ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ, ರಜೆ ಹಾಕಿದರೆ 1000 ರೂ. ದಂಡ!
ಶ್ರೀರಾಮ ಮಂದಿರ ಉದ್ಘಾಟನೆಗೆ ಕೆಲವೇ ಗಂಟೆ ಬಾಕಿ ಇದ್ದು, ಹೀಗಾಗಿ ಇಡೀ ಜಗತ್ತೇ ರಾಮನ ದೇವಸ್ಥಾನದ ಉದ್ಘಾಟನೆಗೆ ಕಾಯುತ್ತಿದೆ. ಇನ್ನೊಂದು ಕಡೆ ಈ ವಿಚಾರವಾಗಿ ಭಾರಿ ಚರ್ಚೆ ಕೂಡ ನಡೆಯುತ್ತಿದೆ. ಹೀಗಿದ್ದಾಗ ಯಾರೋ ಕೆಲವರು ಮಾಡುವ ಕಿರಿಕ್, ಭಾರಿ ಸಂಚಲನ ಕೂಡ ಸೃಷ್ಟಿ ಮಾಡುತ್ತಿದೆ. ಹಾಗಾದರೆ ಅಯೋಧ್ಯೆ ದೇಗುಲ ಉದ್ಘಾಟನೆಗೆ ಮೊದಲು ನಮ್ಮ ಕರ್ನಾಟಕದಲ್ಲಿ ನಡೆದ ಘಟನೆ ಎಂತಹದ್ದು ಗೊತ್ತೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಹೌದು ಅಯೋಧ್ಯೆ ಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ಇನ್ನೇನು ಉದ್ಘಾಟನೆ ಆಗುತ್ತಿದೆ. ಈ ಮಹತ್ವದ ಕಾರ್ಯಕ್ಕೆ ಹಿಂದೂಸ್ತಾನ ಕಾದು ಕೂತಿದೆ. ಇದೇ ಸಮಯದಲ್ಲಿ ಈ ಬಗ್ಗೆ ರಜೆಯ ಚರ್ಚೆ ಕೂಡ ಜೋರಾಗಿದೆ. ಆದರೆ ಇಲ್ಲಿ ಒಂದು ಶಾಲೆಯ ವಿಚಿತ್ರ ನಿಮಯ, ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಹಾಗಾದರೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಶಾಲೆಯ ನಿಯಮ ಏನು ಗೊತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ ಅದಕ್ಕಾಗಿ ಮುಂದೆ ಓದಿ.

ರಜೆ ಹಾಕಿದರೆ ದಂಡ ಹಾಕ್ತಾರೆ!
ಯೆಸ್, ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಈಗ ಜಾಗತಿಕ ವಿಷಯವಾಗಿ ಪರಿವರ್ತನೆ ಆಗಿದೆ. ಆದ್ರೆ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜನವರಿ 22ಕ್ಕೆ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದೆ. ಇತ್ತ ಚಿಕ್ಕಮಗಳೂರು ಶಾಲೆ ಒಂದ್ರಲ್ಲಿ ರಜೆ ನೀಡುವುದು ಬಿಡಿ ರಜೆ ಮಾಡಿದರೆ ಅಂತಹವರಿಗೆ 1,000 ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಇದೇ ವಿಚಾರ ದೊಡ್ಡ ಕಿರಿಕ್‌ಗೆ ದಾರಿ ಮಾಡಿಕೊಟ್ಟಿದ್ದು, ಕಿರಿಕ್ ಕೂಡ ಶುರುವಾಗಿದೆ.
ಹಿಂದೂ ಸಂಘಟನೆಗಳ ಆಕ್ರೋಶ
ರಾಮ ಮಂದಿರ ಕಾರ್ಯಕ್ರಮದ ದಿನ ಶಾಲೆಗೆ ರಜೆ ಹಾಕಿದರೆ ದಂಡ ವಿಧಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ಎಚ್ಚರಿಕೆ ನೀಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈಗ ಬೆಳಕಿಗೆ ಬಂದಿದೆ. ಜನವರಿ 22ರ ಸೋಮವಾರ ಶಾಲೆಗೆ ರಜೆ ಮಾಡಿದರೆ 1000 ರೂ. ದಂಡ ತೆರಬೇಕಾಗುತ್ತದೆ ಎಂದು ಚಿಕ್ಕಮಗಳೂರು ನಗರದ ಸೇಂಟ್ ಜೋಸೆಫ್ ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.
ಇನ್ನು ಹೀಗೆ ಸೇಂಟ್ ಜೋಸೆಫ್ ಶಾಲಾ ಆಡಳಿತ ಮಂಡಳಿಯ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆಡಳಿತ ಮಂಡಳಿ ವಿರುದ್ಧ ಭಜರಂಗದಳ & ವಿಎಚ್‌ಪಿ ಸದಸ್ಯರು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಎದುರು ಜಮಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ತುಸು ಗೊಂದಲದ ಸ್ಥಿತಿ ಉಂಟಾಗಿದೆ. ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸಲು ಯತ್ನಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಈಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಒಟ್ನಲ್ಲಿ ಇಡೀ ದೇಶವೇ ಕಾಯುತ್ತಿರುವ ಕಾರ್ಯಕ್ರಮಕ್ಕೆ ಇದೀಗ ಕೆಲವೇ ಗಂಟೆ ಬಾಕಿ ಇದ್ದು ಹೀಗಿದ್ದಾಗ ಶಾಲೆ ಆಡಳಿತ ಮಂಡಳಿಯ ನಿರ್ಧಾರಕ್ಕೆ ಪರ & ವಿರೋಧ ಮಾತು ಕೇಳಿಬರುತ್ತಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ. ಆದರೆ ಈ ವಿಚಾರ ಮಾತ್ರ ಈಗ ಸಿಕ್ಕಾಪಟ್ಟೆ ವೈರಲ್ ಆಗಿ ಸಂಚಲನವನ್ನೂ ಸೃಷ್ಟಿ ಮಾಡುತ್ತಿದೆ.












Click it and Unblock the Notifications