ಬಾಲಿವುಡ್ ನಟಿಯ ಜೊತೆ ಪ್ರೀತಿ- ಕಳ್ಳತನ ಮಾಡಿ ಬಂಗಲೆ ಕಟ್ಟಿಕೊಟ್ಟ ಖತರ್ನಾಕ್ ಕಳ್ಳ
ಬೆಂಗಳೂರು ಫೆಬ್ರವರಿ 4: ಬಾಲಿವುಡ್ ನಟಿಯನ್ನು ಪ್ರೀತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನೊಬ್ಬ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಕಳ್ಳತನ ಮಾಡಿ ನಟಿಗೆ ಮೂರು ಕೋಟಿ ಬೆಲೆಬಾಳುವ ಬಂಗಲೆಯನ್ನು ಕಟ್ಟಿಸಿಕೊಟ್ಟಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಪ್ರಸ್ತುತ ಬೆಂಗಳೂರಿನ ಮಡಿವಾಳ ಪೊಲೀಸರು ಈ ಕಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ.
ಈ ಕಳ್ಳನ ಹೆಸರು ಪಂಚಾಕ್ಷರಿ ಸ್ವಾಮಿ. ಈತ ಮಹಾರಾಷ್ಟ್ರ ಮೂಲದ ನಿವಾಸಿ. ಬಾಲಿವುಡ್‌ನ ಖ್ಯಾತ ನಟಿಯೊಂದಿಗೆ ಈ ಕಳ್ಳನ ನಂಟು ಇದೆ ಎಂದು ತಿಳಿದು ಬಂದಿದೆ. ಕಳ್ಳತನ ಮಾಡಿದ್ದ ಹಣದಿಂದಲೇ ಮೂರು ಕೋಟಿ ಬೆಲೆ ಬಾಳುವ ಬಂಗಲೆಯನ್ನು ಕಟ್ಟಿಸಿದ್ದ ಈ ಖತರ್ನಾಕ್ ಕಳ್ಳ ತಾನು ಸಿಂಗಲ್ ರೂಮ್‌ನಲ್ಲಿ ವಾಸವಿದ್ದನು. ಮದುವೆಯಾಗಿದ್ದರೂ ಕೂಡ ಬಾಲಿವುಡ್ ನಟಿ ಈತನಿಗೆ ಗರ್ಲ್‌ಫ್ರೆಂಡ್ ಆಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ತಾನಿರೋದು 400 ಅಡಿ ಚದರ ಅಡಿಯ ಸಣ್ಣ ಮನೆಯಲ್ಲಿ, ಆದರೆ ಕಳ್ಳತನ ಮಾಡಿದ ಹಣದಲ್ಲಿ ಈತ ಬಾಲಿವುಡ್ ನಟಿಗೆ ಬಂಗಲೆಯನ್ನು ಕಟ್ಟಿಸಿಕೊಟ್ಟಿದ್ದಾನೆ.

ಚಿನ್ನ ಕದ್ದು ಅದನ್ನು ಕರಗಿಸಿ ಮಾರಾಟ ಮಾಡುತ್ತಿದ್ದ ಈತನಿಗೆ 2014-15ರಲ್ಲಿ ಬಾಲಿವುಡ್ ನಟಿ ಜೊತೆಗೆ ಸಂಪರ್ಕ ಬೆಳದಿತ್ತು. ಕೇವಲ ಬಂಗಲೆ ಮಾತ್ರವಲ್ಲ ಆಕೆಗಾಗಿ ಕೋಟಿ ಕೋಟಿ ಹಣವನ್ನು ಈ ಪಂಚಾಕ್ಷರಿ ಖರ್ಚು ಮಾಡಿದ್ದಾನೆ. ಅಲ್ಲದೆ ಬಾಲಿವುಡ್ ನಟಿ ಬರ್ತಡೆಗೆ 22 ಲಕ್ಷ ಆಕ್ವರಿಯಮ್ ಗಿಫ್ಟ್ ಕೊಟ್ಟಿದ್ದಾನೆ. 2016ರಲ್ಲಿ ಕೋಲ್ಕತ್ತಾದಲ್ಲಿ ನಟಿಗೆ ಮೂರು ಕೋಟಿಯ ಮನೆ ಕಟ್ಟಿಸಿಕೊಟ್ಟಿದ್ದಾನೆ. ಹಾಗಾದರೆ ಈ ಕಳ್ಳ ಬೆಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?
ಪ್ರೊಫೆಷನಲ್ ಕಳ್ಳ
2003ರಲ್ಲಿ ಅಪ್ರಾಪ್ತನಿದ್ದಾಗಲೇ ಪಂಚಾಕ್ಷರಿ ಕಳ್ಳತನ ಶುರು ಮಾಡಿದ್ದನು. 2009ರಿಂದ ಪ್ರೊಫೆಚನಲ್ ಕಳ್ಳನಾದ. ಬಂಧಿತ ಕಳ್ಳ ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೆ ಕೆಲಸದಲ್ಲಿದ್ದರು. ತಂದೆ ಸಾವಿನ ಬಳಿಕ ತಾಯಿಗೆ ರೈಲ್ವೆಯಲ್ಲಿ ಕೆಲಸ ಸಿಗುತ್ತದೆ. 2016ರಲ್ಲಿ ಈತನ ಕಳ್ಳತನ ವಿಚಾರ ಬಯಲಾಗಿ ಗುಜರಾತ್ ಪೊಲೀಸರು ಬಂಧಿಸಿದ್ದರು. ಆರು ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಈ ಆರೋಪಿ, ಹೊರ ಬಂದ ಬಳಿಕ ಮತ್ತೆ ಕಳ್ಳತನ ಶುರು ಮಾಡಿದ್ದನು. ಹೀಗಾಗಿ ಮತ್ತೆ ಪಂಚಾಕ್ಷರಿ ಮಹಾರಾಷ್ಟ್ರದಲ್ಲಿ ಬಂಧನಕ್ಕೊಳಗಾಗಿದ್ದನು. ಈ ಜೈಲಿನಿಂದ ಅಕ್ಟೋಬರ್‌ನಲ್ಲಿ ಹೊರ ಬಂದ ಬಳಿಕ 2024ರಲ್ಲಿ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.
ಈತ ಈವರೆಗೂ ದೇಶದಾದ್ಯಂತ ಸುಮಾರು 180 ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಈ ಹಣವನ್ನು ಈತ ಸಂಪೂರ್ಣವಾಗಿ ಶೋಕಿ ಮಾಡಲು ಬಳಕೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಬಾಲಿವುಡ್ ನಟಿ ಮಾತ್ರವಲ್ಲದೆ ಹಲವಾರು ಗರ್ಲ್ಸ್ ಫ್ರೆಂಡ್ ಕೂಡ ಈತ ಹೊಂದಿದ್ದನು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರು ಬಿ ದಯಾನಂದ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಈತ ಸಿಕ್ಕಿಬಿದ್ದಿದ್ದಾನೆ. ಬಂಧನದ ಬಳಿಕ ಬೆಲೆ ಬಾಳುವ 12 ಲಕ್ಷ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಲಕ್ಷಾಂತರ ರೂಪಾಯಿ ನಗದು ಹಣವನ್ನೂ ಈತನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications