'ಉಡುಪಿ ಮಲ್ಪೆ ಬೀಚ್' ವೈಫೈ ಪಡೆದ ದೇಶದ ಮೊದಲ ಬೀಚ್

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಉಡುಪಿ, ಜನವರಿ, 25: ಮಲ್ಪೆ ಬೀಚ್ ಪ್ರವಾಸಿಗರೇ ನಿಮಗೊಂದು ಸಂತಸದ ಸುದ್ದಿ. ನೀವು ಬೀಚ್ ನಲ್ಲಿ ಆಟವಾಡಿದ ಕ್ಷಣಗಳ ಫೋಟೋಗಳನ್ನು ತಕ್ಷಣವೇ ಬೀಚ್ ನ ತಟದಲ್ಲೇ ನಿಂತು ನಿಮ್ಮೆಲ್ಲಾ ಸ್ನೇಹಿತರಿಗೆ ಕಳುಹಿಸಬಹುದು. ಅದ್ಹೇಗೆ ಎಂದು ಯೋಚಿಸ್ತಿದ್ದೀರಾ?

ಉಡುಪಿಯ ಮಲ್ಪೆ ಬೀಚ್ ನಲ್ಲಿ ವೈಫೈ ಸೌಲಭ್ಯ ಒದಗಿಸಲು ಬಿಎಸ್ಎನ್ಎಲ್ ಮುಂದಾಗಿದ್ದು, ಪ್ರವಾಸಿಗನಿಗೆ ದಿನದಲ್ಲಿ ಅರ್ಧಗಂಟೆ ಮಾತ್ರ ಈ ಸೌಲಭ್ಯ ಲಭಿಸಿದೆ. ಇದರಿಂದ ಮಲ್ಪೆ ಬೀಚ್ ದೇಶದ ಮೊಟ್ಟ ಮೊದಲ ವೈಫೈ ಪಡೆದ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.[ಫೇಸ್ ಬುಕ್ ಸ್ನೇಹ ಕೇವಲ ಹುಸಿ ಸ್ನೇಹವಂತೆ!]

Udupi Malpe beach becomes first beach in India to get free Wi-Fi connectivity

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಭಾನುವಾರ ಮಲ್ಪೆ ಬೀಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಫೈ ಸೌಲಭ್ಯ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಮೋದ್ ಮಧ್ವರಾಜ್, 'ಈ ವ್ಯವಸ್ಥೆಯಿಂದ ಬೀಚ್ ಗೆ ಆಗಮಿಸುವ ಸಾರ್ವಜನಿಕರು ಯಾವುದೇ ಮೊಬೈಲ್ ಸಂಖ್ಯೆಯಿಂದ ಅರ್ಧ ಗಂಟೆ 4ಜಿ ವೈಫೈ ಸೌಲಭ್ಯ ಪಡೆಯಬಹುದು' ಎಂದು ತಿಳಿಸಿದರು.

ಮಲ್ಪೆ ಬೀಚ್ ದೇಶದ ಅತ್ಯಂತ ಸುಂದರ ಬೀಚ್. ಇಲ್ಲಿ ಆಗಮಿಸುವ ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. 80 ಲಕ್ಷ ರೂ. ವೆಚ್ಚದಲ್ಲಿ ಬೀಚ್ ನ ಸ್ವಚ್ಚತೆಗೆ ಗಮನ ಹರಿಸಲಾಗಿದೆ ಎಂದರು.[ಫೇಸ್ಬುಕ್, ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?]

ವಾಚ್ ಟವರ್ ನಿರ್ಮಾಣ, ಸ್ವಚ್ಛತಾ ಕೆಲಸಗಾರರ, ಲೈಫ್ ಗಾರ್ಡ್ ಗಳ ನೇಮಕ, ಟಾಯ್ಲೆಟ್ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಹಾಗೂ 4 ರಿಂದ 5 ಕೋಟಿ ರೂ. ವೆಚ್ಚದಲ್ಲಿ ಬೀಚ್ ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿಗೊಳಿಸಲಾಗಿದೆ. 70 ಲಕ್ಷ ರೂ ವೆಚ್ಚದಲ್ಲಿ ಬೀಚ್ ಕ್ಲೀನಿಂಗ್ ಯಂತ್ರ ಖರೀದಿಸಲಾಗಿದೆ ಎಂದು ಸ್ವಚ್ಚತೆಗಾಗಿ ಕೈಗೊಂಡ ಕಾರ್ಯಗಳ ವಿವರ ನೀಡಿದರು.

ಇದೀಗ ಪ್ರವಾಸಿಗನಿಗೆ ಅರ್ಧ ಗಂಟೆ ವೈಫೈ ಸೌಲಭ್ಯ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 24 ಗಂಟೆಗಳ ಕಾಲ ವೈಫೈ ಸೌಲಭ್ಯ ಒದಗಿಸುವಂತೆ ಸಂಬಂದಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಮಂಜುನಾಥಯ್ಯ, ಬಿಎಸ್ಎನ್ಎಲ್ ಅಧಿಕಾರಿ ವಿಷ್ಣುಮೂರ್ತಿ, ಬೀಚ್ ನಿರ್ವಹಣಾ ಸಮಿತಿ ಸುದೇಶ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi Malpe beach has become the first beach in India to get free Wi-Fi facility. BSNL ready to provide this free Wi-Fi connectivity. MLA Pramod Madwaraj launched this facility on Sunday, January 24th.
Please Wait while comments are loading...