ʼ70-80 ಸಾವಿರ ಹೆಕ್ಟೇರ್ ಗೆ ನೀರುಣಿಸುವ ತುಂಗಾ ಜಲಾಶಯ ಭರ್ತಿʼ
ಶಿವಮೊಗ್ಗ, ಜುಲೈ 21: ಹಾವೇರಿ, ದಾವಣಗೆರೆ ಮತ್ತು ಅಪ್ಪರ್ ತುಂಗ ಭಾಗದ ಜನರಿಗೆ ಜೀವನನದಿಯಾದ ತುಂಗೆಗೆ ಬಾಗಿನ ಅರ್ಪಿಸಿದ್ದೇವೆ. 70-80 ಸಾವಿರ ಹೆಕ್ಟೇರ್ ಗೆ ನೀರುಣಿಸುವ ತುಂಗಾ ಜಲಾಶಯ ಭರ್ತಿಯಾಗಿದೆ. ತುಂಗಾ ಜಲಾಶಯ ಭರ್ತಿಯಾದ ಪರಿಣಾಮ ಬಾಗಿನ ಅರ್ಪಿಸಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ ಬಾರಿ ರೈತರ ಕಣ್ಣಿನಲ್ಲಿ ಬರಗಾಲ ಆವರಿಸಿ ಕಣ್ಣೀರು ಬಂದಿತ್ತು. ಬರಗಾಲದಲ್ಲಿ ಜೂನ್ ವರೆಗೂ ನೀರುಣಿಸುವ ಕಾರ್ಯ ತುಂಗ ಜಲಾಶಯದಿಂದ ಆಗಿತ್ತು
ಈಗ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ರೈತರು ಎಚ್ಚರಿಕೆಯಿಂದ ನೀರನ್ನ ಬಳಸಿಕೊಳ್ಳಲಿ. ಎನ್ ಡಿಎ ಸರ್ಕಾರ ಜುಲೈ 23 ಕ್ಕೆ ಬಜೆಟ್ ಮಂಡಿಸುತ್ತಿದೆ. ಐತಿಹಾಸಿಕ ಬಜೆಟ್ ಇದಾಗಲಿದೆ ಎಂದು ರಾಘವೇಂದ್ರ ಹೇಳಿದರು.

ರಾಷ್ಟ್ರದ ಸರ್ವಾಂಗಣ ಬಜೆಟ್ ಆಗಲಿದೆ. ರಾಷ್ಡ್ರಪತಿ ಭಾಷಣದ ವಂದನಾ ಭಾಷಣದಲ್ಲಿ ಶಿವಮೊಗ್ಗದ ರೈಲ್ವೆ, ಹೈವೆ ಮತ್ತು ಪ್ರವೋಸೋದ್ಯಕ್ಕೆ ಒತ್ತು ನೀಡುವಂತೆ ಮನವಿ ಮಾಡಲಾಗಿದೆ. ಬೀರೂರು ಶಿವಮೊಗ್ಗದ 1600 ಕೋಟಿ ವೆಚ್ಚದಲ್ಲಿ ರೈಲ್ವೆ ಡಬ್ಬಲಿಂಗ್ ಮಾಡಲು ಡಿಪಿಆರ್ ರೆಡಿ ಮಾಡಲಾಗಿದೆ.
ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಎಲ್ಲರು ಸೇರಿ ಶ್ರಮಿಸಲಾಗಿದೆ. ಕೆಲ ಅಭಿವೃದ್ಧಿಗೆ ರಾಜ್ಯದ ಪಾಲುದಾರಿಕೆ ಇದೆ, ಇದನ್ನ ಆಯಾ ಶಾಸಕರು ರಾಜ್ಯ ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಆಗುಂಬೆ 12 ಕಿಮಿ ಟನಲ್, ರೈಲ್ವೆ ಡಬ್ಬಲಿಂಗ್ ನೀರಿಕ್ಷೆ ಇದೆ. ಕೇಂದ್ರದಿಂದ ಈ ವರ್ಷ 8 ರಿಂದ 10 ಸಾವಿರ ಕೋಟಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬರುವ ನಿರೀಕ್ಷೆ ಇದೆ ಎಂದರು.
