BJP VS Congress ಬಿಜೆಪಿ ಶಾಸಕರ ಸಸ್ಪೆಂಡ್: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ವಾರ್

ಬೆಂಗಳೂರು,ಜುಲೈ 19: ವಿಧಾನಸಭೆ ಸ್ಪೀಕರ್ ಪೀಠಕ್ಕೆ ‌ಅಗೌರವ ತೋರಿಸಿದ ಕಾರಣಕ್ಕಾಗಿ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದ್ದು, ಬಿಜೆಪಿ ಸದಸ್ಯರ ಸಸ್ಪೆಂಡ್‌ ಹಿನ್ನಲೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಟ್ವೀಟ್‌ ವಾರ್‌ ಮುಂದುವರೆದಿದೆ.

10 ಜನ ಬಿಜೆಪಿ ಶಾಸಕರ ಅಮಾನತು ಮಾಡಿರುವುದನ್ನ ಖಂಡಿಸಿರುವ ಬಿಜೆಪಿ ಟ್ವೀಟ್‌ ಮೂಲಕ ಕಿಡಿಕಾರಿದೆ. ರಾಜ್ಯದಲ್ಲಿ ಸರ್ವಾಧಿಕಾರಿ ಸಿದ್ದರಾಮಯ್ಯರವರ ಸರ್ಕಾರದ ತುಘಲಕ್ ದರ್ಬಾರ್ ಮಿತಿ ಮೀರಿದೆ. ಇವರು ಮಾಡುವ ಅನಾಚರಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನಮ್ಮ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ನೀವು ನಮ್ಮ ಶಾಸಕರನ್ನು ಅಮಾನತು ಮಾಡಬಹುದು, ಹತ್ತಿಕ್ಕಲು ಸಾಧ್ಯವಿಲ್ಲ. ನಿಮ್ಮ ಈ ರಣಹೇಡಿ ದಬ್ಬಾಳಿಕೆಗೆ ನಾವು ಕುಗ್ಗುವುದಿಲ್ಲ.ನಿಮ್ಮ ಜನ ವಿರೋಧಿ, ನಾಡ ವಿರೋಧಿ ನಿಲುವುಗಳ ವಿರುದ್ಧ ನಮ್ಮ ಹೋರಾಟ ಶತ ಸಿದ್ಧ ಎಂದು ಬಿಜೆಪಿ ಕಿಡಿಕಾರಿದೆ.

Twitter War

ರಾಜ್ಯದ ಹಿರಿಯ ಐ.ಎ.ಎಸ್. ಅಧಿಕಾರಿಗಳನ್ನು ತಮ್ಮ ಮನೆಯಾಳುಗಳನ್ನಾಗಿ ನಡೆಸಿಕೊಂಡಿರುವ ಕಾಂಗ್ರೆಸ್, ಅದನ್ನು ಪ್ರಶ್ನಿಸಿದ್ದಕ್ಕೆ ತನ್ನ ದಮನಕಾರಿ ಹಾಗೂ ಸೇಡಿನ ರಾಜಕೀಯವನ್ನು ಸ್ಪೀಕರ್ ಮೂಲಕ ಮಾಡಿಸುತ್ತಿದೆ. ಕಾಂಗ್ರೆ‌ಸ್‌ನ ಈ ಸಂವಿಧಾನ ವಿರೋಧಿ ನಿಲುವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಹೇಳಿದೆ.

ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ನಿಮಗೆ ಯಾವುದೇ ಅರ್ಹತೆ, ನೈತಿಕತೆ ಇಲ್ಲ. ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಕುಖ್ಯಾತಿ ನಿಮ್ಮ ಪಕ್ಷದ್ದು, ಭಾರತದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ನಿಂತು ಪ್ರಶ್ನಿಸಿದ್ದು ನಿಮ್ಮ ಅನರ್ಹ 'ನಾಯಕ'. ಸದನದ ಸ್ಪೀಕರ್ ಹಾಗೂ ಸರಕಾರದ ಉನ್ನತ ಅಧಿಕಾರಿಗಳ ವಿಶೇಷಾಧಿಕಾರವನ್ನು ದುರ್ಬಳಕೆ ಮಾಡುತ್ತಿರುವ ನೀವು ಅನರ್ಹರು ಎಂದು ಬಿಜೆಪಿ, ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದೆ.

