Tomato Price: ರಾಜ್ಯದಲ್ಲಿ 200 ರೂಪಾಯಿ ದಾಟಿದ ಟೊಮೆಟೊ ಬೆಲೆ: ಬೆಂಗಳೂರಿನಲ್ಲಿ ಎಷ್ಟು?

ರಾಜ್ಯದಲ್ಲಿ ಟೊಮೆಟೊ ದರ ಗಗನಕ್ಕೇರಿದೆ, ಹಲವು ಜಿಲ್ಲೆಗಳಲ್ಲಿ ಸೋಮವಾರ ಟೊಮೇಟೊ ಬೆಲೆ ಕೆ.ಜಿ.ಗೆ 200 ರೂಪಾಯಿ ಮುಟ್ಟಿದೆ. ಇನ್ನು ಸಾರ್ವಕಾಲಿದ ಗರಿಷ್ಠ ದರದಲ್ಲಿ ಮಾರುಕಟ್ಟೆಗಳಲ್ಲಿ ಹರಾಜಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗು ಸೂಚನೆ ಇದೆ.

ಸೋಮವಾರ ಚಿಕ್ಕಮಗಳೂರಿನಲ್ಲಿ ಒಂದು ಬಾಕ್ಸ್ ಟೊಮೆಟೊ 4500 ರೂಪಾಯಿಗೆ ಹರಾಜಾಗಿದೆ. ಭಾನುವಾರ ಇಲ್ಲಿನ ಎಪಿಎಂಸಿಯಲ್ಲಿ 28 ಕೆಜಿಯ ಒಂದು ಬಾಕ್ಸ್ ಟೊಮೆಟೊ 5000 ರೂಪಾಯಿಗೆ ಹರಾಜಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ಒಂದು ಕೆಜಿ ಟೊಮೆಟೊ 180-190 ರೂಪಾಯಿಯಂತೆ ಸಗಟು ಮಾರುಕಟ್ಟೆಯಲ್ಲಿ ಮಾರಾಟವಾದರೆ, ಚಿಲ್ಲರೆ ದರ 200 ರೂಪಾಯಿ ಮುಟ್ಟಿದೆ.

tomato-price-skyrocketing

ಚಿಕ್ಕಮಗಳೂರು ಟೊಮೇಟೊಗೆ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಿಂದ ಗುಜರಾತ್, ರಾಜಸ್ಥಾನ, ನವದೆಹಲಿ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಗೆ ಟೊಮೆಟೊ ಪೂರೈಕೆಯಾಗಲಿದೆ.

ಭಾನುವಾರ ಚಿಕ್ಕಮಗಳೂರು ಮಾರುಕಟ್ಟೆಗೆ 15 ಸಾವಿರ ಬಾಕ್ಸ್ ಟೊಮೆಟೊ ಬಂದಿದ್ದರೆ, ಸೋಮವಾರ ಪೂರೈಕೆ ಮತ್ತಷ್ಟು ಕಡಿಮೆಯಾಗಿದ್ದು ಕೇವಲ 5 ಸಾವಿರ ಬಾಕ್ಸ್‌ಗಳು ಮಾತ್ರ ಮಾರುಕಟ್ಟೆಗೆ ಬಂದಿವೆ. ಮಂಗಳವಾರ ಮತ್ತು ಬುಧವಾರ 15-20 ಸಾವಿರ ಬಾಕ್ಸ್‌ಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ.

15 ಕೆಜಿ ಬಾಕ್ಸ್‌ಗೆ 2600 ರೂಪಾಯಿ

ಇನ್ನು ಕೋಲಾರ ಜಿಲ್ಲೆಯಲ್ಲಿ ಕೂಡ ಟೊಮೆಟೊ ದರ ಮುಗಿಲುಮುಟ್ಟಿದೆ. ಮುಳಬಾಗಿಲು ತಾಲೂಕಿನ ಎನ್‌. ವಡ್ಡಹಳ್ಳಿ ಉಪಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್‌ಗೆ 2600 ರೂಪಾಯಿಗೆ ಮಾರಾಟವಾಗಿದೆ.

ಬೆಲೆ ಹೆಚ್ಚಾದರೂ ರೈತರಿಗೆ ಅಧಿಕ ಲಾಭ ಸಿಗುವ ಅವಕಾಶ ತಪ್ಪಿದೆ, ಹಲವು ರೋಗಬಾಧೆಯಿಂದ ಇಳುವರಿ ಕಡಿಮೆಯಾಗಿದ್ದು, ಬೆಲೆ ಹೆಚ್ಚಾದರೂ ನಿರೀಕ್ಷಿತ ಇಳುವರಿ ಇಲ್ಲದೆ ರೈತರಿಗೆ ನಿರಾಸೆಯಾಗಿದೆ. ಹಲವು ವರ್ಷಗಳಿಂದ ಲಕ್ಷಾಂತರ ನಷ್ಟ ಅನುಭವಿಸಿಯೂ ಟೊಮೆಟೊ ಬೆಳೆಯುವ ರೈತರಿಗೆ ಈ ಬಾರಿ ಸಾರ್ವಕಾಲಿಕವಾಗಿ ಹೆಚ್ಚಿನ ದರ ಸಿಕ್ಕರೂ, ಹೆಚ್ಚಿನ ಲಾಭ ಸಿಗುವುದಕ್ಕೆ ಅಡ್ಡಿಯಾಗಿದೆ.

ಇನ್ನೂ ಒಂದು ತಿಂಗಳು ಕಡಿಮೆಯಾಗಲ್ಲ!

ಬೆಂಗಳೂರಿನಲ್ಲಿ ಕೂಡ ಟೊಮೆಟೊ ದರ ಭಾರಿ ಏರಿಕೆಯಾಗಿದೆ. ಕಳೆದ ವಾರ 80-100 ರೂಪಾಯಿ ಇದ್ದ ಟೊಮೆಟೊ ಬೆಲೆ ಸೋಮವಾರ 140-160 ರೂಪಾಯಿಗೆ ಏರಿಕೆಯಾಗಿದೆ. ನಾಟಿ ಟೊಮೆಟೊ 120-140 ರೂಪಾಯಿ ಇದ್ದರೆ, ಹೈಬ್ರಿಡ್ ಟೊಮೆಟೋ 150-160 ರೂಪಾಯಿಗೆ ಮಾರಾಟವಾಗುತ್ತಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ಕರ್ನಾಟಕ ಮತ್ತು ಆಂಧ್ರದಲ್ಲಿ ಬೆಳೆದ ಟೊಮೆಟೊ ಬೆಳೆ ನಷ್ಟವಾಗಿದ್ದು ಪೂರೈಕೆ ಮತ್ತೆ ಕುಸಿದ ಕಾರಣ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ ಒಂದು ತಿಂಗಳು ಇದೇ ದರ ಇರುವ ಸಾಧ್ಯತೆ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರದಿಂದ ಹೆಚ್ಚಿನ ಪ್ರಮಾಣದ ಟೊಮೆಟೋ ಮಾರುಕಟ್ಟೆಗೆ ಬಂದರೆ ಮಾತ್ರ ಬೆಲೆ ಇಳಿಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+