• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕಾಂಗದ ಮೇಲೆ ನ್ಯಾಯಾಂಗ ಅತಿಕ್ರಮಣ: ದಿನೇಶ್ ಗುಂಡೂರಾವ್

|

ಬೆಂಗಳೂರು, ಜುಲೈ 17: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ಹೊರಹಾಕಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗದ ಮೇಲೆ ನ್ಯಾಯಾಂಗ ಅತಿಕ್ರಮಣ ಮಾಡಿದೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಇಂದಿನ ತೀರ್ಪನ್ನು ಕಟುವಾಗಿ ವಿಮರ್ಶಿಸಿರುವ ದಿನೇಶ್ ಗುಂಡೂರಾವ್, ಸರ್ಕಾರವನ್ನು ಉರುಳಿಸಲು ಟೊಂಕಕಟ್ಟಿ ನಿಂತಿರುವ ಶಾಸಕರಿಗೆ ಸುಪ್ರೀಂಕೋರ್ಟ್ ತೀರ್ಪು ಸರಿಯಾಗಿ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಸ್ಪೀಕರ್‌ ಭೇಟಿಯಾಗಿ ಎರಡು ವಿಷಯಗಳ ಬಗ್ಗೆ ಸಲಹೆ ಪಡೆದ ಮೈತ್ರಿ ಮುಖಂಡರು

ನಾವು (ಕೆಪಿಸಿಸಿ) ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಅರ್ಜಿ ದೂರು ನೀಡಿರುವುದು ಪಕ್ಷಾಂತರ ನಿಷೇಧ ಕಾಯ್ದೆ ಸೆಕ್ಷನ್ 2-1 ಪ್ರಕಾರವೇ ಹೊರತು ವ್ಹಿಪ್ ಉಲ್ಲಂಘನೆ ಮಾಡಿದ್ದಾರೆ ಎಂದಲ್ಲ. ಬಿಜೆಪಿಯೊಂದಿಗೆ ಕೈಜೋಡಿಸಿ ರಾಜೀನಾಮೆ ನೀಡುವ ಮೂಲಕ ಸರ್ಕಾರವನ್ನು ಬೀಳಿಸುವ ಉದ್ದೇಶ ಹೊಂದಿದ್ದಾರೆ ಇದು ಪಕ್ಷ ವಿರೋಧಿ ಚಟುವಟಿಕೆ ಎಂದು ನಾವು ದೂರು ನೀಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ಇಂದಿನ ಸುಪ್ರೀಂಕೋರ್ಟ್ ತೀರ್ಪು ಶಾಸಕಾಂಗದ ಮೇಲೆ ಅತಿಕ್ರಮಣ ಮಾಡಿದ್ದಾಗಿದೆ. ಇದೊಂದು ಕೆಟ್ಟ ತೀರ್ಪಾಗಿದ್ದು, ದೂಷಿತರಿಗೆ ರಕ್ಷಣೆ ನೀಡುವ, ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವ ತೀರ್ಪು ಇದಾಗಿದೆ, ಅಷ್ಟೆ ಅಲ್ಲದೆ ಶಾಸಕಾಂಗದ ಹಕ್ಕಿನ ಉಲ್ಲಂಘನೆಯೂ ಆಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಇಂದಿನ ತೀರ್ಪನ್ನು ಟೀಕಿಸಿದ್ದಾರೆ.

English summary
The Supreme court verdict is now encroaching upon the rights of the Legislature. This is a bad judgement which seems to protect the defectors and encourages horse trading and also violating the doctrine of separation of powers says Dinesh Gundu Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X