ಚಿತ್ರದುರ್ಗ ತ್ರಿಕೋನ ಸ್ಪರ್ಧೆ: ಪಕ್ಷ ತೊರೆದವರಿಗೆ ಮತ್ತೊಂದು ಪಕ್ಷದಲ್ಲಿ ಟಿಕೆಟ್, ಕೋಟೆ ನಾಡಿನ ಅಧಿಪತಿ ಯಾರು?
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಐತಿಹಾಸಿಕ ಹಿನ್ನೆಲೆಯ ಕೋಟೆನಾಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ರಂಗೇರಿದೆ. ಸತತ ಐದು ಬಾರಿ ಶಾಸಕರಾಗಿ ಒದು ಬಾರಿ ಪರಿಷತ್ ಸದಸ್ಯರಾಗಿದ್ದ ಜಿ.ಎಚ್ ತಿಪ್ಪಾರೆಡ್ಡಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಾರಿ ಗೆದ್ದು ಡಬಲ್ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿ ತಿಪ್ಪಾರೆಡ್ಡಿ ಇದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ವಿರೇಂದ್ರ ಪಪ್ಪಿ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಿ.ಎಚ್ ತಿಪ್ಪಾರೆಡ್ಡಿ ಜಯಭೇರಿ ಬಾರಿಸಿದ್ದರು. ಆದರೆ ಈ ಬಾರಿ ವೀರೇಂದ್ರ ಪಪ್ಪಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಜೆಡಿಎಸ್ ರಘು ಆಚಾರ್ ಅವರಿಗೆ ಟಿಕೆಟ್ ನೀಡಿ ಚುನಾವಣಾ ಯುದ್ಧಕ್ಕೆ ನಿಲ್ಲಿದೆ. ಪ್ರವಾಸಿ ತಾಣ ಕೋಟೆನಾಡು ಚಿತ್ರದುರ್ಗದಲ್ಲಿ ಈ ಬಾರಿ ಚುನಾವಣಾ ರಣಕಣ ಜೋರಾಗಿದ್ದು ಚಿತ್ರದುರ್ಗದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಚಿತ್ರದುರ್ಗದ ಕಲ್ಲಿನ ಕೋಟೆ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ನಾಯಕರು ಸೇರಿದ ಹಲವು ರಾಜರು ಚಿತ್ರದುರ್ಗ ಕೋಟೆಯನ್ನು ಸುಮಾರು 10 ರಿಂದ 18ನೇ ಶತಮಾನದವರೆಗೆ ಆಳಿದ್ದಾರೆ. ಚಿತ್ರದುರ್ಗದಲ್ಲಿ ನಾಯಕರ ಆಳ್ವಿಕೆಯಿತ್ತು ಎನ್ನಲಾಗುತ್ತದೆ. ತಿಮ್ಮ ನಾಯಕರ ಮಗ ಮದಕರಿ ನಾಯಕ ಚಿತ್ರದುರ್ಗದ ಕೊನೆಯ ದೊರೆ ಎನ್ನಲಾಗಿದೆ. ಕನ್ನಡ ಸಿನಿಮಾಗಳಲ್ಲಿ ಚಿತ್ರದುರ್ಗದ ಕೋಟೆ ತನ್ನದೆ ಆದ ಸ್ಥಾನ ಪಡೆದುಕೊಂಡಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದದಲ್ಲಿ ಕ್ಷೇತ್ರದಲ್ಲಿ ಒಟ್ಟು 2,62,700 ಮತದಾರರಿದ್ದು 1,29,255 ಪುರುಷರು, 1,32,411 ಮಹಿಳೆಯರು ಹಾಗೂ 34 ಇತರ ಮತದಾರರಿದ್ದಾರೆ. ಜಾತಿ ಲೆಕ್ಕಾಚಾರ ನೋಡುವುದಾದರೆ ಒಟ್ಟು 2,62,700 ಮತದಾರ ಪೈಕಿ ಲಿಂಗಾಯತ - 49000, ಮುಸ್ಲಿಂ - 45000, ಎಸ್ಸಿ - 31500, ಕುರುಬ - 22000, ನಾಯಕ - 24000, ಯಾದವ - 29000, ರೆಡ್ಡಿ - 18200, ಇತರೆ - 44000 ಮತದಾರರು ಇದ್ದಾರೆ.

