ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಗುರು ಮೀಸೆಯ ಪ್ರಿಯಕರನ ಜೊತೆ 2 ಮಕ್ಕಳ ತಾಯಿ ಪರಾರಿ

By Balaraj
|
Google Oneindia Kannada News

ಚನ್ನಪಟ್ಟಣ, ಜೂನ್ 18 : ಕಾಮಕ್ಕೆ ಕಣ್ಣಿಲ್ಲಾ ಅನ್ನೋದು ಇದಕ್ಕೇ ಇರಬಹುದು? ಇಪ್ಪತ್ತರ ಹರೆಯದ, ಕಟ್ಟುಮಸ್ತಾದ ಹುಡುಗನ ಜೊತೆ ಎರಡು ಮಕ್ಕಳ ತಾಯಿ ರಾತ್ರೋರಾತ್ರಿ ಪರಾರಿಯಾದ ಘಟನೆ ಚನ್ನಪಟ್ಟಣದಿಂದ ವರದಿಯಾಗಿದೆ.

ಕೇವಲ ಆರು ತಿಂಗಳ ಹಿಂದೆ ಪರಿಚಯವಾಗಿದ್ದ ಹುಡುಗನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎರಡು ಮಕ್ಕಳ ತಾಯಿ, ತನ್ನಿಬ್ಬರೂ ಮಕ್ಕಳ ಜೊತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. (ಅತ್ತೆ ಜೊತೆಗಿನ ಪತಿಯ ಅನೈತಿಕ ಸಂಬಂಧ)

ನನ್ನ ಗಂಡನ ಜೊತೆ ನನಗೆ ಸಂಸಾರ ನಡೆಸಲು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಪ್ರಿಯಕರನೊಂದಿಗೆ ಮನೆಬಿಟ್ಟು ಹೋಗುತ್ತಿದ್ದೇನೆ. ನನ್ನ ಮಕ್ಕಳನ್ನೂ ನನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದೇನೆ. ನಮ್ಮನ್ನು ಹುಡುಕುವ ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಪತ್ರ ಬರೆದು ಕಾಲ್ಕಿತ್ತಿದ್ದಾಳೆ. [ಅಯ್ಯೋ ದೇವ್ರೆ, ಇನಿಯನಿಗಾಗಿ ಗಂಡ ಮಕ್ಕಳ ಧಿಕ್ಕರಿಸಿದಳೆ]

Two children's mother run away with her boy friend in Channapattana

ಇತ್ತ ಈಕೆಯ ಪ್ರಿಯಕರ ಕೂಡಾ ತನ್ನ ಪೋಷಕರಿಗೆ 'ನಾನು ಮೆಚ್ಚಿದ ಆಂಟಿಯೊಂದಿಗೆ ಮನೆಬಿಟ್ಟು ಹೋಗುತ್ತಿದ್ದೇನೆ. ಈಕೆಯ ಜೊತೆಗೆ ನೆಮ್ಮದಿಯಿಂದ ಬಾಳುತ್ತೇನೆ, ನನ್ನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ' ಎಂದು ಪತ್ರ ಬರೆದಿಟ್ಟು ಹೋಗಿದ್ದಾನೆ.

ಚನ್ನಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೇವೂರು ಗ್ರಾಮದ ಮಹಿಳೆಗೆ 14 ಮತ್ತು 9ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದು, ಈಕೆಯ ಇಪ್ಪತ್ತು ವರ್ಷದ ಪ್ರಿಯಕರ ಬೆಂಗಳೂರಿನಲ್ಲಿ ಜಿಮ್ ನಡೆಸುತ್ತಿದ್ದಾನೆ.

ಪರಾರಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರುತ್ತಿದ್ದಂತೆಯೇ, ಪ್ರಿಯಕರನ ಜೊತೆ ಮನೆ ಬಿಟ್ಟು ಹೋಗಿದ್ದ ಮಹಿಳೆ ಮತ್ತು ಈಕೆಯ ಪತಿಯನ್ನು ಠಾಣೆಗೆ ಕರೆಸಿ ರಾಜೀ ಸಂಧಾನಕ್ಕೆ ಪೊಲೀಸರು ಮುಂದಾದರು. (ಪರಪುರುಷನ ತೆಕ್ಕೆಗೆ ಬಿದ್ದ ಪತ್ನಿಯನ್ನು ಕೊಂದ ಪತಿ)

ಮಕ್ಕಳೊಂದಿಗೆ ವಾಪಸ್ ಮನೆಗೆ ಬರಲು ಪತಿ ಮನವಿ ಮಾಡಿದರೂ, ಪ್ರಿಯಕರನನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಮಹಿಳೆ ಪಟ್ಟು ಹಿಡಿದ ನಂತರ ಅವಳ ಇಷ್ಟದಂತೆ ಬಿಡಲು ಪೊಲೀಸರು ಮತ್ತು ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ.

ಮಾತುಕತೆಯ ನಂತರ ಹಿರಿಯ ಮಗಳು ಅಪ್ಪನ ಜೊತೆ ಮತ್ತು ಕಿರಿಯ ಮಗಳು ಅಮ್ಮನ ಜೊತೆ ಇರುವಂತೆ ಸೂಚಿಸಿ, ಪ್ರಕರಣಕ್ಕೆ ಪೊಲೀಸರು ಮಂಗಳ ಹಾಡಿದ್ದಾರೆ. ಇಬ್ಬರು ಮಕ್ಕಳಿಗೆ ತಂದೆತಾಯಿ ಜೊತೆ ಒಟ್ಟಿಗೆ ಬಾಳುವ ಅವಕಾಶ ಇಲ್ಲದಿರುವುದು ಮಾತ್ರ ದುರದೃಷ್ಟಕರ.

English summary
Two children's mother run away with her boy friend, incident reported in Channapattana rural police station limit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X