Get Updates
Get notified of breaking news, exclusive insights, and must-see stories!

ಆರ್.ಡಿ ಪರೇಡ್ ನೋಡಲಿದ್ದಾರೆ ಪುಟ್ಟಮ್ಮ, ರುದ್ರಪ್ಪ

ಚಾಮರಾಜನಗರ, ಜ.21 : ದೇಶದ ಹೆಮ್ಮೆಯ ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಲು ರಾಜ್ಯದ ಇಬ್ಬರು ಬುಡಕಟ್ಟು ಜನರಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಕಾಡು ಮಾತ್ರ ನಮ್ಮ ಬದುಕು ಎಂದು ಬದುಕುತ್ತಿರುವ ಬುಡಕಟ್ಟು ಪಂಗಡದ ಇಬ್ಬರು ಈ ಬಾರಿ ವಿಮಾನವೇರಿ ದೆಹಲಿಗೆ ತೆರಳಲಿದ್ದು, ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲಿದ್ದಾರೆ.

ಪ್ರತಿ ವರ್ಷ ಕರ್ನಾಟಕದಿಂದ ಗಣರಾಜ್ಯೋತ್ಸವದ ಕಾರ್ಯಕ್ರಮಗಳು, ಪರೇಡ್ ವೀಕ್ಷಣೆ ಮತ್ತು ವಿಶೇಷ ಔತಣಕೂಟಕ್ಕೆ ಪರಿಶಿಷ್ಟ ಪಂಗಡದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಬುಡುಕಟ್ಟು ವ್ಯವಹಾರಗಳ ಮಂತ್ರಾಲಯ ಆಹ್ವಾನಿಸುತ್ತದೆ. ಮೈಸೂರಿನ ರಾಜ್ಯ ಗಿರಿಜನ ಸಂಶೋಧನಾ ಸಂಸ್ಧೆ ಇವರನ್ನು ಆಯ್ಕೆ ಮಾಡಿ ಕಳುಹಿಸುತ್ತದೆ.

Republic Day parade

ಅದರಂತೆ ಈ ಬಾರಿ ಬಾಗಲಕೋಟೆ ಜಿಲ್ಲೆಯ ಸಿದ್ದಾಪುರ ಗ್ರಾಮದ ಶ್ರೀಶೈಲ ರುದ್ರಪ್ಪ ಅಂಟಿನ್ ಮತ್ತು ಚಾಮರಾಜನಗರ ಜಿಲ್ಲೆಯ ಸೋಲಿಗ ಮಹಿಳೆ ಪುಟ್ಟಮ್ಮ ಅವರನ್ನು ಆಯ್ಕೆ ಮಾಡಲಾಗಿದ್ದು, ಇಬ್ಬರನ್ನೂ ಕರೆದೊಯ್ಯುವ ಜವಾಬ್ದಾರಿಯನ್ನು ಚಾಮರಾಜನಗರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಿ.ಎಸ್. ಸೋಮಶೇಖರ ಅವರಿಗೆ ವಹಿಸಲಾಗಿದೆ.

ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದ ಸೋಲಿಗ ಜನಾಂಗದ ಮಹಿಳೆ ಪುಟ್ಟಮ್ಮ ಗುಂಡ್ಲುಪೇಟೆ ತಾಲೂಕು ಆದಿವಾಸಿ ಬುಡಕಟ್ಟು ಸಂಘದ ಅಧ್ಯಕ್ಷೆ ಹಾಗೂ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಿರಿಜನರ ಪುನರ್ ವಸತಿ, ಹಕ್ಕುಪತ್ರ ವಿತರಣೆ, ಪಡಿತರ ವ್ಯವಸ್ಥೆ, ಶಿಕ್ಷಣ ಸೇರಿದಂತೆ ಹಲವು ಹೋರಾಟದಲ್ಲಿ ಕಳೆದೆರಡು ದಶಕಗಳಿಂದ ಹೋರಾಡುತ್ತಿದ್ದಾರೆ.

ಆದ್ದರಿಂದ ಅವರನ್ನು ಈ ಬಾರಿ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಆಹ್ವಾನಿಸಲಾಗಿದೆ. ಗಣರಾಜ್ಯೋತ್ಸವದ ಕಾರ್ಯಕ್ರಮಗಳು, ಪರೇಡ್ ವೀಕ್ಷಣೆ ಜತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರನ್ನು ಭೇಟಿಯಾಗುವ ಅವಕಾಶವೂ ಪುಟ್ಟಮ್ಮ ಮತ್ತು ರುದ್ರಪ್ಪ ಅವರಿಗೆ ದೊರೆಯಲಿದೆ. ಇಬ್ಬರು ಜ.26ರಂದು ಮಧ್ಯಾಹ್ನ ರಾಷ್ಟ್ರಪತಿಯೊಂದಿಗೆ ವಿಶೇಷ ಔತಣಕೂಟದಲ್ಲಿಯೂ ಭಾಗವಹಿಸಲಿದ್ದಾರೆ.

ಸೋಲಿಗರು ಕಾಡನ್ನು ಬಿಟ್ಟು ನಾಡಿಗೆ ಬರಲು ಭಯ ಪಡುತ್ತಾರೆ. ಹಲವು ಹೋರಾಟಗಳಲ್ಲಿ ಭಾಗವಹಿಸಿ ಸ್ವಲ್ಪ ಮಟ್ಟಿಗೆ ನಾಡಿನ ಪರಿಚಯವಿದ್ದ ಪುಟ್ಟಮ್ಮ ಮತ್ತು ರುದ್ರಪ್ಪ ಅಂಟಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರಿಬ್ಬರನ್ನು ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಸರ್ಕಾರ ತಮನೆ ನೀಡಿದೆ ಎಂದು ಸೋಮಶೇಖರ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+