ರಾಯಚೂರಿನ ಮೂರು ಗ್ರಾಮಗಳು ಜಲಾವೃತ
ರಾಯಚೂರು, ಸೆಪ್ಟೆಂಬರ್ 22: ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಾರಾಯಣಪುರ ಜಲಾಶಯ (ಬಸವ ಸಾಗರ) ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ರಾಯಚೂರಿನ ಲಿಂಗಸೂಗೂರು ಬಳಿಯ ಮೂರು ಗ್ರಾಮಗಳು ಜಲಾವೃತವಾಗಿದ್ದು, ಅಲ್ಲಿನ ಗ್ರಾಮಸ್ಥರು ಪರದಾಡುವಂತಾಗಿದೆ.
ಪ್ರವಾಹದ ರೀತಿಯಲ್ಲಿ ಹರಿದು ಬಂದ ನೀರಿನಿಂದಾಗಿ, ಮ್ಯಾದರಗಡ್ಡಿ, ಕಡದರ ಗಡ್ಡಿ ಹಾಗೂ ಓಂಕಾರಗಡ್ಡಿ ಗ್ರಾಮಗಳು ಜಲಾವೃತಗೊಂಡಿವೆ. ಈ ಮೂರೂ ಗ್ರಾಮಗಳು ಲಿಂಗಸೂಗೂರು ತಾಲೂಕಿನ ವ್ಯಾಪ್ತಿಗೆ ಒಳಪಡುವಂಥವು.

ಈ ಗ್ರಾಮಗಳು ಈಗ ನಡುಗಡ್ಡೆಗಳಾಗಿ ಗೋಚರಿಸುತ್ತಿದ್ದು, ಸುಮಾರು 15 ಕುಟುಂಬಗಳ 60 ಗ್ರಾಮಸ್ಥರು ಪರದಾಡುವಂತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.











Click it and Unblock the Notifications