ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, ಸಂಪುಟ ಸೇರುವವರು ಯಾರು?

Posted By: Gururaj
Subscribe to Oneindia Kannada

ಬೆಂಗಳೂರು, ಆಗಸ್ಟ್ 29 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಮೂವರು ಶಾಸಕರು ಸೆಪ್ಟೆಂಬರ್ 1ರಂದು ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ. ಸಂಪುಟ ಸೇರುವ ಶಾಸಕರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಸೋಮವಾರ ನಡೆದ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳಿವು

ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ದೆಹಲಿಗೆ ತೆರಳಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಮಾಡಲು ಒಪ್ಪಿಗೆ ಪಡೆದಿದ್ದರು. ರಾಜ್ಯಪಾಲರು ದಿನಾಂಕ ನಿಗದಿ ಮಾಡಲು ಕಾಯುತ್ತಿದ್ದರು.

ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ದಿನಾಂಕ ನಿಗದಿ ಮಾಡಿದ್ದು, ಸೆಪ್ಟೆಂಬರ್ 1ರ ಶುಕ್ರವಾರ ಬೆಳಗ್ಗೆ, ಮೂವರು ಶಾಸಕರು ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಗೃಹ ಸಚಿವರಾಗಿ ರಮಾನಾಥ ರೈ: ಇನ್ನೇನು ಅಧಿಕೃತ ಘೋಷಣೆ?

ಸಚಿವ ಎಚ್.ಎಸ್.ಮಹದೇವಪ್ರಸಾದ್ ನಿಧನದಿಂದ ಒಂದು ಸ್ಥಾನ ತೆರವಾಗಿತ್ತು. ಎಚ್.ವೈ.ಮೇಟಿ ಮತ್ತು ಡಾ.ಜಿ.ಪರಮೇಶ್ವರ ಅವರ ರಾಜೀನಾಮೆಯಿಂದ ಎರಡು ಸ್ಥಾನಗಳು ತೆರವಾಗಿದ್ದವು. ಈಗ ಸಂಪುಟ ವಿಸ್ತರಣೆ ಮಾಡುವ ಮೂಲಕ ಸಿದ್ದರಾಮಯ್ಯ ಮೂವರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಸಂಪುಟ ಸೇರುವ ಶಾಸಕರ ವಿವರ ಚಿತ್ರಗಳಲ್ಲಿ...

ಸಚಿವರಾಗಲಿದ್ದಾರೆ ಕೆ.ಷಡಕ್ಷರಿ

ಸಚಿವರಾಗಲಿದ್ದಾರೆ ಕೆ.ಷಡಕ್ಷರಿ

ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ ಸಿದ್ದರಾಯ್ಯ ಸಂಪುಟ ಸೇರಲಿದ್ದಾರೆ. ಲಿಂಗಾಯತ ಕೋಟಾದಡಿ ಕೆ.ಷಡಕ್ಷರಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಚಿವರಾಗಲಿದ್ದಾರೆ ಆರ್.ಬಿ.ತಿಮ್ಮಾಪುರ

ಸಚಿವರಾಗಲಿದ್ದಾರೆ ಆರ್.ಬಿ.ತಿಮ್ಮಾಪುರ

ಮುಧೋಳ ಮೀಸಲು ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಆರ್.ಬಿ.ತಿಮ್ಮಾಪುರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ದಲಿತ ಕೋಟಾದಡಿ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ.

ಸಂಪುಟ ಸೇರಲಿದ್ದಾರೆ ಸಿಎಂ ಆಪ್ತ ರೇವಣ್ಣ

ಸಂಪುಟ ಸೇರಲಿದ್ದಾರೆ ಸಿಎಂ ಆಪ್ತ ರೇವಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತರಾದ ಎಚ್.ಎಂ.ರೇವಣ್ಣ ಅವರು ಸಂಪುಟ ಸೇರಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ರೇವಣ್ಣ ಅವರನ್ನು ಕುರುಬ ಕೋಟಾದಡಿ ಸಚಿವರನ್ನಾಗಿ ಮಾಡಲಾಗುತ್ತಿದೆ.

ರಮಾನಾಥ್ ರೈಗೆ ಗೃಹ ಖಾತೆ

ರಮಾನಾಥ್ ರೈಗೆ ಗೃಹ ಖಾತೆ

ಸಂಪುಟದಲ್ಲಿ ಗೃಹ ಸಚಿವ ಸ್ಥಾನ ಖಾಲಿ ಇದೆ. ಅದನ್ನು ಯಾರಿಗೆ ನೀಡಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ರಮಾನಾಥ್ ರೈ ಅವರಿಗೆ ಗೃಹ ಖಾತೆ ನೀಡಿ, ಅವರ ಬಳಿ ಇರುವ ಅರಣ್ಯ ಖಾತೆಯನ್ನು ಬೇರೆಯವರಿಗೆ ಹಂಚಲಾಗುತ್ತದೆ ಎನ್ನುವುದು ಸದ್ಯದ ಮಾಹಿತಿ.

ಗೀತಾ ಕೈ ತಪ್ಪಿದ ಮಂತ್ರಿಗಿರಿ

ಗೀತಾ ಕೈ ತಪ್ಪಿದ ಮಂತ್ರಿಗಿರಿ

ಸಹಕಾರ ಸಚಿವರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಅವರ ಪತ್ನಿ, ಗುಂಡ್ಲುಪೇಟೆ ಶಾಸಕಿ ಗೀತಾ ಮಹದೇವ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅವರಿಗೆ ನಿರಾಸೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah will induct 3 ministers to cabinet on September 1, 2017. Legislative council member R.B.Timmapur, H.M.Revanna, Tipatur MLA K.Shadakshari will join cabinet.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X