ಸಿಯಾಚಿನ್ ಭೀಕರತೆ ಎದುರಿಸಿ ಸಾವು ಗೆದ್ದ ಕೊಡಗಿನ ಯೋಧರು

By: ಬಿ.ಎಂ ಲವಕುಮಾರ್
Subscribe to Oneindia Kannada

ಮಡಿಕೇರಿ,ಫೆಬ್ರವರಿ,13: ಹನುಮಂತಪ್ಪ ಕೊಪ್ಪದ ಸೇರಿದಂತೆ ಹತ್ತು ಮಂದಿ ಹಿಮಪಾತಕ್ಕೆ ವೀರಮರಣವನ್ನಪ್ಪಿದ ಬಳಿಕ ಸಿಯಾಚಿನ್ ಯುದ್ಧ ಭೂಮಿಯ ಸಂಕಷ್ಟ ಏನು? ಅಲ್ಲಿ ನಮ್ಮ ಯೋಧರು ಎದುರಿಸುವ ಸಂಕಷ್ಟಗಳೇನು? ಎಂಬ ಚಿತ್ರಣ ಈಗ ಎಲ್ಲರ ಕಣ್ಮುಂದೆ ಹಾದು ಹೋಗುತ್ತಿದೆ.

ತಮ್ಮ ಸೇವಾವಧಿಯಲ್ಲಿ ಇಂತಹ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿ ಬಂದ ಹಲವು ವೀರಯೋಧರು ಕೊಡಗಿನಲ್ಲಿದ್ದಾರೆ. ಅವರು ಕೇವಲ ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳದೆ ಇತರೆ ಯೋಧರನ್ನು ರಕ್ಷಿಸಿ ಭಾರತಾಂಭೆಯ ಹೆಮ್ಮೆಯ ಪುತ್ರರಾಗಿದ್ದಾರೆ. ಯೋಧನನ್ನು ಪ್ರಾಣದ ಹಂಗು ತೊರೆದು ರಕ್ಷಿಸುವುದು ಸುಲಭದ ಕೆಲಸವಲ್ಲ. ಇಂತಹ ಉತ್ತಮ ಕಾರ್ಯವನ್ನು ಮಾಡಿದ ಆ ಕಷ್ಟದ ದಿನಗಳನ್ನು ಕೊಡಗಿನ ಇಬ್ಬರು ಯೋಧರು ನೆನಪಿಸಿಕೊಂಡಿದ್ದಾರೆ.[ಕರ್ನಾಟಕ ಹೆಮ್ಮೆಯ ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]

 Two Madikeri soldiers saved other soldiers life in Siachen from few years back

ಲೆ.ಕ.ಉತ್ತಯ್ಯ: ಅವಿವಾಹಿತರಾಗಿರುವ ಮಡಿಕೇರಿಯ ಸಂಪಿಗೆಕಟ್ಟೆ ನಿವಾಸಿ, ನಿವೃತ್ತ ಜೀವನ ನಡೆಸುತ್ತಿರುವ ಇವರು ಸೇವಾವಧಿಯಲ್ಲಿ ಎರಡು ವರ್ಷಗಳ ಕಾಲ ಸಿಯಾಚಿನ್ ಯುದ್ದ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಸೇವಾ ಅವಧಿಯಲ್ಲಿ ಹಿಮಪಾತದ ಪ್ರಪಾತದಲ್ಲಿ ಸಿಲುಕಿದ್ದ 20 ಮಂದಿ ಯೋಧರಲ್ಲಿ 10 ಮಂದಿ ಸೈನಿಕರನ್ನು ರಕ್ಷಣೆ ಮಾಡಿ ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. 1988-89ರಲ್ಲಿ 2 ವರ್ಷ ಕಾಲ ಸಿಯಾಚಿನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.[ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]

