ವಿಳಾಸದ ವಿಚಾರದಲ್ಲಿ ಸಿದ್ದರಾಮಯ್ಯ, ಡಿವಿಎಸ್ ನಡುವೆ ಕಿತ್ತಾಟ!

ಬೆಂಗಳೂರು, ಏಪ್ರಿಲ್ 7 : ವಿಳಾಸದ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಟ್ವಿಟರ್‌ನಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಅವರ ವಿಳಾಸವನ್ನು ಇವರು, ಇವರ ವಿಳಾಸವನ್ನು ಅವರು ಕೇಳಿ ಕಾಲೆಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಈ ಬಾರಿಯ ಚುನಾವಣೆಗೂ ಅಭ್ಯರ್ಥಿ. ಭರ್ಜರಿಯಾಗಿ ಅವರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರವಾಗಿ ಸಿದ್ದರಾಮಯ್ಯ ಪ್ರಚಾರ ಕೈಗೊಂಡಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರದ ಭರಾಟೆಯಲ್ಲಿ ಇಬ್ಬರು ನಾಯಕರ ಪರಸ್ಪರ ವಾಕ್ಸಮರ ನಡೆಸುತ್ತಿದ್ದಾರೆ. 'ಸಿದ್ದರಾಮಯ್ಯ ಅವರು ರಿಜೆಕ್ಟೆಡ್ ಗೂಡ್ಸ್, ಕಾಂಗ್ರೆಸ್‌ನಲ್ಲೇ ಅವರ ಮಾತನ್ನು ಯಾರೂ ಕೇಳುತ್ತಿಲ್ಲ' ಎಂದು ಸದಾನಂದ ಗೌಡರು ಟೀಕಿಸಿದ್ದರು.

'ಸುಳ್ಯದಲ್ಲಿ ಜನಿಸಿ, ಪುತ್ತೂರಿನಲ್ಲಿ ಚುನಾವಣೆಗೆ ನಿಂತು, ಅಲ್ಲಿಂದ ಉಡುಪಿಗೆ ಕಾಲ್ಕಿತ್ತು, ಅಲ್ಲಿಂದ ಬೆಂಗಳೂರಿಗೆ ಬಂದಿರುವ ನಿಮಗೆ ಸ್ವಂತ ವಿಳಾಸವಿದೆಯಾ ಸದಾನಂದ ಗೌಡರೇ?' ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.....

ಲೋಕಸಭಾ ಚುನಾವಣಾ ಪುಟ

ಸಿದ್ದರಾಮಯ್ಯ ಅಡ್ರೆಸ್ ಕೇಳಿದ್ದೆ

'ಮಾನ್ಯ ಸಿದ್ದರಾಮೈಯ್ಯನವರೇ ನನ್ನ ಸಾಧನೆ ಏನೆಂದು ತಿಳಿಸಲು ನಿಮ್ಮ ಅಡ್ರೆಸ್ ಕೇಳಿದ್ದೆ. ಆದರೆ, ಅದು ನಿಮಗಿಲ್ಲ. ಹಾಗಾಗಿ ನೀವು ಕೊಡಲಿಲ್ಲ, ನೀವುಊರಿಗೂ ಅರಸನಲ್ಲ , ಹೆತ್ತೂರಿಗೆ ಮಗನೂ ಅಲ್ಲ' ಎಂದು ಸದಾನಂದ ಗೌಡ ಲೇವಡಿ ಮಾಡಿದ್ದಾರೆ.

ನಿಮಗೆ ಸ್ವಂತ ವಿಳಾಸವಿದೆಯಾ?

'ಸುಳ್ಯದಲ್ಲಿ ಜನಿಸಿ, ಪುತ್ತೂರಿನಲ್ಲಿ ಚುನಾವಣೆಗೆ ನಿಂತು, ಅಲ್ಲಿಂದ ಉಡುಪಿಗೆ ಕಾಲ್ಕಿತ್ತು, ಅಲ್ಲಿಂದ ಬೆಂಗಳೂರಿಗೆ ಬಂದಿರುವ ನಿಮಗೆ ಸ್ವಂತ ವಿಳಾಸವಿದೆಯಾ ಸದಾನಂದ ಗೌಡರೇ?' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿಗೆ ಏನು ಮಾಡಿದ್ದಾರೆ

'ಸದಾನಂದಗೌಡ ಅವರು ಸಿಎಂ ಆಗಿದ್ದ ವೇಳೆ ಬೆಂಗಳೂರಿಗೆ ಏನ್ ಮಾಡಿದ್ದಾರೆ ಎಂದು ಹೇಳಲಿ. ಸದಾನಂದಗೌಡರನ್ನ ಬೆಂಗಳೂರಿಗರು ಸುಳ್ಯಗೆ ಕಳುಹಿಸದಿದ್ದರೆ, ಬೆಂಗಳೂರಿನ ಯುವಕರು ಮನೆಯಲ್ಲೇ ಉಳಿಯಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸದಾನಂದ ಗೌಡ ಟ್ವೀಟ್

'ನಮ್ಮ ಮೋದಿ ನಮ್ಮ ಹೆಮ್ಮೆ. ಮೋದಿಯವರ ನಾಯಕತ್ವ ದೇಶಕ್ಕೆ ಹಿರಿಮೆ. ಮೋದಿಯವರಂತಹ ನಾಯಕತ್ವ ನಮ್ಮಲ್ಲಿಲ್ಲವಲ್ಲ ಎಂದು ಪರಿತಪಿಸುವ ಜೀವಾತ್ಮಗಳ ಬಗ್ಗೆ ಕನಿಕರ ಬರುತ್ತಿದೆ. ಇನ್ನು ಪರಿತ್ಯಾಜ್ಯ ಕಾಂಗ್ರೆಸಿಗರಿಗಂತೂ ಬೆಂಕಿಯಲ್ಲಿ ಮೇಲೆ ಕೂತಅನುಭವ' ಎಂದು ಸದಾನಂದ ಗೌಡರು ಟ್ವೀಟ್ ಮಾಡಿದ್ದಾರೆ.

ಸದಾನಂದಗೌಡ್ರು ಸುಮ್ನೆ ನಕ್ಕಿದ್ದರು

'ರೈಲ್ವೆ ಖಾತೆಯಿಂದ ನಿಮ್ಮನ್ನ ಯಾಕೆ ಕೆಳಗೆ ಇಳಿಸಿದ್ರು ಅಂತ ನಾನೊಮ್ಮೆ ಅವರನ್ನು ಕೇಳಿದ್ದೆ. ನಾನು ಕೇಳಿದಾಗಲೂ ಸದಾನಂದಗೌಡ್ರು ಸುಮ್ನೆ ನಕ್ಕಿದ್ದರು. ಸದಾನಂದಗೌಡರ ಸಾಮರ್ಥ್ಯವೇನು ಎಂಬುದು ಆಗಲೇ ತಿಳಿಯಿತು' ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ

'ಬಿಜೆಪಿ ನಾಯಕರು ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ.‌ ಮೋದಿ ಮುಖವಾಡ ಹಾಕಿದ ವ್ಯಕ್ತಿಯನ್ನು ಜೊತೆಗಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವ ಸದಾನಂದ ಗೌಡರಿಗೆ ಸ್ವಂತ ಗುರುತಿಲ್ಲವೆ?. ಸ್ವಂತ ಶಕ್ತಿಯಿಂದ ಮತವನ್ನೇ ಕೇಳಲಾಗದವರು, ಸಂಸದರಾಗಿ ಏನು ಸಾಧನೆ ಮಾಡಬಲ್ಲರು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+