ಸಾರಿಗೆ ನೌಕರರ ಮುಷ್ಕರ; ರೈಲು ಓಡಿಸಲು ಸರ್ಕಾರದ ಪತ್ರ
ಬೆಂಗಳೂರು, ಏಪ್ರಿಲ್ 07; ಸಾರಿಗೆ ನೌಕರರ ಕರ್ನಾಟಕದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ರೈಲ್ವೆ ಇಲಾಖೆಗೆ ಮನವಿಯನ್ನು ಮಾಡಿದೆ.
ಸಾರಿಗೆ ನೌಕರರು ಬುಧವಾರದಿಂದ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ವಾಹನಗಳನ್ನು ಓಡಿಸಲು ಅನುಮತಿ ನೀಡಿದೆ. ಆದರೆ ಜನರಿಗೆ ಪೂರ್ಣ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದು, ವಿಶೇಷ ರೈಲುಗಳನ್ನು ಓಡಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ ವಾರದ ಯುಗಾದಿ ಹಬ್ಬವಿದ್ದು, ಜನರು ಹೆಚ್ಚಾಗಿ ಸಂಚಾರವನ್ನು ನಡೆಸಲಿದ್ದಾರೆ.

ಈ ಹಿನ್ನಲೆಯಲ್ಲಿ ಮುಖ್ಯ ಕಾರ್ಯರ್ಶಿಗಳು ನೈಋತ್ಯ ರೈಲ್ವೆ ಮ್ಯಾನೇಜರ್‌ಗೆ ಪತ್ರವನ್ನು ಪಡೆದಿದ್ದಾರೆ. ಏಪ್ರಿಲ್ 9 ಮತ್ತು 10ರಂದು ವಿಶೇಷ ರೈಲುಗಳನ್ನು ವಿವಿಧ ಸ್ಥಳಗಳಿಗೆ ಓಡಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಯಾವ-ಯಾವ ಜಿಲ್ಲೆಗೆ ರೈಲು
* ಬೆಂಗಳೂರು - ಬೆಳಗಾವಿ ( 2 ರೈಲು)
* ಬೆಂಗಳೂರು - ಕಲಬುರಗಿ ( 2 ರೈಲು)
* ಬೆಂಗಳೂರು - ಬೀದರ್ ( 1 ರೈಲು)
* ಬೆಂಗಳೂರು - ಕಾರವಾರ ( 2 ರೈಲು)
* ಬೆಂಗಳೂರು - ವಿಜಯಪುರ ( 1 ರೈಲು)
* ಬೆಂಗಳೂರು - ಶಿವಮೊಗ್ಗ ( 1 ರೈಲು)
* ಬೆಂಗಳೂರು -ಮೈಸೂರು ನಡುವೆ ಇಂಟರ್ ಸಿಟಿ ರೈಲು ಹೆಚ್ಚು ಓಡಿಸುವಂತೆ ಪತ್ರದಲ್ಲಿ ಮನವಿಯನ್ನು ಮಾಡಿದ್ದಾರೆ.












Click it and Unblock the Notifications