ಕೊರೊನಾ: ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಹೊರಡಿಸಿದ ಮೂರು ತುರ್ತು ಪ್ರಕಟಣೆಗಳು
ಮಂಗಳೂರು, ಏಪ್ರಿಲ್ 17: ನಾಡಿನ ಧರ್ಮದೇಗುಲ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಮೂರು ಪ್ರಕಟಣೆಯನ್ನು ಹೊರಡಿಸಿದೆ. ಈ ಬಗ್ಗೆ ಪತ್ರಿಕಾ ಜಾಹೀರಾತನ್ನೂ ನೀಡಲಾಗಿದೆ.
Recommended Video
ಈಗಾಗಲೇ, ಸೌರಮಾನ ಯುಗಾದಿಯ ವೇಳೆ, ಕ್ಷೇತ್ರದಲ್ಲಿ ನಡೆಯುವ ವಿಷು ಮಾಸದ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದರು.

ಧರ್ಮಸ್ಥಳ ಕ್ಷೇತ್ರದಿಂದ ಹೊರಡಿಸಲಾದ ಹೊಸ ಮೂರು ಪ್ರಕಟಣೆಗಳು ಇಂತಿವೆ:
1. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ತಿರುಗಾಟವನ್ನು ಕಳೆದ 24 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಈಗಿನ ಸಂದರ್ಭವನ್ನು ಗಮನದಲ್ಲಿರಿಸಿಕೊಂಡು ಈ ಸಾಲಿನ ತಿರುಗಾಟವನ್ನು ರದ್ದು ಪಡಿಸಲು ನಿಶ್ಚಿಯಿಸಲಾಗಿದೆ. ಮುಂದಿನ ವರ್ಷದ ಕಾರ್ಯಕ್ರಮಗಳ ಬಗ್ಗೆ ಸೇವಾಕರ್ತರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು.
2. ಶ್ರೀ ಧರ್ಮಸ್ಥಳದಲ್ಲಿ ಇದೇ ಬರುವ 29ನೇ ಏಪ್ರಿಲ್, 2020ರ ಬುಧವಾರದಂದು ಸಾಮೂಹಿಕ ವಿವಾಹ ಸಮಾರಂಭವನ್ನು ನಿಗದಿ ಪಡಿಸಲಾಗಿತ್ತು. ಸದ್ಯದ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಈ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ.
3. ಶ್ರೀ ಧರ್ಮಸ್ಥಳದಿಂದ ಪ್ರಕಟಿಸಲಾಗುತ್ತಿರುವ ಮಂಜುವಾಣಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರಕಟಗೊಳ್ಳುತ್ತಿರುವ ನಿರಂತರ ಪತ್ರಿಕೆಗಳ ಪ್ರಕಟಣೆ ಹಾಗೂ ವಿತರಣೆಗೆ ತೊಡಕಾಗಿರುವುದರಿಂದ ಮುಂದಿನ ಮೇ ತಿಂಗಳಿನ ಪತ್ರಿಕೆಗಳನ್ನು ಪ್ರಕಟಿಸಲಾಗುವುದಿಲ್ಲ.












Click it and Unblock the Notifications