ಹೊನ್ನಾವರ: ಅಪ್ಸರಕೊಂಡ ಸೆಳೆತಕ್ಕೆ ಸಿಲುಕಿ ಇಬ್ಬರು ಸಾವು
ಹೊನ್ನಾವರ, ಜುಲೈ 11: ಹೊನ್ನಾವರ, ಜುಲೈ 11: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲಿ ಮತ್ತೆ ಪ್ರವಾಸಿಗರು ನೀರು ಪಾಲಾದ ದುರ್ಘಟನೆ ನಡೆದಿದೆ. ಈಜಲು ಹೋಗಿದ್ದ 16 ಮಂದಿ ನೀರಿನ ಸೆಳೆತಕ್ಕೆ ಸಿಲುಕಿದ್ದು, ಈ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ.
ಇಡಗುಂಜಿ ದೇವಾಲಯಕ್ಕೆ ಬಂದಿದ್ದ 16 ಮಂದಿ, ಸ್ನೇಹಿತನೊಬ್ಬರ ಮದುವೆ ಸಮಾರಂಭವನ್ನು ಮುಗಿಸಿಕೊಂಡು ಅಪ್ಸರಕೊಂಡದ ಬಳಿ ಈಜಾಡಲು ಸಮುದ್ರಕ್ಕೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಜಯಂತ್(23), ನೈವೇಶ್(22) ಎಂದು ಗುರುತಿಸಲಾಗಿದೆ. ಮೃತರು ಗಂಗಾವತಿ ಮತ್ತು ಬೆಂಗಳೂರು ಮೂಲದವರು. ಮಿಕ್ಕ 14 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಮಂಕಿ ಠಾಣೆ ಪೊಲೀಸರು, ಸ್ಥಳೀಯರ ಈಜುಗಾರರ ನೆರವಿನಿಂದ ನೀರು ಪಾಲಾದ ಇಬ್ಬರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕುರಿತಂತೆ ಪ್ರ್ರಕರಣ ದಾಖಲಾಗಿದೆ.












Click it and Unblock the Notifications