ಸಿದ್ದರಾಮಯ್ಯ ಸಂಪುಟದಿಂದ ಈ ಸಚಿವರಿಗೆ ಗೇಟ್ ಪಾಸ್? ಇಲ್ಲಿದೆ ಆ ಮಂತ್ರಿಗಳ ಪಟ್ಟಿ!
ರಾಜ್ಯದಲ್ಲಿ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಸಿದ್ದರಾಮಯ್ಯ ಸಂಪುಟ ಪುನರಾಚನೆ ಕುರಿತು ಹಲವು ಊಹಾಪೋಗಗಳು ಕೇಳಿ ಬರುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ವಾಲ್ಮೀಕಿ ಹಾಗೂ ಮುಡಾ ಹಗರಣದ ಬಳಿಕ ಹಲವು ಪ್ರಕರಣಗಳು ಸಚಿವರ ವಿರುದ್ಧ ಕೇಳಿ ಬಂದಿದ್ದು, ಈ ಕಾರಣದಿಂದಾಗಿ ಸಚಿವ ಸಂಪುಟದ ಕೆಲ ಸಚಿವರಿಗೆ ಸಂಪುಟದಿಂದ ಕೋಕ್ ನೀಡುವ ಕುರಿತಿ ಚರ್ಚೆ ನಡೆಯುತ್ತಿದೆ.
ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳಿಂದ ಕಾಂಗ್ರೆಸ್ ಹೈಕಮಾಂಡ್ ರೋಸಿ ಹೋಗಿದೆ. ಉಪಚುನಾವಣೆ ಹಿನ್ನೆಲೆ ಎಲ್ಲಾ ವಿಚಾರವನ್ನ ಸಹಿಸಿ ಕುಳಿತಿದ್ದ ಹೈಕಮಾಂಡ್ ಈಗ ಸಂಪುಟ ಸರ್ಜರಿಗೆ ಕೈ ಹಾಕಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಬರೋಬ್ಬರಿ 15 ಸಚಿವರಿಗೆ ಸಂಪುಟದಿಂದ ಕಿತ್ತುಹಾಕಲು ನಿರ್ಧರಿಸಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಖಾತೆ ವಹಿಸಿಕೊಂಡ ದಿನದಿಂದ ಯಾರು? ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರು ಕೆಲಸವನ್ನು ಸರಿಯಾಗಿ ನಿಭಾಯಿಸಿಲ್ಲ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲ ಎಂಬಂತೆ ಇರುವ ಸಚಿವರನ್ನು ಸಂಪುಟದಿಂದ ತೆಗೆಯಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದ್ದು, ಸಂಪುಟದ ಹಲವು ಮಂತ್ರಿಗಳ ಎದೆ ಬಡಿತ ಜೋರಾಗುವಂತೆ ಮಾಡಿದೆ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆಯಲ್ಲಿನ ಹಗರಣ ವಿಪಕ್ಷಗಳ ಬಾಯಿಗೆ ಆಹಾರವಾಗಿತ್ತು. ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಸಿದ್ದರಾಮಯ್ಯ ಸಂಪುಟದ ಕೆಲ ಸಚಿವರಿಗೆ ಕೋಕ್ ನೀಡಲು ಮುಂದಾಗಿದೆ. ಡಿಸೆಂಬರ್ 9 ರಿಂದ 20 ರವರೆಗೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಅಧಿವೇಶನದ ಬಳಿಕ 15 ಕ್ಕೂ ಹೆಚ್ಚು ಸಚಿವರಿಗೆ ಕೈ ಹೈಕಮಾಂಡ್ ಕೋಕ್ ಕೊಡುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈಕಮಾಂಡ್ ಸುಮಾರು 15 ಸಚಿವರ ಪಟ್ಟಿಯನ್ನು ಕಳಿಸಿದೆಯಂತೆ ಇದನ್ನ ನೋಡಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ತಲೆತಿರುಗಿದಂತಾಗಿದೆ.. ಇದರಲ್ಲಿ ಘಟಾನುಘಟಿ ಸಚಿವರೇ ಇದ್ದು, ತಮ್ಮ ಆಪ್ತರನ್ನು ಉಳಿಸಿಕೊಳ್ಳಲು ಇಬ್ಬರು ಕೂಡ ಹರಸಾಹಸ ಪಡ್ತಿದ್ದಾರಂತೆ. ಇದೇ ವಿಷಯಕ್ಕೆ ಹೈಕಮಾಂಡ್ ನಾಯಕರ ಭೇಟಿಗೆ ಸಿಎಂ ಹಾಗೂ ಡಿಸಿಎ ದೆಹಲಿದೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ದೆಹಲಿಯಿಂದ ಸಚಿವ ಸಂಪುಟ ಸರ್ಜರಿ ಕುರಿತು ಸಂದೇಶ ಬರುತ್ತಿದ್ದಂತೆ ಹಲವು ಸಚಿವಗೆ ಶಾಕ್ ಎದುರಾಗಲಿದ್ದು, ಬೈರತಿ ಸುರೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಕೆಎನ್ ರಾಜಣ್ಣ, ಮಧು ಬಂಗಾರಪ್ಪ, ಆರ್‌ಬಿ ತಿಮ್ಮಾಪುರ, ಶಿವಾನಂದ ಪಾಟೀಲ್, ಕೆಎಚ್ ಮುನಿಯಪ್ಪ, ರಹಿಮ್ ಖಾನ್, ಡಿ ಸುಧಾಕರ್, ಎಂಸಿ ಸುಧಾಕರ್, ಕೆ ವೆಂಕಟೇಶ್ ಸೇರಿ 15 ಸಚಿವರನ್ನು ಕೈ ಬಿಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮಧು ಬಂಗಾರಪ್ಪ, ಡಿ ಸುಧಾಕರ್, ಎಂಸಿ ಸುಧಾಕರ್, ಬೋಸರಾಜು, ಕೆಎಚ್ ಮುನಿಯಪ್ಪ ಸೇರಿ ಕೆಲವರಿಗೆ ಸಂಪುಟದಿಂದ ಗೇಟ್ ಪಾಸ್ ಕೊಟ್ಟು ಹೊಸಬರಿಗೆ ಮಣೆ ಹಾಕಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಮಂತ್ರಿಯಾಗಿರುವ ಮಧು ಬಂಗಾರಪ್ಪ ಅವರಿಗೆ ಕೊಕ್ ಸಿಗಲಿದೆ. ಮಧು ಬಂಗಾರಪ್ಪ ಅವರ ಕೆಲಸ ತೃಪ್ತಿಕರವಾಗಿಲ್ಲ ಎಂದು ಹೇಳಲಾಗುತ್ತಿದೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಮಾತ್ರವೇ ಪ್ರಸಿದ್ಧಿ ಪಡೆಯುತ್ತಿರುವ ಇವರು ಪ್ರಾಥಮಿಕ ಶಿಕ್ಷಣ ಸಚಿವರಾಗಿ ಇವರಿಗೆ ಸರಿಯಾಗಿ ಕನ್ನಡ ಬರೋದಿಲ್ಲ ಎಂಬ ಆಪಾದನೆಗಳೂ ಇವೆ, ಅವರೂ ಬಹಿರಂಗವಾಗಿ ಇದನ್ನು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಅವರಿಗೆ ಸಂಪುಟದಿಂದ ಕೊಕ್ ನೀಡಬಹುದು ಎಂದು ಹೇಳಲಾಗಿದೆ.
ಇನ್ನೂ ಡಿ. ಸುಧಾಕರ್ ಅವರು ತಮ್ಮ ಇಲಾಖೆಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಾಗಾಗಿ, ಅವರಿಗೆ ಕೊಕ್ ಸಿಗಬಹುದೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಕಲಿ ಬಿಪಿಎಲ್ ಕಾರ್ಡ್ ಗಳ ರದ್ದತಿ ವೇಳೆ ಅವಸರದ ಹೆಜ್ಜೆಯಿಟ್ಟು ಅರ್ಹರ ಬಿಪಿಎಲ್ ಕಾರ್ಡ್ ಗಳೂ ರದ್ದಾಗುವಂತೆ ಮಾಡಿ ಅದರಿಂದ ಸರ್ಕಾರಕ್ಕೆ ಮುಜುಗರ ತಂದಿರುವುದನ್ನು ಕಾಂಗ್ರೆಸ್ ನಾಯಕರು ಗಮನಿಸಿದ್ದಾರೆ ಹೀಗಾಗಿ ಸಂಪುಟದಿಂದ ಕೈ ಬಿಡವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಎನ್ ಎಸ್ ಬೋಸರಾಜು ಅವರಿಗೆ ಸಣ್ಣ ನೀರಾವರಿ ಖಾತೆಯನ್ನೂ ಕೊಡಲಾಗಿತ್ತು. ಆದರೆ, ಆ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಆರೋಪಗಳು ಇವರ ವಿರುದ್ಧ ಕೇಳಿಬಂದಿವೆ. ರಹೀಂ ಖಾನ್ ಅವರು, ಪ್ರಮಾಣ ವಚನ ಸ್ವೀಕರಿಸಿದಾಗ ಹಾಗೂ ವಿಧಾನಸಭೆಯ ಅಧಿವೇಶನವಿದ್ದಾಗ ಮಾತ್ರ ಕಾಣಸಿಗುತ್ತಾರೆ. ಇಲ್ಲವಾದರೆ ಅವರು ಕಾಂಗ್ರೆಸ್ ನಾಯಕರ ಕೈಗೇ ಸಿಗುವುದಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಕೊಕ್‌ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.











Click it and Unblock the Notifications