ಸಿದ್ದರಾಮಯ್ಯ ಬಗ್ಗೆ ಕುಹಕ ಟ್ವೀಟ್ ಮಾಡಿದ ಅಮಿತ್ ಗೆ ಛೀಮಾರಿ!

Posted By:
Subscribe to Oneindia Kannada
   ಸಿದ್ದರಾಮಯ್ಯ ಸೆಲ್ಫಿ ವಿವಾದ : ಟ್ವಿಟ್ಟಿಗರು ಬಿಜೆಪಿ ಅಮಿತ್ ಮಳವಿಯಾಗೆ ಛೀಮಾರಿ | Oneindia Kannada

   ಬೆಂಗಳೂರು, ಜನವರಿ 11: ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್‌ ಮಾಳವೀಯ ಮತ್ತೆ ಸುದ್ದಿಯಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಮಹಿಳೆಯರ ಗುಂಪಿನ ಜತೆ ಸೆಲ್ಫಿ ತೆಗೆಸಿಕೊಳ್ಳುವ ವಿಡಿಯೋ ಟ್ವೀಟ್ ಮಾಡಿ ಕುಹಕವಾಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರಲ್ಲದೆ, ಅನೇಕ ಕನ್ನಡಿಗರು ಕೂಡಾ ಛೀಮಾರಿ ಹಾಕಿದ್ದು, ಇಂಥ ಕೀಳು ಅಭಿರುಚಿ ಒಳ್ಳೆಯದಲ್ಲ ಎಂದಿದ್ದಾರೆ.

   ಬಿಜೆಪಿ ರಾಷ್ಟ್ರೀಯ ಘಟಕದ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು, 'ಸಿದ್ದರಾಮಯ್ಯ ಸಾರ್ವಜನಿಕವಾಗಿ ಮಹಿಳೆಯ ಮೈ ಮುಟ್ಟಬಹುದೇ? ಕೈ ತೆಗೆಯಿರಿ' ಎಂಬ ಸಂದೇಶದೊಂದಿಗೆ ವಿಡಿಯೋ ಟ್ವೀಟ್ ಮಾಡಿದ್ದು ಚರ್ಚೆಯಾಗುತ್ತಿದೆ.

   ಶಿವಮೊಗ್ಗದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯುವತಿಯರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಸಿದ್ದರಾಮಯ್ಯ ಯುವತಿಯೊಬ್ಬರ ತೋಳು ಹಿಡಿದು ಹತ್ತಿರಕ್ಕೆ ಎಳೆದಿರುವ ವಿಡಿಯೊ ಅನ್ನು ಅಮಿತ್‌ ಮಾಳವೀಯ ಮಂಗಳವಾರ ಟ್ವೀಟ್‌ ಮಾಡಿದ್ದರು.

   'ಬಿಜೆಪಿ ಶಾಸಕರಾಗಿದ್ದವರು ಸದನದಲ್ಲಿ ಅಶ್ಲೀಲ ದೃಶ್ಯ ನೋಡಿದ್ದು ಸರಿಯೇ' ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ. ಟ್ವೀಟ್ ಗಳು ಮುಂದಿವೆ...

   ಕಾಮಾಲೆ ಕಣ್ಣಿಗೆ ನೋಡಿದ್ದೆಲ್ಲಾ ಹಳದಿ

   ಕಾಮಾಲೆ ಕಣ್ಣಿಗೆ ನೋಡಿದ್ದೆಲ್ಲಾ ಹಳದಿ

   ‘ಕಾಮಾಲೆ ಕಣ್ಣಿಗೆ ನೋಡಿದ್ದೆಲ್ಲಾ ಹಳದಿಯಾಗಿ ಕಾಣುತ್ತದೆ. ಆ ಹುಡುಗಿ ಸಿದ್ದರಾಮಯ್ಯ ಅವರ ಮೊಮ್ಮಗಳ ವಯಸ್ಸಿನವಳು. ರಟ್ಟೆ ಹಿಡಿದು ಹತ್ತಿರಕ್ಕೆ ಕರೆದರೆ ತಪ್ಪೇನು?' ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

   ವಿವಾದಕ್ಕೆ ಕಾರಣವಾದ ಟ್ವೀಟ್

   ಬಿಜೆಪಿ ರಾಷ್ಟ್ರೀಯ ಘಟಕದ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು, ‘ಸಿದ್ದರಾಮಯ್ಯ ಸಾರ್ವಜನಿಕವಾಗಿ ಮಹಿಳೆಯ ಮೈ ಮುಟ್ಟಬಹುದೇ? ಕೈ ತೆಗೆಯಿರಿ' ಎಂಬ ಸಂದೇಶದೊಂದಿಗೆ ವಿಡಿಯೋ ಟ್ವೀಟ್ ಮಾಡಿದ್ದು ಚರ್ಚೆಯಾಗುತ್ತಿದೆ.

   ನಿಮ್ಮದು ಕೊಳಕು ಮನಸು ಎಂದು ದಿನೇಶ್

   ನಿಮ್ಮದು ಕೊಳಕು ಮನಸು, ಕೀಳು ಅಭಿರುಚಿ ಟ್ವೀಟ್ ಎಂದು ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿದ್ದಾರೆ.

   ನಿಜವಾದ ಬಣ್ಣ ಬಯಲಾಗುತ್ತಿದೆ

   ಚುನಾವಣೆ ಹತ್ತಿರವಾಗುತ್ತಿದ್ದಂತೆ, ಬಿಜೆಪಿ ತನ್ನ ನಿಜವಾದ ಬಣ್ಣ ಬಯಲಾಗುತ್ತಿದೆ.

   ಇದರಲ್ಲಿ ಸಿಎಂ ತಪ್ಪೇನಿಲ್ಲ

   ಇದರಲ್ಲಿ ಸಿಎಂ ತಪ್ಪೇನಿಲ್ಲ. ಪಾಪ ಸೆಲ್ಫಿಗಾಗಿ ಕಷ್ಟಪಡುತ್ತಿದ್ದವರಿಗೆ ಸಹಾಯ ಮಾಡಿದ್ದಾರಷ್ಟೇ.

   ನಿಮ್ಮ ಆರೋಪ, ನಿಮ್ಮ ಸಂಸ್ಕೃತಿ ಬಿಂಬಿಸುತ್ತದೆ

   ನಿಮ್ಮ ಟ್ವೀಟ್ ಪಕ್ಷದ ಪರಂಪರೆ , ಸಂಸ್ಕೃತಿ & ಎಂತಾ ವಿಕ್ರುತ ಮನಸ್ಸುಳ್ಳವರು ಎಂಬುದನ್ನ ಎತ್ತಿ ತೋರಿಸುತ್ತದೆ.

   ಕಾಮಾಲೆ ಕಣ್ಣಿಗೆ ನೋಡಿದ್ದೆಲ್ಲಾ ಹಳದಿ

   ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಈ ರೀತಿ ಆರೋಪ ಮಾಡುವ ಕಪಟವೇಷದಾರಿಗಳಾದ (hypocrites) ಸಂಘಪರಿವಾರದವರು ಪರಿವಾರವೆ ಇಲ್ಲದೆ ಸಂಘ ಹೇಗೆ ಕಟ್ಟುತ್ತಿದ್ದಾರೆ

   ಶೇಮ್ ಎಂದ ಸಾರ್ವಜನಿಕರು

   ಇಂಥ ಕೀಳು ಅಭಿರುಚಿಯ ಟ್ವೀಟ್ ಮಾಡಿದ ನೀವು ಆ ಹೆಣ್ಣನ್ನು ಅವಮಾನಿಸುತ್ತಿದ್ದೀರಾ, ಇಂಥ ಕೆಟ್ಟ ನಡೆಯಿಂದ ಪಕ್ಷಕ್ಕೆ ಅವಮಾನ ಎಂದಿದ್ದಾರೀ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Twitterati slammed BJP's IT Cell head Amit Malviya for his tweet on CM Siddaramaiah Selfie incident. He Tweeted video of Siddaramaiah taking a selfie with a group of Women on stage and questioned if he can ‘keep his hands off women in public’.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