ಗಣರಾಜ್ಯೋತ್ಸವ ವೇದಿಕೆಯಲ್ಲೇ ತುಮಕೂರು ಮೇಯರ್, ಜಿಪಂ ಅಧ್ಯಕ್ಷೆ ಜಟಾಪಟಿ!

Posted By:
Subscribe to Oneindia Kannada

ತುಮಕೂರು, ಜನವರಿ 26: ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತುಮಕೂರು ಮಹಾನಗರ ಪಾಲಿಕೆ ಮೇಯರ್ ಯಶೋದಮ್ಮ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಗಣ್ಯರ ಸಮ್ಮುಖದಲ್ಲೇ ಪರಸ್ಪರ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ.

ಮೇಯರ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಶಸ್ತಿ ಪ್ರಧಾನದ ವೇಳೆ ಪ್ರಶಸ್ತಿ ಪುರಸ್ಕೃತರ ಪಕ್ಕದಲ್ಲಿ ನಿಲ್ಲಲು ಈ ಇಬ್ಬರೂ ಕಸರತ್ತು ನಡೆಸಿದರು. ಆ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ದೊಡ್ಡ ಜಗಳಕ್ಕೇ ನಾಂದಿ ಹಾಡಿದೆ.

Tumkur Mayor, ZP president quarrel each other in Republic day function

ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಂದೆ ನಿಂತಿದ್ದ ಮೇಯರ್ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಹಿಂದಕ್ಕೆ ಎಳೆಯಲು ಯತ್ನಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.

ಮೇಯರ್ ನಡವಳಿಗೆ ಜಿ ಪಂ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಇಬ್ಬರೂ ವಾಕ್ಸಮರ ನಡೆದಿರುವುದು ನೆರೆದಿದ್ದ ಪತ್ರಿಕಾ ಛಾಯಾಗ್ರಾಹಕರಿಗೆ ಬಿಡುವಿಲ್ಲದ ಕೆಲಸ ಕೊಟ್ಟಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Republic day celebration in Tumkur became the battle field for City's Mayor Yashodamma and ZP president Latha Ravikumar on Thursday. During a photo shoot, they began to quarrel to each other.
Please Wait while comments are loading...