ಕರುನಾಡಿನಲ್ಲಿ ಕೊರೊನಾವೈರಸ್ ಅಬ್ಬರಿಸಿದರೂ ಈ ಜಿಲ್ಲೆಗಳು ಕೂಲ್ ಕೂಲ್!
ಬೆಂಗಳೂರು, ಜೂನ್.29: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಯ ವೇಗಕ್ಕೆ ಜನರು ತಬ್ಬಿಬ್ಬುಗೊಂಡಿದ್ದಾರೆ. ಯಾವಾಗ, ಯಾರಿಗೆ, ಹೇಗೆ, ಯಾವ ರೂಪದಲ್ಲಿ ಮಹಾಮಾರಿ ಅಂಟಿಕೊಳ್ಳುತ್ತದೆಯೋ ಎಂಬ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
Recommended Video
ಕಳೆದ 24 ಗಂಟೆಗಳಲ್ಲಿ 16 ಮಂದಿ ಕೊರೊನಾವೈರಸ್ ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 13,190 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 7507 ಜನರು ಗುಣಮುಖರಾಗಿದ್ದಾರೆ. ಬಾಕಿ ಉಳಿದ 5472 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಕರ್ನಾಟಕದಲ್ಲಿ ಕೊರೊನಾವೈರಸ್ ಮಹಾಮಾರಿಗೆ ಇದುವರೆಗೂ 207 ಜನರು ಪ್ರಾಣ ಬಿಟ್ಟಿದ್ದಾರೆ.
ರಾಜ್ಯದಲ್ಲಿ ಇಷ್ಟರ ಮಟ್ಟಿಗೆ ಕೊರೊನಾವೈರಸ್ ಸೋಂಕು ಹರಡುತ್ತಿದ್ದರೂ ಈ ಜಿಲ್ಲೆಗಳಲ್ಲಿ ಮಹಾಮಾರಿ ಆಟ ನಡೆಯುತ್ತಿಲ್ಲ. ಕೊವಿಡ್-19 ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಸಾರ್ವಜನಿಕರ ಸಹಕಾರವೋ, ಜಿಲ್ಲಾಡಳಿತದ ಕ್ರಮವೋ, ಕೊರೊನಾ ವಾರಿಯರ್ಸ್ ಪರಿಶ್ರಮವೋ ಈ ಜಿಲ್ಲೆಗಳು ಸುರಕ್ಷಿತವಾಗಿವೆ. ರಾಜ್ಯದ ಜನರೆಲ್ಲ ಆತಂಕದಲ್ಲೇ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಕೊರೊನಾವೈರಸ್ ಅಬ್ಬರದ ನಡುವೆ ಕೂಲ್ ಕೂಲ್ ಆಗಿರುವ ಜಿಲ್ಲೆಗಳು ಯಾವುವು. ಅಲ್ಲಿ ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆ ಹೇಗಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ನಿಮಗಾಗಿ.

ಚಿತ್ರದುರ್ಗ
ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ: 07
ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ: 57
ಕೊರೊನಾವೈರಸ್ ಗೆ ಬಲಿಯಾದವರ ಒಟ್ಟು ಸಂಖ್ಯೆ: 00
ಒಟ್ಟು ಗುಣಮುಖರಾದವರ ಸಂಖ್ಯೆ: 41
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ: 16

ಬೆಳಗಾವಿ
ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ: 08
ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ: 326
ಕೊರೊನಾವೈರಸ್ ಗೆ ಬಲಿಯಾದವರ ಒಟ್ಟು ಸಂಖ್ಯೆ: 01
ಒಟ್ಟು ಗುಣಮುಖರಾದವರ ಸಂಖ್ಯೆ: 300
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ: 25

ಚಿಕ್ಕಮಗಳೂರು
ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ: 03
ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ: 53
ಕೊರೊನಾವೈರಸ್ ಗೆ ಬಲಿಯಾದವರ ಒಟ್ಟು ಸಂಖ್ಯೆ: 01
ಒಟ್ಟು ಗುಣಮುಖರಾದವರ ಸಂಖ್ಯೆ: 27
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ: 25

ಚಿಕ್ಕಬಳ್ಳಾಪುರ
ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ: 03
ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ: 186
ಕೊರೊನಾವೈರಸ್ ಗೆ ಬಲಿಯಾದವರ ಒಟ್ಟು ಸಂಖ್ಯೆ: 02
ಒಟ್ಟು ಗುಣಮುಖರಾದವರ ಸಂಖ್ಯೆ: 158
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ: 25

ತುಮಕೂರು
ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ: 02
ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ: 75
ಕೊರೊನಾವೈರಸ್ ಗೆ ಬಲಿಯಾದವರ ಒಟ್ಟು ಸಂಖ್ಯೆ: 05
ಒಟ್ಟು ಗುಣಮುಖರಾದವರ ಸಂಖ್ಯೆ: 39
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ: 31

ಚಾಮರಾಜನಗರ
ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ: 00
ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ: 33
ಕೊರೊನಾವೈರಸ್ ಗೆ ಬಲಿಯಾದವರ ಒಟ್ಟು ಸಂಖ್ಯೆ: 00
ಒಟ್ಟು ಗುಣಮುಖರಾದವರ ಸಂಖ್ಯೆ: 01
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ: 32












Click it and Unblock the Notifications