ಶಾಸಕಾಂಗ ಸಭೆಗೆ ಮತ್ತೆ ಜಮೀರ್ ಟೀಮ್ ಚಕ್ಕರ್!
ಬೆಂಗಳೂರು, ಫೆ. 2 : ಜೆಡಿಎಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತಕ್ಕೆ ಸಾಕ್ಷಿ ಎಂಬಂತೆ ಶಾಸಕರು ನಡೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಶಾಸಕ ಎನ್. ಚಲುವರಾಯಸ್ವಾಮಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್, ಮಾಗಡಿ ಶಾಸಕ ಬಾಲಕೃಷ್ಣ ಗೈರು ಹಾಜರಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.[ಡಿಕೆ ಶಿವಕುಮಾರ್ ಜತೆ ಜೆಡಿಎಸ್ ನಾಯಕರ ರಹಸ್ಯ ಚರ್ಚೆ!]

ವಿಧಾನಸೌಧದ ಅಧಿವೇಶನ ಆರಂಭಧ ದಿನದ ರಾಜ್ಯಪಾಲರ ಭಾಷಣದ ನಂತರ ಹಮ್ಮಿಕೊಂಡಿದ್ದ ಸಭೆಗೆ ಶಾಸಕತ್ರಯರು ಗೈರಾಗಿದ್ದರು. ನಂತರ ಸ್ವತಃ ಸಿಎಂ ಸಿದ್ದರಾಮಯ್ಯ ಜಮೀರ್ ಅಹಮದ್ ಬಳಿ ತೆರಳಿ ಕೈ ಕುಲುಕಿ ಮಾತನಾಡಿಸಿದರು. ಅಲ್ಲದೇ ಹತ್ತು ನಿಮಿಷಗಳ ಕಾಲ ಸಿಎಂ ಮತ್ತು ಶಾಸಕರ ನಡುವೆ ಮಾತುಕತೆ ನಡೆಯಿತು.
ಫೆಬ್ರವರಿ 1 ರಂದು ಜಮೀರ್ ಮತ್ತು ಚೆಲುವರಾಯಸ್ವಾಮಿ ಇಂಧನ ಸಚಿವ ಡಿ,ಕೆ,ಶಿವಕುಮಾರ್ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದರು. ಮಾಗಡಿ ಬಳಿಯ ಸಾವನದುರ್ಗ ಬೆಟ್ಟದಲ್ಲಿ ಮಾತುಕತೆ ನಡೆಸಿದ್ದು ಚರ್ಚೆಗೆ ಕಾರಣವಾಗಿತ್ತು. ಇದೀಗ ಪಕ್ಷದ ಶಾಸಕಾಂಗ ಸಭೆಗೂ ಗೈರಾಗಿ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದಾರೆ.[ವಯಸ್ಸಾಯ್ತು, ಇನ್ಮುಂದೆ ಚುನಾವಣೆ ಸ್ಪರ್ಧಿಸುವುದಿಲ್ಲ: ದೇವೇಗೌಡ]
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾವೇಶಕ್ಕೂ ಜೆಡಿಎಸ್ ನ ಅನೇಕ ನಾಯಕರು ಗೈರಾಗಿದದ್ದರು. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ತಮಗೆ ಜೆರಾಕ್ಸ್ ಹಾಳೆಯೊಂದರಲ್ಲಿ ಆಮಂತ್ರಣ ಬಂದಿದೆ ಎಂದು ಹೇಳಿದ್ದರು. ಬ್ಯಾನರ್ ಗಳಲ್ಲಿ ಶಾಸಕ ಜಮೀರ್ ಅಹಮದ್ ಫೋಟೋ ನಾಪತ್ತೆಯಾಗಿದ್ದು ಸುದ್ದಿಯಾಗಿತ್ತು.












Click it and Unblock the Notifications