2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಿಎಚ್ ತಿಪ್ಪಾರೆಡ್ಡಿ ಗೆಲುವು ಸಾಧಿಸಿದ್ದರು. ಜನತಾ ದಳ (ಜಾತ್ಯತೀತ)ಯ ಕೆಸಿ ವೀರೇಂದ್ರ 32985 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ಜಿ.ಎಚ್ ತಿಪ್ಪಾರೆಡ್ಡಿ
ಆದರೆ ಈ ಬಾರಿಯ ಚುನಾವಣೆಯ ದಿಕ್ಕು ಬದಲಾಗಿದೆ. 1994 ಹಾಗೂ 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಜಿ.ಎಚ್ ತಿಪ್ಪಾರೆಡ್ಡಿ 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ ಅಂದರೆ 2008ರಲ್ಲೂ ಕಾಂಗ್ರೆಸ್ ಜಿ.ಎಚ್ ತಿಪ್ಪಾರೆಡ್ಡಿ ಅವರನ್ನೇ ಕಣಕ್ಕಿಳಿಸಿತ್ತಾದರೂ ಈ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಲಿಲ್ಲ.
ಕಾಂಗ್ರೆಸ್ ಬಳಿಕ 2013 ಹಾಗೂ 2018ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ತಿಪ್ಪಾರೆಡ್ಡಿ ಬಿಜೆಪಿ ಕೋಟೆಯನ್ನು ಚಿತ್ರದಲ್ಲಿ ಕಟ್ಟಿದ್ದಾರೆ. ಹೀಗಾಗಿ ಈ ಬಾರಿಯೂ ತಪ್ಪಾರೆಡ್ಡಿಯನ್ನೇ ಬಿಜೆಪಿ ಕಣಕ್ಕೆ ಇಳಿಸಿದೆ. 75 ವರ್ಷ ವಯಸ್ಸಾಗಿದ್ದರೂ ಗೆಲ್ಲುವ ಕುದುರೆಯೆಂಬ ಕಾರಣಕ್ಕೆ ಬಿಜೆಪಿ ತಿಪ್ಪಾರೆಡ್ಡಿಗೆ ಮಣೆಹಾಕಿದೆ. ಹೀಗಾಗಿ ಈ ಬಾರಿಯೂ ಅಭಿವೃದ್ಧಿ ಹಾಗೂ ಕೊನೆ ಚುನಾವಣೆ ಎಂಬ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವ ತಿಪ್ಪಾರೆಡ್ಡಿ ಗೆದ್ದು ಮುಂಬರುವ ಸರ್ಕಾರದಲ್ಲಿ ಸಚಿವರಾಗುವ ಕನಸು ಹೊತ್ತಿದ್ದಾರೆ.

ಸರ್ವಧರ್ಮ ಹಾಗೂ ವ್ಯಕ್ತಿಗತ ವೋಟ್ ಬ್ಯಾಂಕ್ ತಿಪ್ಪಾರೆಡ್ಡಿ ಪರ ಇದೆ. ತಿಪ್ಪಾರೆಡ್ಡಿ ಸ್ಥಳಿಯ ಅಭ್ಯರ್ಥಿಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿನ ಅಭಿವೃದ್ಧಿ ಕೆಲಸ ನಡೆದಿದೆ. ಚಿತ್ರದುರ್ಗ ನಗರಸಭೆಯಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿಗೆ ಆಡಳಿತ ಸಿಕ್ಕಿದ್ದು ಅಸಂಘಟಿತ ಎಲ್ಲಾ ಸಮುದಾಯಗಳಿಗೆ ಸೂರು ಭಾಗ್ಯ ಸಿಕ್ಕಿದೆ. ಜನರೊಂದಿಗೆ ಸದಾ ಸಂಪರ್ಕದಲ್ಲಿದ್ದು ಸಣ್ಣಸಣ್ಣ ಸಮುದಾಯಗಳೇ ಇವರ ವೋಟು ಬ್ಯಾಂಕ್. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲಿಟ್ಟಿದ್ದು ಬಿಜೆಪಿಗೆ ನೆರವಾಗಬಹುದು.
ವೀರೇಂದ್ರ ಪಪ್ಪಿ
ಚಿತ್ರದುರ್ಗ ಕ್ಷೇತ್ರದಲ್ಲಿ ಕ್ಯಾಸಿನೋ ಉದ್ಯಮಿ ವೀರೇಂದ್ರ ಪಪ್ಪಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯ ಕೈ ಅಭ್ಯರ್ಥಿಗೆ ವರವಾಗಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಾಗಿದ್ದು ಕಾಂಗ್ರೆಸ್ ಪರ ಇರುವ ಅಹಿಂದ ಮತಗಳೇ ನಿರ್ಣಾಯಕ ಎನಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಾಗಿದ್ದು,ಕಾಂಗ್ರೆಸ್ ಅಭ್ಯರ್ಥಿ ಪಪ್ಪಿಗೆ ಬಂಡಾಯ ಮುಳುವಾಗುವ ಸಾಧ್ಯತೆಯಿದೆ. ಮೊದಲ ಸಾಲಿನ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಎದುರಾಗಿದೆ. ಕ್ಷೇತ್ರದಲ್ಲಿ ಹೊಸಮುಖ ಹಾಗೂ ವಲಸಿಗರಿಗೆ ಮಣೆ ಹಾಕಲಾಗಿದೆ.
ರಘು ಆಚಾರ್
ಕಳೆದ ಕೆಸಿ ವೀರೇಂದ್ರ ಅವರನ್ನು ಕಣಕ್ಕಿಳಿಸಿದ್ದ ಜೆಡಿಎಸ್ ಈ ಬಾರಿ ರಘು ಆಚಾರ್ ಅವರನ್ನು ಕಣಕ್ಕೆ ಇಳಿಸಿದೆ. ಇವರು ಎರಡು ಬಾರಿ ಎಂಎಲ್‌ಸಿ ಆಗಿದ್ದವರು. ಚಿತ್ರದುರ್ಗ ಕ್ಷೇತ್ರದ ಪರಿಚಯ ಇವರಿಗೆ ಚೆನ್ನಾಗಿದೆ. ಗ್ರಾಪಂ ಸದಸ್ಯರ ಮೂಲಕ ಮತದಾರರನ್ನು ತಲುಪುವುದು ಸುಲಭ ಎಂಬ ಕಾರಣಕ್ಕೆ ಇವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆಸಿ ವೀರೇಂದ್ರ ಎರಡನೇ ಸ್ಥಾನ ಪಡೆದಿದ್ದರು. ಆದರೆ ಇವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರಿಂದ ರಘು ಆಚಾರ್‌ಗೆ ಟಿಕೆಟ್ ನೀಡಲಾಗಿದೆ.
ಆದರೆ ಎಂಎಲ್‌ಸಿ ಆಗಿದ್ದಾಗ ಜನರನ್ನು ಭೇಟಿಯಾಗಿಲ್ಲವೆಂಬ ಆರೋಪ ರಘು ಆಚಾರ್ ಮೇಲಿತ್ತು. ಮಾತ್ರವಲ್ಲದೆ ಕೈ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ರಘು ಆಚಾರ್ ಸೇರ್ಪಡೆಯಾಗಿದ್ದಾರೆ. ವಲಸಿಗರೆಂಬ ಹಣೆಪಟ್ಟಿ ಇವರ ಮೇಲಿದೆ. ಹೀಗಿರುವಾಗ ಪಕ್ಷ ಬಿಟ್ಟು ಬಂದವರಿಗೆ ಪ್ರಬಲ ಪಕ್ಷಗಳು ಟಿಕೆಟ್ ನೀಡಿ ಕಣಕ್ಕೆ ಇಳಿಸಿವೆ. ಇದರಿಂದಾಗಿ ಚಿತ್ರದುರ್ಗವೂ ಹೈ ವೋಲ್ಟೇಜ್ ಕಣವಾಗಿದ್ದು ಯಾರಿಗೆ ಮತದಾರರು ಮತ ನೀಡಿ ಕೋಟೆ ನಾಡಿನಲ್ಲಿ ಅಧಿಕಾರಕ್ಕೆ ತರುತ್ತಾರೆಂದು ಕಾದು ನೋಡಬೇಕಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications