ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುದ್ರಪಟ್ಟಣದಲ್ಲಿ ಆರಂಭವಾಗಿದೆ ಸಂಗೀತೋತ್ಸವ

|
Google Oneindia Kannada News

ಹಾಸನ, ಮೇ 25 : ಹಾಸನ ಜಿಲ್ಲೆ ಅರಕಲಗೋಡು ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 12ನೇ ವರ್ಷದ ಸಂಗೀತೋತ್ಸವ ಮೇ 24ರಂದು ಆರಂಭವಾಗಿದ್ದು 26ರವರೆಗೆ ನಡೆಯಲಿದೆ. ರುದ್ರಪಣ್ಣಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮಾತ್ರವಲ್ಲ ಎಲ್ಲಾ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಗೀತೋತ್ಸವ ಪ್ರತಿಷ್ಠಾನದ ಆರ್.ಕೆ.ಪದ್ಮನಾಭ ಹೇಳಿದ್ದಾರೆ.

ಮೇ 24ರ ಶನಿವಾರ ಸಂಗೀತೋತ್ಸವ ಆರಂಭವಾಗಿದೆ. ರಂಗ ಗೀತೆಗಳಿಂದ ಹಿಡಿದು ವಿವಿಧ ವಾದ್ಯ ಸಂಗೀತ, ಗಾಯನ ಮುಂತಾದ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದ್ದು, ನಮ್ಮ ರಾಜ್ಯದ ಕಲಾವಿದರಿಗೆ ಆದ್ಯತೆ ನೀಡಲಾಗಿದೆ ಎಂದು ಪದ್ಮನಾಭ ತಿಳಿಸಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ 75ರಿಂದ 80 ಸಂಗೀತ ವಿದ್ವಾಂಸರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಶುಕ್ರವಾರ ಸಂಜೆ 4.15ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು, ಫಣೀಶಕುಮಾರ್ ಹಾಗೂ ಪವನ್‌ ಕುಮಾರ್ ಅವರಿಂದ ಯುಗಳ ಗಾಯನ, ಎಚ್.ಎಸ್‌.ಭವ್ಯಾ ಮತ್ತು ವರ್ಷಾ ಕೃಷ್ಣ ಅವರಿಂದ ಗಾಯನ ಹಾಗೂ ಆರ್.ವಿ. ವಸಂತಲಕ್ಷ್ಮಿ ಅವರಿಂದ ವೀಣಾವಾದನ ನಡೆಯತು. ಚಿತ್ರಗಳಲ್ಲಿ ನೋಡಿ ಸಂಗೀತೋತ್ಸವ [ಚಿತ್ರಕೃಪೆ : ಅರಕಲಗೋಡು ಜಯರಾಮ್]

ರುದ್ರಪಟ್ಟಣದಲ್ಲಿ 12ನೇ ವರ್ಷದ ಸಂಗೀತೋತ್ಸವ

ರುದ್ರಪಟ್ಟಣದಲ್ಲಿ 12ನೇ ವರ್ಷದ ಸಂಗೀತೋತ್ಸವ

ಹಾಸನ ಜಿಲ್ಲೆ ಅರಕಲಗೋಡು ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 12ನೇ ವರ್ಷದ ಸಂಗೀತೋತ್ಸವ ಮೇ 24ರಂದು ಆರಂಭವಾಗಿದ್ದು 26ರವರೆಗೆ ನಡೆಯಲಿದೆ. ಸಂಗೀತೋತ್ಸವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮಾತ್ರವಲ್ಲ ಎಲ್ಲಾ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಹೇಳಿದ್ದಾರೆ.

ಭಾನುವಾರದ ಕಾರ್ಯಕ್ರಮಗಳು

ಭಾನುವಾರದ ಕಾರ್ಯಕ್ರಮಗಳು

ಮೇ 25ರ ಭಾನುವಾರ ಬೆಳಗ್ಗೆ 6.30ಕ್ಕೆ ಕಾವೇರಿ ಪೂಜೆ, ಬಳಿಕ ಇಡೀದಿನ ವಿವಿಧ ಸಂಗೀತ ಕಾರ್ಯಕ್ರಮ ನಡೆಯಲಿವೆ. ಸಂಜೆ 7 ಗಂಟೆಗೆ ತೆಪ್ಪೋತ್ಸವ ಹಾಗೂ ಕಾವೇರಿ ದಂಡೆಯ ರಾಮಮಂದಿರದ ಮೆಟ್ಟಿಲುಗಳ ಮೇಲೆ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ. ರಾತ್ರಿ 9.45ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಿ. ಶರ್ಮಾ ಅವರಿಗೆ ನಾಚಾರಮ್ಮ' ಪ್ರಶಸ್ತಿ ಹಾಗೂ ಗಾನಕಲಾ ಸ್ಪರ್ಷಮಣಿ' ಬಿರುದು ಪ್ರದಾನ ಮಾಡಲಾಗುತ್ತದೆ.

ಸೋಮವಾರದ ಕಾರ್ಯಕ್ರಮಗಳು

ಸೋಮವಾರದ ಕಾರ್ಯಕ್ರಮಗಳು

ಮೇ 26ರ ಸೋಮವಾರ ಬೆಳಗ್ಗೆ 9ಕ್ಕೆ ರಥೋತ್ಸವ, ಗ್ರಾಮ ಸಂಕೀರ್ತನದ ಬಳಿಕ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ ಪ್ರವಚನ ನಡೆಯಲಿದೆ. ಬಳಿಕ ಮಧ್ಯಾಹ್ನ 1 ಗಂಟೆಯವರೆಗೆ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 ಮಳೆ ಬೆಳೆಯ ಆಶಯದೊಂದಿಗೆ ಸಂಗೀತೋತ್ಸವ

ಮಳೆ ಬೆಳೆಯ ಆಶಯದೊಂದಿಗೆ ಸಂಗೀತೋತ್ಸವ

ಹಾಸನ ಜಿಲ್ಲೆಯ ಜನರು, ರೈತರು ಬರದಿಂದ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸಂಗೀತೋತ್ಸವವನ್ನು ಒಳ್ಳೆಯ ಮಳೆ-ಬೆಳೆಯ ಆಶಯ ಇಟ್ಟುಕೊಂಡು ಲೋಕ ಕಲ್ಯಾಣಾರ್ಥವಾಗಿ ಆಚರಿಸಲಾಗುತ್ತಿದೆ ಎಂದು ಪದ್ಮನಾಭ ಅವರು ತಿಳಿಸಿದ್ದಾರೆ.

80 ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ

80 ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ

ರಂಗ ಗೀತೆಗಳಿಂದ ಹಿಡಿದು ವಿವಿಧ ವಾದ್ಯ ಸಂಗೀತ, ಗಾಯನ ಮುಂತಾದ ಕಾರ್ಯಕ್ರಮಗಳನ್ನೂ ಸಂಗೀತೋತ್ಸವದಲ್ಲಿ ಆಯೋಜಿಸಲಾಗಿದೆ. ನಮ್ಮ ರಾಜ್ಯದ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ 75ರಿಂದ 80 ಸಂಗೀತ ವಿದ್ವಾಂಸರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

English summary
Three-day music festival in Rudrapattana begins form May 24. Renowned Carnatic vocalist RK Padmanabha Said, 12 year Rudrapattana Sangeethotsava concludes on May 26. Rudrapattana in Hassan district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X