ಅವರ ಪ್ರಕಾರ ಸಿಯಾಚಿನ್ ಯುದ್ಧ ಭೂಮಿಯಲ್ಲಿ ಸೇವೆ ಮಾಡಲು ಪುಣ್ಯ ಮಾಡಿರಬೇಕು. ಗಂಡೆದೆಯುಳ್ಳ ಶಕ್ತಿಯನ್ನು ಹೊಂದಿರಬೇಕು. ಅಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಮೆದುಳಿನ ರಕ್ತ ಹೆಪ್ಪುಗಟ್ಟುತ್ತದೆ. ಇಂತಹ ಭಯಂಕರ ಸಮಸ್ಯೆಗಳಿಂದ ಸೈನಿಕರು ಮಾನಸಿಕವಾಗಿ ಬಳಲುತ್ತಿರುತ್ತಾರೆ. ಅವಕಾಶ ದೊರೆತರೆ ಮತ್ತೊಮ್ಮೆ ಸೇವೆ ಮಾಡಲು ಸಿದ್ಧ ಎಂದು ಅವರು ಆತ್ಮವಿಶ್ವಾಸದ ಮಾತನಾಡುತ್ತಾರೆ.

ಸುಬೇದಾರ್ ಐಮಂಡ ಸೋಮಯ್ಯ:

ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಐಮಂಡ ಸೋಮಯ್ಯ ಅವರು ಮರಾಠ ಲಗು ಪದಾತಿದಳದ ಸುಭೇದಾರ್ ಆಗಿದ್ದವರು. 1988ರಲ್ಲಿ ಸಿಯಾಚಿನ್ ನಲ್ಲಿ 92 ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.[ಹನುಮಂತಪ್ಪನ ಸಾವಿಗೆ ಬಿಕ್ಕಿಬಿಕ್ಕಿ ಅಳುತ್ತಿರುವ ಬೆಟದೂರು]

ಸಿಯಾಚಿನ್ ಯುದ್ಧ ಭೂಮಿಯಲ್ಲಿ ತನ್ನ 10 ಮಂದಿ ಸಹ ಯೋಧರೊಂದಿಗೆ ಕರ್ತವ್ಯ ಸಲ್ಲಿಸುವ ಸಂದರ್ಭ ಆಕಸ್ಮಿಕವಾಗಿ ಸಿಪಾಯಿಯೊಬ್ಬರು ಭೀಕರ ಹಿಮಪಾತಕ್ಕೆ ಸಿಲುಕಿ ಪ್ರಪಾತಕ್ಕೆ ತಳ್ಳಲ್ಪಟ್ಟರಂತೆ. ಕೂಡಲೇ ಕಾರ್ಯಪ್ರವೃತ್ತರಾದ ಐಮಂಡ ಸೋಮಯ್ಯ ಅವರು ತನ್ನ ಇತರ ಸಿಪಾಯಿಗಳ ಸಹಕಾರದಿಂದ ಹಿಮಪ್ರಪಾತದೊಳಗೆ ಸಿಲುಕಿದ್ದ ಸಿಪಾಯಿಯನ್ನು ರಕ್ಷಿಸಲು ಸಾಕಷ್ಟು ಹರಸಾಹಸ ಪಟ್ಟರು.

ಆದರೂ ಐಮಂಡ ಸೋಮಯ್ಯ ಧೃತಿಗೆಡದೆ ತನ್ನ ದೇಹಕ್ಕೆ ಹಗ್ಗ ಕಟ್ಟಿ ಇಳಿದು ಹಿಮಪ್ರಪಾತದಲ್ಲಿ ಸಿಲುಕಿದ ಸಿಪಾಯಿಯನ್ನು ರಕ್ಷಿಸಿದ್ದಾರೆ. ಬಳಿಕ ಸೇನಾ ತಂಡದೊಂದಿಗೆ ಅವರನ್ನು ಬಾರಾಮುಲ್ಲ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಿಯಾಚಿನ್ ಎಂಬ ಯುದ್ಧಭೂಮಿಯನ್ನು ನೋಡಿ ಬಂದವರಿಗೆ ಅದೊಂದು ನಿಜಕ್ಕೂ ಅವಿಸ್ಮರಣೀಯ ಅನುಭವ.[ಹನುಮಂತಪ್ಪ ಕುಟುಂಬಕ್ಕೆ 25 ಲಕ್ಷ ಪರಿಹಾರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two Madikeri soldiersn Subedar Imanda Somayya and Le.Ka Uttayya saved other soldiers in Siachen. Siachen is the world's highest battle ground.
Please Wait while comments are loading...