ಇನ್ನೂ ಬಿಜೆಪಿ ಶಾಸಕರ ಅಮಾನತು ಕುರಿತು ನಳಿನ್‌ ಕುಮಾರ್‌ ಕಟೀಲ್‌ ಕಿಡಿಕಾರಿದ್ದು, ಈ ಹಿಟ್ಲರ್‌ ಸರ್ಕಾರದ ರೈತ ವಿರೋಧಿ, ನಾಡ ವಿರೋಧಿ, ಜನ ವಿರೋಧಿ ನೀತಿಗಳನ್ನು ನಮ್ಮ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದನ್ನು ಎದುರಿಸಲಾಗದೇ, ಶಾಸಕರನ್ನೇ ಅಮಾನತುಗೊಳಿಸುವ ಮೂಲಕ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಿಸುತ್ತಿದೆ ತುಘಲಕ್ ಸರ್ಕಾರ. ರಣಹೇಡಿ ಸರ್ಕಾರದ ದಬ್ಬಾಳಿಕೆಗೆ ನಾವೆಂದಿಗೂ ಜಗ್ಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇತ್ತ ರಾಜ್ಯ ಬಿಜೆಪಿ ವಿರುದ್ದ ಕಾಂಗ್ರೆಸ್‌ ಕಿಡಿಕಾರಿದ್ದು, ದಲಿತರ ಮೇಲೆ ಬಿಜೆಪಿಗೆ ಇರುವ ಅಸಹನೆ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ. ದಲಿತ ವ್ಯಕ್ತಿಯೊಬ್ಬರು ಸ್ಪೀಕರ್ ಸ್ಥಾನದಲ್ಲಿ ಕುಳಿತಿರುವಾಗ ಅದನ್ನು ಸಹಿಸದ ಬಿಜೆಪಿಗೆ ಸದಸ್ಯರು ಪೇಪರ್ ಹರಿದು ಅವರ ಮುಖಕ್ಕೆ ಎಸಿದಿದ್ದು ಅತ್ಯಂತ ಹೇಯ ಕೃತ್ಯ ಎಂದು ಬಿಜೆಪಿ ಶಾಸಕರ ವಿರುದ್ದ ಟೀಕಿಸಿದೆ.

ಇದು ದಲಿತರ ಗೌರವಕ್ಕೆ ಹಾಗೂ ಸಭಾಧ್ಯಕ್ಷ ಸ್ಥಾನದ ಘನತೆಗೆ ಮಸಿ ಬಳಿದಿರುವ ಕೃತ್ಯ.ದಲಿತ ಸಮುದಾಯದ ಉಪಾಸಭಾಪತಿಗಳಿಗೆ ಅವಮಾನಕರವಾಗಿ ನಡೆದುಕೊಂಡ ಬಿಜೆಪಿಗೆ ದಲಿತರು ಉನ್ನತ ಸ್ಥಾನಕ್ಕೆರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲವೇ? ಎಂದು ಪ್ರಶ್ನಿಸಿದೆ.

ಸ್ಪೀಕರ್ ಸ್ಥಾನಕ್ಕೇ ಗೌರವ ನೀಡದವರು ಜನಸಾಮಾನ್ಯರನ್ನು ಗೌರವಿಸುವರೇ? ಸಭಾಧ್ಯಕ್ಷರ ಮುಖಕ್ಕೆ ಪೇಪರ್ ಎಸಿದಿದ್ದು ಕರ್ನಾಟಕದ ಶಾಸಕಾಂಗದ ಪರಂಪರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಅಲ್ಲದೇ ದಲಿತ ವಿರೋಧಿ ಬಿಜೆಪಿ ಎಂದು ಹ್ಯಾಷ್‌ ಟ್ಯಾಗ್‌ ಬಳಸಿ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+