ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆದರಿಕೆ ವಿಚಾರ ಸಮಗ್ರ ವಿವರ ಬಹಿರಂಗಪಡಿಸಿದ ನ್ಯಾ.ಎಚ್.ಪಿ. ಸಂದೇಶ್!

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜು.11: ''ತಮಗೆ ಬೆದರಿಕೆ ಹಾಕಿದ್ದು ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ಮತ್ತು ನ್ಯಾಯದಾನಕ್ಕೆ ಅಡ್ಡಿಪಡಿಸಿದಂತಾಗಿದೆ'' ಎಂದು ಹೈಕೋರ್ಟ್ ನ್ಯಾ.ಎಚ್.ಪಿ. ಸಂದೇಶ್ ಹೇಳಿದ್ದಾರೆ.

ಅಲ್ಲದೆ, ತಮಗೆ ಯಾವ ನ್ಯಾಯಮೂರ್ತಿಗಳ ಕಡೆಯಿಂದ ಬೆದರಿಕೆ ಬಂದಿತು ಎಂಬ ವಿವರಗಳನ್ನು ನ್ಯಾಯಾಲಯದಲ್ಲಿಯೇ ಬಹಿರಂಗಪಡಿಸಿದರು. ಆದರೆ ಸಹ ನ್ಯಾಯಮೂರ್ತಿಯ ವಿವರ ಹೇಳಲಿಲ್ಲ, ಹೇಳಬೇಕಾದವರಿಗೆ ಎಲ್ಲ ಹೇಳಿದ್ದೇನೆ ಎಂದು ಬಹಿರಂಗವಾಗಿಯೇ ತಿಳಿಸಿದರು.

ಎಸಿಬಿ ವಿರುದ್ಧದ ಟೀಕೆ ನಿರ್ಬಂಧಿಸಲು ವಿಭಾಗೀಯಪೀಠದ ಮೊರೆ ಹೋದ ಎಸಿಬಿ ಎಡಿಜಿಪಿಎಸಿಬಿ ವಿರುದ್ಧದ ಟೀಕೆ ನಿರ್ಬಂಧಿಸಲು ವಿಭಾಗೀಯಪೀಠದ ಮೊರೆ ಹೋದ ಎಸಿಬಿ ಎಡಿಜಿಪಿ

''ಜನತೆಯ ಹಿತದೃಷ್ಟಿಯಿಂದಲೇ ನಾನು ಎಸಿಬಿ ಮತ್ತು ಅದರ ಮುಖ್ಯಸ್ಥರ ವಿರುದ್ಧ ಟೀಕೆ ಮಾಡಿದ್ದೇನೆ. ಇದರಲ್ಲಿ ವೈಯಕ್ತಿಕ ವಿಚಾರವೇನೂ ಇಲ್ಲ'' ಎಂದೂ ಸಹ ಸ್ಪಷ್ಟಡಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಲಂಚ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಪಿ.ಎಸ್. ಮಹೇಶ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಪಿ. ಸಂದೇಶ್ ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ, ಎಸಿಬಿ ಎಡಿಜಿಪಿ ಪರ ಹಿರಿಯ ವಕೀಲರು, ಸೀಮಂತ್ ಕುಮಾರ್ ಸಿಂಗ್ ವಿರುದ್ಧ ವ್ಯಕ್ತಪಡಿಸಿರುವ ಅಭಿಪ್ರಾಯ ಸರಿಯಲ್ಲವೆಂದು ಆಕ್ಷೇಪ ಎತ್ತಿದರು.

ನ್ಯಾ.ಸಂದೇಶ್ ವಿರುದ್ಧ ಸುಪ್ರೀಂ ಮೊರೆ ಹೋದ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ನ್ಯಾ.ಸಂದೇಶ್ ವಿರುದ್ಧ ಸುಪ್ರೀಂ ಮೊರೆ ಹೋದ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್

ಆಗ ಅರ್ಜಿ ಸಲ್ಲಿಸದೇ ವಾದ ಹೇಗೆ ಮಂಡಿಸುತ್ತೀರಿ ಅರ್ಜಿ ಸಲ್ಲಿಸದೇ ಪ್ರಕರಣದಲ್ಲಿ ವಾದ ಮಂಡಿಸುವ ಹಕ್ಕು ಎಲ್ಲಿದೆ ನೀವು ಅರ್ಜಿ ಸಲ್ಲಿಸಿದರೆ ಮಾತ್ರ ನಾವು ಪರಿಗಣಿಸಲು ಸಾಧ್ಯ ನಿಮಗೆ ಲೋಕಸ್ ಸ್ಟಾಂಡಿ ಇಲ್ಲದಿರುವುದರಿಂದ ವಾದ ಮಂಡಿಸಲಾಗದು ಎಂದು ನ್ಯಾ.ಎಚ್.ಪಿ. ಸಂದೇಶ್ ಹೇಳಿದರು.

