Solar Industry: ತುಮಕೂರಲ್ಲಿ ₹5,000 ಕೋಟಿ ಹೂಡಿಕೆ, 5 GW ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪನೆಗೆ ಪ್ಲ್ಯಾನ್

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವರ್ಷ ನಡೆದಿದ್ದ ಹೂಡಿಕೆ ಸಮಾವೇಶ-2025ದಲ್ಲಿ ಪಾಲ್ಗೊಂಡಿದ್ದ ಭಾರತ-ಅಮೆರಿಕ ಪಾಲುದಾರಿಕೆಯುಳ್ಳ ರೆನೈಸಾನ್ಸ್ ಸೋಲಾರ್ ಅಂಡ್ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿಯು ಪಾಲ್ಗೊಂಡಿತ್ತು. ಅಂದು ಘೋಷಿಸಿದ್ದಂತೆ ತುಮಕೂರಿನ ಚೆನ್ನೈ- ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ (ಸಿಬಿಐಸಿ) ಪ್ರದೇಶದಲ್ಲಿ 5,000 ಕೋಟಿ ರೂಪಾಯಿ ಬಂಡವಾಳ ಹೂಡಲು ಆಸಕ್ತಿ ತೋರಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಖಚಿತಪಡಿಸಿದ್ದಾರೆ.

ಗುರುವಾರ ಬೆಂಗಳೂರು ಖನಿಜ ಭವನದಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ರೆನೈಸಾನ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಡಾ.ಮಿಲಿಂದ್ ಎಸ್ ಕುಲಕರ್ಣಿ ಜತೆ ಅವರು ಸುದೀರ್ಘ ಮಾತುಕತೆ ನಡೆಸಿದರು.

Tumakur Investment

ಇದೇ ವೇಳೆ ಮಾತನಾಡಿದ ಸಚಿವರು, ಕಂಪನಿಯು ಸೋಲಾರ್ ಕ್ಷೇತ್ರದಲ್ಲಿ ಸಿಂಗಲ್‌ ಕ್ರಿಸ್ಟಲ್ ಸಿಲಿಕಾನ್ ಮತ್ತು ವೇಫರ್ ತಯಾರಿಕೆಯಲ್ಲಿ ಹೆಸರು ಮಾಡಿದೆ. ಅದು ಸಿಬಿಐಸಿ ಪ್ರದೇಶದಲ್ಲಿ 5 ಗಿಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಇನ್-ಗಾಟ್ ಮತ್ತು ವೇಫರ್ ತಯಾರಿಕೆ ಘಟಕ ಸ್ಥಾಪಿಸಲು 100 ಎಕರೆ ಜಾಗ ಕೇಳಿದೆ. ಕಂಪನಿಯ ಉಳಿದ ಬೇಡಿಕೆಗಳನ್ನು ಕುರಿತು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ತುಮಕೂರಲ್ಲಿ 3 ವರ್ಷದಲ್ಲಿ ಕೈಗಾರಿಕಾ ಕೆಲಸ ಶುರು

ರೆನೈಸಾನ್ಸ್ ಕಂಪನಿಯು ತಂತ್ರಜ್ಞರೇ ಸೇರಿಕೊಂಡು ಆರಂಭಿಸಿರುವ ಉದ್ಯಮವಾಗಿದ್ದು, ಚೆನ್ನೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಉದ್ದೇಶಿತ ಸ್ಥಾವರಕ್ಕೆ ಅದು 80 ಮೆಗಾವ್ಯಾಟ್ ವಿದ್ಯುತ್ ಮತ್ತು 1 ಕೋಟಿ ಎಂಎಲ್ ಡಿ ನೀರು ಬೇಕಾಗುತ್ತದೆ ಎಂಬ ಎರಡು ಪ್ರಮುಖ ಅಗತ್ಯಗಳನ್ನು ನಮ್ಮ‌ ಗಮನಕ್ಕೆ ತರಲಾಗಿದೆ. ಇವುಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2028ರ ಮಧ್ಯ ಭಾಗದ ವೇಳೆಗೆ ಕಂಪನಿಯು ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ ಎಂದು ಅವರು ಹೇಳಿದರು.

ಕಂಪನಿಯು ರಾಜ್ಯ ಸರಕಾರದ ಕಡೆಯಿಂದ ವಿಶೇಷ ಪ್ರೋತ್ಸಾಹನಾ ಭತ್ಯೆಗೂ ಮನವಿ ಮಾಡಿಕೊಂಡಿದೆ. ಈ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ಪ್ರಗತಿಯಲ್ಲಿದೆ ಎಂದು ಪಾಟೀಲರು ತಿಳಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್ ಮತ್ತು ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಸಿಂಗಾಪುರ ಕಂಪನಿಗಳಿಂದ ಹೂಡಿಕೆ ಆಸಕ್ತಿ

ರಾಜ್ಯದ ಉದ್ಯಮ ವಲಯಕ್ಕೆ ಬಂಡವಾಳ ಹೂಡಿಕೆ ಸೆಳೆಯಲು ಇತ್ತೀಚೆಗೆ ಸಿಂಗಾಪುರಕ್ಕೆ ತೆರಳಿದ್ದ ಸಚಿವರು, ಅಲ್ಲಿನ ಕಂಪನಿಗಳಿಂದ ಸಕಾರಾತ್ಮಕ ಸ್ಪಂದನೆ ಪಡೆದುಕೊಂಡು ಬಂದಿದ್ದಾರೆ. ಬೆಂಗಳೂರಿನ ಇಂಟರ್‍‌ ನ್ಯಾಷನಲ್ ಟೆಕ್ ಪಾರ್ಕ್ ನಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ ನಿರ್ಮಿಸುತ್ತಿರುವ 42 ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಜತೆಗೆ, ರಾಜ್ಯದಲ್ಲಿ ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಕ್ಯಾಪಿಟಲ್ಯಾಂಡ್ ಇನ್ವೆಸ್ಟ್‌ಮೆಂಟ್ ಆಸಕ್ತಿ ಹೊಂದಿದೆ. ಈ ಸಂಬಂದ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ಇತ್ತೀಚೆಗೆ ಸಚಿವರು ತಿಳಿಸಿದ್ದರು.

ಭಾರತದಲ್ಲಿ ಗಣನೀಯ ಅಸ್ತಿತ್ವ ಹೊಂದಿರುವ, ಎಸ್ ಟಿ ಟಿ ಜಿಡಿಸಿ ಭಾರತದ 10 ನಗರಗಳಲ್ಲಿ 34 ಡೇಟಾ ಸೆಂಟರ್ಗಳನ್ನು ನಿರ್ವಹಿಸುತ್ತಿದ್ದು, 613 ಮೆಗಾವ್ಯಾಟ್‌ಗೂ ಅಧಿಕ ಐಟಿ ಸಾಮರ್ಥ್ಯ ಹೊಂದಿದೆ. ಈ ಪೈಕಿ ಮೂರು ಡೇಟಾ ಸೆಂಟರ್‍‌ಗಳು ಬೆಂಗಳೂರಿನಲ್ಲಿವೆ. ದೇವನಹಳ್ಳಿಯಲ್ಲಿರುವ ಕೆಐಎಡಿಬಿ ಜಾಗದಲ್ಲಿ 100 ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಕ್ಯಾಂಪಸ್ ಅಭಿವೃದ್ಧಿಪಡಿಸಲು ಕಂಪನಿಯು ಸುಮಾರು 5 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+