸಿದ ಜಡೇಜಾ‌ ವಿಡಿಯೋ ಫುಲ್ ವೈರಲ್ | Oneindia Kannada

ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಊಟೋಪಚಾರದ ವ್ಯವಸ್ಥೆಗೂ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ. ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಎಲ್ಲ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಲು ವಿದೇಶಾಂಗ ಸಚಿವರು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

English summary
Ukraine Russia War: Students from Karnataka Stranded in Ukraine fight to find food and water says Karnataka Nodal Officer Dr Manoj Rajan. He released the district wise students details who stranded in ukraine .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X