ಅಲ್ಲದೆ, "ನನಗೆ ಬೆದರಿಕೆ ಇರುವುದರಿಂದ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೆನೆ. ನ್ಯಾಯಮೂರ್ತಿ ಮೂಲಕ ಬೆದರಿಕೆ ಹಾಕುವುದು ಸರಿಯೇ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ನಡೆದಿದೆ ಬೆದರಿಕೆ ಇದೆ ಈ ಬಗ್ಗೆ ವಿಚಾರಣೆ ನಡೆಯಲಿ ಬಿಡಿ, ಸಹ ನ್ಯಾಯಮೂರ್ತಿ ಬಗ್ಗೆ ಎಲ್ಲಿ ಹೇಳಬೇಕೋ ಅಲ್ಲಿ ನಾನು ಹೇಳಿದ್ದೇನೆ ಇಲ್ಲಿ ನಾನು ನ್ಯಾಯಮೂರ್ತಿ ಹೆಸರು ಹೇಳುವ ಅಗತ್ಯವಿಲ್ಲ'' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Threat to judge: Justice HP Sandesh recorded the threat in a written order

ಬೆದರಿಕೆ ಘಟನೆ ವಿವರ ಬಹಿರಂಗ: ಆನಂತರ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್‌ ರಿಗೆ ಬೆದರಿಕೆ ವಿಚಾರ ಸಹ ನ್ಯಾಯಮೂರ್ತಿ ಹೇಳಿದ್ದನ್ನು ಬಹಿರಂಗಪಡಿಸಿದರು.

ಸಿಜೆ ನಿವೃತ್ತಿ ಹಿನ್ನೆಲೆ ಬೀಳ್ಕೊಡುಗೆ ವ್ಯವಸ್ಥೆ ಮಾಡಲಾಗಿತ್ತು, ಜುಲೈ1 ರಂದು ಡಿನ್ನರ್ ವೇಳೆ ಹಾಲಿ ನ್ಯಾಯಮೂರ್ತಿ ಪಕ್ಕ ಬಂದು ಕುಳಿತರು ದೆಹಲಿಯಿಂದ ನನಗೆ ಒಂದು ಕರೆ ಬಂದಿದೆ ಎಂದು ಹೇಳಿದರು.

ಕರೆ ಮಾಡಿದವರು ನಿಮ್ಮ ಬಗ್ಗೆ ವಿಚಾರಿಸಿದರೆಂದು ಹೇಳಿದರು, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲವೆಂದು ಹೇಳಿದೆ ಆದರೆ ಆ ನ್ಯಾಯಮೂರ್ತಿ ವಿಷಯ ಅಲ್ಲಿಗೇ ನಿಲ್ಲಿಸಲಿಲ್ಲ ಎಡಿಜಿಪಿ ಉತ್ತರ ಭಾರತದವರು, ಪವರ್ ಫುಲ್ ಆಗಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ಉದಾಹರಿಸಿದರು ಎಂದು ಹೇಳಿದರು.

ಎಸಿಬಿಗೆ ಮತ್ತೆ ಬೆಂಡೆತ್ತಿದ ನ್ಯಾ.ಸಂದೇಶ್: ಪೂರ್ಣ ಮಾಹಿತಿ ಒದಗಿಸದ್ದಕ್ಕೆ ಅತೃಪ್ತಿಎಸಿಬಿಗೆ ಮತ್ತೆ ಬೆಂಡೆತ್ತಿದ ನ್ಯಾ.ಸಂದೇಶ್: ಪೂರ್ಣ ಮಾಹಿತಿ ಒದಗಿಸದ್ದಕ್ಕೆ ಅತೃಪ್ತಿ

ಸರ್ಕಾರದಿಂದ ತನಿಖೆ ಇಲ್ಲ: ಬೆಂಗಳೂರು ನಗರ ಡಿಸಿ ವಿರುದ್ಧದ ಲಂಚ ಪ್ರಕರನದಲ್ಲಿ ಹೈಕೋರ್ಟ್ ಏಕಸದಸ್ಯಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ಎಸಿಬಿ ಎಡಿಜಿಪಿ ವಿರುದ್ಧ ಆರೋಪಗಳಿರುವ ಬಗ್ಗೆ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ಸಿಬಿಐನಿಂದ ವಿವರ ಹೇಳಿತ್ತು.

ಸಿಬಿಐ ಪರ ವಕೀಲರು ಮೆಮೋ ಸಲ್ಲಿಸಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ದಾಳಿ ನಡೆದಿತ್ತು, ಅಧಿಕಾರಿಗಳ ವಿರುದ್ಧ ತನಿಖೆಗೆ ಸಿಬಿಐ ಮನವಿ ಮಾಡಿತ್ತು. ಆದರೆ ಆ ಬಗ್ಗೆ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆಗೆ ರಾಜ್ಯಸರ್ಕಾರಕ್ಕೆ ಮನವಿ ರಾಜ್ಯ ಸರ್ಕಾರಕ್ಕೆ ತನಿಖೆ ನಡೆಸಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

English summary
Threat to judge: Justice HP Sandesh recorded the threat in a written order and threat to institution of justice and also interference in the court of justice, he observed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X