• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕ್ಕಮಗಳೂರಿನಲ್ಲಿ ಇಬ್ಬರು ನಕ್ಸಲರ ಶರಣಾಗತಿ

|

ಚಿಕ್ಕಮಗಳೂರು, ಡಿ.8 : ಕರ್ನಾಟಕದ ಇಬ್ಬರು ನಕ್ಸಲ್ ನಾಯಕರು ಪೊಲೀಸರಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಶರಣಾಗಿದ್ದಾರೆ. ಜುಲ್ಫೀಕರ್‌ ವಿರುದ್ಧ 4 ಮತ್ತು ನಾಗರಾಜ್ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ

ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯರು ಕಳೆದ ಒಂದು ವರ್ಷದಿಂದ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ನಕ್ಸಲರು ಇಂದು ಶರಣಾಗಿದ್ದಾರೆ. ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಅವರನ್ನು ಇಂದು ಬೆಳಗ್ಗೆ ಚಿಕ್ಕಮಗಳೂರು ಪ್ರವಾಸಿ ಮಂದಿರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್, ಶಿವಸುಂದರ್, ನಗರಿ ಬಾಬಯ್ಯ ಮುಂತಾದವರು ಬರಮಾಡಿಕೊಂಡರು.

ಮಧ್ಯಾಹ್ನ ಹೆಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್ ಮುಂತಾದವರೊಂದಿಗೆ ಸಿರಿಮನೆ ನಾಗರಾಜ್ ಹಾಗೂ ನೂರ್‌ ಜುಲ್ಫೀಕರ್‌ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಿದರು. [ಇಬ್ಬರು ನಕ್ಸಲರ ಶರಣಾಗತಿ]

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್ ಐದು ವರ್ಷಗಳ ಹಿಂದೆಯೇ ಶರಣಾಗುವ ಆಲೋಚನೆ ಇತ್ತು. ಆದರೆ, ನಮ್ಮ ವಿರುದ್ಧ ಹಲವು ದೂರುಗಳು ದಾಖಲಾಗಿದ್ದರಿಂದ ಕಾನೂನು ತೊಡಕು ಉಂಟಾಗಿ ಅದು ಸಾಧ್ಯವಾಗಲಿಲ್ಲ ಎಂದರು.

ಸಿರಿಮನೆ ನಾಗರಾಜ್ : ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಸಿರಿಮನೆ ಗ್ರಾಮದಲ್ಲಿ 1952ರಲ್ಲಿ ಜನಿಸಿದ ನಾಗರಾಜ್ ಬಿಎಸ್‍ಸಿ ಪದವೀಧರರು. 1973ರಲ್ಲಿ ಮೈಸೂರಿನಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ವೇಳೆ ಕಮ್ಯೂನಿಸ್ಟ್ ವಿಚಾರಧಾರೆಯತ್ತ ಪ್ರಭಾವಿತರಾಗುತ್ತಾರೆ.

1990ರಲ್ಲಿ ಸಾಕೇತ್ ರಾಜನ್ ಭೇಟಿಯಾಗಿ ಪೀಪಲ್ಸ್ ವಾರ್ ಪಕ್ಷದ ಸಂಪರ್ಕ ಪಡೆದು ಕರ್ನಾಟಕ ವಿಮೋಚನಾ ರಂಗಕ್ಕೆ ಸೇರ್ಪಡೆಯಾಗುತ್ತಾರೆ. 2000ದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿಸಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು 2004ರಿಂದ ಭೂಗತರಾಗಿದ್ದರು.

ನೂರ್‌ ಜುಲ್ಫೀಕರ್‌ : ಚಿತ್ರದುರ್ಗದಲ್ಲಿ 1967ರಲ್ಲಿ ಜನಿಸಿಸಿದ ನೂರ್‌ ಜುಲ್ಫೀಕರ್‌ (ನೂರ್ ಶ್ರೀಧರ್) ಚಿತ್ರದರ್ಗುದ ಜೆಎಂಎಂಐಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‌ 5ನೇ ಸೆಮಿಸ್ಟರ್ ಓದಿದ್ದಾರೆ. ಇಂಜಿನಿಯರಿಂಗ್ ಓದುವ ವೇಳೆ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಗಳಿಂದ ನಕ್ಸಲ್ ಚಳುವಳಿಯ ಪರಿಚಯವಾಗಿತ್ತು.

2001ರಿಂದ 2006ವರೆಗೆ ಮಾವೋವಾದಿ ಪಕ್ಷದಲ್ಲಿ ದೊಡ್ಡ ನಾಯಕರಾಗಿದ್ದ ನೂರ್‌ ಜುಲ್ಫೀಕರ್‌ 2004ರಲ್ಲಿ ಸಾಕೇತ್ ರಾಜನ್ ಎನ್‍ಕೌಂಟರ್ ಆದ ಬಳಿಕ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾಗಬೇಕೆಂಬ ಪ್ರಸ್ತಾಪವನ್ನು ಕೇಂದ್ರ ಸಮಿತಿ ಇವರ ಮುಂದೆ ಇಟ್ಟಿತ್ತು. ಆದರೆ ಇವರು ನಿರಾಕರಿಸಿದ್ದರು. 2006ರಿಂದ ಇವರು ಭೂಗತರಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two former CPI (Maoist) leaders Noor Zulfikar (47) and Sirimane Nagaraj (62) joined the mainstream. They will present themselves before Chikkamagaluru DC B.S.Shekarappa on December 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more