UGCET 2026: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಕೆಇಎ ಅರ್ಜಿ ಆಹ್ವಾನ, ಈ ದಾಖಲೆಗಳು ಬೇಕು
ಬೆಂಗಳೂರು: ಇಂಜಿನಿಯರಿಂಗ್, ಪಶು ಸಂಗೋಪನೆ, ಕೃಷಿ ವಿಜ್ಞಾನ, ಫಾರ್ಮಸಿ, ಬಿಎಸ್‌ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UGCET 2025) ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಬಾರಿ 'ಅಪ್ಲಿಕೇಷನ್ ಜೊತೆಗೆ ವೇರಿಫಿಕೇಷನ್ ಮಾದರಿ' ಇರುವ ಕಾರಣ ಪ್ರಮಾಣಪತ್ರ, ಷರತ್ತು ಹಾಗೂ ಇತರ ಸಂಕ್ಷಿಪ್ತ ಮಾಹಿತಿ ಒಳಗೊಂಡ ' 2026 ಸಿಇಟಿ ದಿಕ್ಸೂಚಿ' ಮಾಹಿತಿ ಪುಸ್ತಕ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧ್ಯಕ್ಷರು ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹಾಗೂ ಕೆಇಎ ಸಹ ಅಧ್ಯಕ್ಷ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಸಿಇಟಿ ದಿಕ್ಸೂಚಿ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಹೊಸ ಮಾದರಿ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸಿಇಟಿಗಾಗಿ ಷರತ್ತುಗಳು, ವಿವಿಧ ಪ್ರಮಾಣ ಪತ್ರ ಸಹಿತ ಅರ್ಜಿ ಸಲ್ಲಿಸಬೇಕು.

ಯಾವೆಲ್ಲ ದಾಖಲೆಗಳು ಬೇಕು?
ಕೆಇಎ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಫಾರ್ಮಸಿ, ಬಿಎಸ್ ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ-2026ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಬೇಕಾಗುವ ದಾಖಲೆಗಳನ್ನು ನೋಡುವುದಾದರೆ, 'ಎಸ್ ಎಸ್ ಎಲ್ ಸಿ /10ನೇ ತರಗತಿ ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಪ್ರಮಾಣ ಪತ್ರಗಳು, ಜೆಪಿಜಿ ಫಾರ್ಮ್ಯಾಟ್ ವಿದ್ಯಾರ್ಥಿ ಫೋಟೋ ಬೇಕು ಜೊತೆಗೆ ಮೊಬೈಲ್ ಇಮೇಲ್ ನೋಂದಣಿ' ಆಗಿರಬೇಕು.
ವಿಶೇಷ ಸೂಚನೆ: ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಆರ್‌ಡಿ ಪ್ರಮಾಣ ಪತ್ರಗಳಲ್ಲಿ ಹೆಸರು ಒಂದೇ ರೀತಿ ಇರಬೇಕು. ವ್ಯತ್ಯಾಸವಿದ್ದರೆ ಕೂಡಲೇ ಸರಿಪಡಿಸಿಕೊಳ್ಳಿ. ಅನ್ವಯಿಸುವುದಾದರೆ ಇತರೆ ಮೀಸಲಾತಿ ದಾಖಲೆಗಳು ಬೇಕು. ಅವುಗಳ ಮಾಹಿತಿ ಮುಂದಿದೆ.
1. ಜಾತಿ/ಆದಾಯ ಪ್ರಮಾಣ ಪತ್ರ (RD ಸಂಖ್ಯೆ ಇರುವ) ಒಳ ಮೀಸಲಾತಿ ವಿವರಗಳನ್ನು ಒಳಗೊಂಡ ಪ್ರವರ್ಗ ಎ/ಬಿ/ಸಿ ಪ್ರವರ್ಗದ ಜಾತಿ ಪ್ರಮಾಣ ಪತ್ರ.
2. ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಆರ್‌ಡಿ ಸಂಖ್ಯೆಯೊಂದಿಗೆ ವಾರ್ಷಿಕ ಆದಾಯ 10 ಲಕ್ಷವರೆಗೆ ಶುಲ್ಕ ವಿನಾಯಿತಿ. ಪ್ರವರ್ಗ 1ರ ಅಭ್ಯರ್ಥಿಗಳು ವಾರ್ಷಿಕ ಆದಾಯ ರೂ. 2.5 ಲಕ್ಷ ರೂ.ವರೆಗೆ ಶುಲ್ಕ ವಿನಾಯಿತಿ ಇದೆ.
3. ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಬೇಕು.
4. 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರುವ ವ್ಯಾಸಂಗ ಪ್ರಮಾಣ ಪತ್ರ.
5. 1ರಿಂದ 10ನೇ ತರಗತಿವರೆಗೆ ಗ್ರಾಮೀಣ ಪ್ರದೇಶದಲ್ಲಿ ಓದಿರುವ ಪ್ರಮಾಣ ಪತ್ರ ಹಾಗೂ ಇತರ ಪ್ರಮಾಣಪತ್ರಗಳು ಅರ್ಜಿ ಸಲ್ಲಿಕೆಗೆ ಬೇಕಾಗುತ್ತದೆ.
6. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಭಾಷಾ ಅಲ್ಪಸಂಖ್ಯಾತ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣ ಪತ್ರಗಳು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಜಾಲತಾಣ https://cetonline.karnataka.gov.in/kea/ ಅಥವಾ ಸಹಾಯವಾಣಿ: 080-23 460 460 ಸಂಪರ್ಕಿಸುವಂತೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದರು.












Click it and Unblock the Notifications