ಈ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನನ್ನ ಕ್ಷೇತ್ರದ ತುಂಗ ತಾಯಿಗೆ ಬಾಗಿನ ಅರ್ಪಿಸಿದ್ದೇವೆ, ಜೀವನದಿ ಹೀಗೆ ಹರಿಯಲಿ, ನಾಡು ಸಂವೃದ್ದಿಯಾಗಲಿ.ತೀರ್ಥಹಳ್ಳಿಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಆಗಿದೆ ಮಳೆ ಇನ್ನು ಬರಬೇಕಿದೆ ಎಂದು ಹೇಳಿದರು.
ತೀರ್ಥಹಳ್ಳಿ ತಡೆಗೋಡೆ ಕುಸಿತ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬರಬಾರದು ಅಂತಾ. ಆದರೆ ಗುಡ್ಡ ಕುಸಿದರೆ ಯಾವುದನ್ನ ತಡೆಯಲು ಸಾಧ್ಯ ಇಲ್ಲ, ತೀರ್ಥಹಳ್ಳಿ ಹೊಸ ಕಟ್ಟಡ ಕಳಪೆ ಕಾಮಗಾರಿ ಕುರಿತು ಮಾತನಾಡಿ, ಎಲ್ಲಾ ಕಟ್ಟಡ ಸುರಕ್ಷಿತವಾಗಿದೆ,ತಾಲೂಕು ಪಂಚಾಯತಿ ಕಟ್ಟಡ ಎಲೆಕ್ಟ್ರಿಕಲ್ ವಯರ್ ನಿರ್ಮಾಣದಲ್ಲಿ ಲೀಕೇಜ್ ಆಗಿದೆ.
ಗುತ್ತಿಗೆದಾರರು ಇನ್ನೂ ಹ್ಯಾಂಡ್ ಓವರ್ ಮಾಡಿಲ್ಲ, ಸರಿಪಡಿಸಲಾಗುತ್ತದೆ. ನಾನು ಕಂಟ್ರಾಕ್ಟರ್ ಅಲ್ಲ. ನಾನು ನಿಂತು ಕೆಲಸ ಮಾಡಲು ಸಾಧ್ಯವಿಲ್ಲ. ತುಂಗಾ ಜಲಾಶಯದಲ್ಲಿ ಹೂಳು ತುಂಬಿದೆ. ಮೂರು ಇಲಾಖೆ ಸೇರಿ ಹೂಳೆತ್ತಬೇಕು, ಸರ್ಕಾರ ಯೋಚಿಸಿ ಹೂಳೆತ್ತಬೇಕು ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ಹಗರಣ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನವರು ನೀನು ಕಳ್ಳ ಎಂದರೆ ನೀನೇ ಕಳ್ಳ ಎಂಬ ರೀತಿ ಆಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ದಲ್ಲಿ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಖ ಆಗಿದೆ. ಮೃತ ಚಂದ್ರಶೇಖರ್ ಪತ್ನಿಯಿಂದ ಮೂರು ಬಾರಿ ಹೇಳಿಕೆ ಪಡೆದಿದ್ದಾರೆ. ಎಲ್ಲಾ ಆರೋಪಿಗಳು ಸೇರಿ ಕೃತ್ಯ ನಡೆಸಿದ್ರು ಉಪಯೋಗವಾಗಿಲ್ಲ, ಎಸ್ಐಟಿ ಯಲ್ಲಿ ಆರೋಪಿಗಳ ಹೆಸರು ಇದೆ. ಆದರೆ ಪ್ರಕರಣ ಮುಚ್ಚುವ ಕೆಲಸ ಆಗಿದೆ.
ವಾಲ್ಮೀಕಿ ಹಗರಣದ ಹಣದಲ್ಲಿ ತೆಲಂಗಾಣದ ಚುನಾವಣೆ ನಡೆದಿದೆ. ಇದನ್ನ ಇಡಿ ಉಲ್ಲೇಖ ಮಾಡಿದೆ, ವಿಧಾನಸಭೆಯಲ್ಲಿ ಡೆತ್ ನೋಟ್ ಅನ್ನು ಸಿಎಂ ಪೂರ್ಣ ಓದಿಲ್ಲ. ಮುಚ್ಚಾಕುವ ಕೆಲಸ ಮಾಡುತ್ತಿದ್ದಾರೆ, ಬಿಜೆಪಿ ಸಮಯದಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ. ನಾವು ಭ್ರಷ್ಠಾಚಾರ ನಡೆಸಿದ್ದರೆ ತನಿಖೆ ನಡೆಸಲಿ ಎಂದು ಹೇಳಿದರು.












Click it and Unblock the Notifications