ಕೊಪ್ಪಳ : ಕೊಂಡ ಹಾಯುವಾಗ ಬಿದ್ದು ಇಬ್ಬರಿಗೆ ಗಾಯ

By: ನಮ್ಮ ಪ್ರತಿನಿಧಿ
Subscribe to Oneindia Kannada

ಕೊಪ್ಪಳ, ಅಕ್ಟೋಬರ್ 10 : ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆಸಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ಮುಂಜಾನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಈ ಘಟನೆ ನಡೆಸಿದೆ. ಚಿಕ್ಕ ಬೆಣಕಲ್ ಗ್ರಾಮದ ಖಾದರ್ ಸಾಬ ಮತ್ತು ಜಮಪುರ ಗ್ರಾಮದ ಖಾಜಾಸಾಬ ಗಾಯಗೊಂಡವರು.

ತುಮಕೂರು : ಕೊಂಡ ಹಾಯುವ ವೇಳೆ 30 ಜನರಿಗೆ ಗಾಯ

fire

ಮೊಹರಂ ಹಬ್ಬದ ನಂತರ ಅದೇ ಮಾದರಿಯಲ್ಲಿ ನಡೆಯುವ ಕೌಡೇಪೀರ ಹಬ್ಬದ ಆಚರಣೆ ವೇಳೆ ಕೊಂಡ ಹಾಯಲಾಗುತ್ತದೆ. ಇಂದು ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಕೊಂಡ ಹಾಯುವಾಗ ಇಬ್ಬರು ಆಯತಪ್ಪಿ ಬಿದ್ದಿದ್ದಾರೆ.

ಕೊಡಗಿನಲ್ಲೊಂದು ಗುಡಿಗೋಪುರವಿಲ್ಲದ ದೇಗುಲ

ಕೊಂಡ ಹಾಯುವಾಗ ಮೊದಲು ಖಾದರ್ ಸಾಬ ಅವರು ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಹೋದ ಖಾಜಾಸಾಬರಿಗೂ ಸುಟ್ಟಗಾಯಗಳಾಗಿವೆ. ಇವರಿಬ್ಬರು ಕೌಡೇಪೀರ ಹಬ್ಬವನ್ನು ನೋಡಲು ಆಗಮಿಸಿದ್ದರು.

ಖಾಜಾಸಾಬ ಅವರನ್ನು ಗಂಗಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರವಾದ ಸುಟ್ಟ ಗಾಯಗಳಾಗಿದ್ದ ಖಾದರ್ ಸಾಬ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2 injured after falling into a pit of fire on Tuesday, October 10, 2017 early morning during festival in Koppal district, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