ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡ ಹುಲಿರಾಯ
ಚಿಕ್ಕಮಗಳೂರು, ಫೆ, 16: ಜಿಲ್ಲೆಯ ಹಿರೇಕೊಳಲೆ ಸಮೀಪದ ವಾಟೇಕಾನ್ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.
ಬೆಳಗ್ಗೆ ವಾಟೇಕಾನ್ ಅರಣ್ಯ ಪ್ರದೇಶದ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ತಲೆಯ ಮೇಲೆಯೇ ಹುಲಿ ಜಿಗಿದು ಹೋಯಿತು. ತಕ್ಷಣ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಜೀವ ಭಯದಿಂದ ಮನೆ ಸೇರಿದರು. ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯಾಹ್ನ ಆಗಮಿಸಿ ಪರಿಶೀಲನೆ ನಡೆಸಲು ಮುಂದಾದಾಗ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.[ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

ಪದೇ ಪದೇ ಭಾಗದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಂಡಿಲ್ಲ. ಸ್ಥಳಕ್ಕೆ ಬರಿಗೈ ನಲ್ಲಿ ಆಗಮಿಸುವ ಬದಲು ಹುಲಿ ಹಿಡಿಯುವ ಬೋನು ತನ್ನಿ. ಇದು ಮೊದಲನೇ ಸಾರಿ ನಡೆಯುತ್ತಿರುವ ಘಟನೆಯಲ್ಲ. ಜನರನ್ನು ಭಯದ ವಾತಾವರಣದಿಂದ ಮುಕ್ತಗೊಳಿಸಿ ಎಂದು ಆಗ್ರಹಿಸಿದರು. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]
ನಂತರ ಸ್ಥಳಿಯರು ಮತ್ತು ಅರಣ್ಯಾಧಿಕಾರಿಗಳು ಒಟ್ಟಾಗಿ ಅರಣ್ಯವನ್ನೆಲ್ಲ ಜಾಲಾಡಿದರೂ ಹುಲಿಯ ಸುಳಿವು ಪತ್ತೆಯಾಗಲಿಲ್ಲ. ಬೇರೆಡೆ ಸೆರೆಸಿಕ್ಕ ಹುಲಿ ಮತ್ತು ಚಿರತೆಯನ್ನು ಭಾಗದಲ್ಲಿ ತಂದು ಬಿಡಲಾಗುತ್ತಿದೆ ಎಂಬ ದೂರುಗಳು ನಾಗರಿಕರಿಂದ ವ್ಯಕ್ತವಾದವು. ಕಳೆದ ಕೆಲ ದಿನಗಳ ಹಿಂದೆ ಸೀತಾಲಯ್ಯನ ಗಿರಿ ಬಳಿ ಜೋಡಿ ಹುಲಿ ಕಾಣಿಸಿಕೊಂಡು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು.












Click it and Unblock the Notifications