ಉಪಕುಲಪತಿ ಹುದ್ದೆಗೆ 5 ಕೋಟಿಗೆ ಮಾರಾಟ: ತನಿಖೆಗೆ ಡಿ.ಕೆ.ಶಿವಕುಮಾರ್ ಒತ್ತಾಯ

ಬೆಳಗಾವಿ,ಡಿಸೆಂಬರ್ 22: ಉಪ ಕುಲಪತಿ ಹುದ್ದೆ 5 ಕೋಟಿಗೆ ಮಾರಾಟ ಆಗುತ್ತಿದೆ ಎಂದ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉಪಕುಲಪತಿ ಹುದ್ದೆಗೆ ಲಂಚ ನೀಡಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರು ಬಹಳ ಅನುಭವ ಹೊಂದಿರುವ ವಿದ್ಯಾವಂತರು. ಉಪಕುಲಪತಿಗಳ ಹುದ್ದೆಗೆ 5 ಕೋಟಿ ರು. ನೀಡಬೇಕು ಎಂದು ಈ ಸಂಸದರು ಹೇಳಿದ್ದಾರೆ.

ಇಡಿ, ಐಟಿ, ಸಿಬಿಐ, ಲೋಕಾಯುಕ್ತ ಸಂಸ್ಥೆಗಳು ಏನು ಮಾಡುತ್ತಿವೆ. ಈ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ಅವರ ಕಚೇರಿ ಮೇಲೆ ಆರೋಪ ಮಾಡಲು ಆಗುವುದಿಲ್ಲ. ಅದು ಸರಿಯಲ್ಲ. ಉಪಕುಲಪತಿಗಳ ಹೆಸರನ್ನು ಸರ್ಕಾರ ಶಿಫಾರಸ್ಸು ಮಾಡಿದರೆ ರಾಜ್ಯಪಾಲರು ನೇಮಕ ಮಾಡುತ್ತಾರೆ.

There Should Be An Investigation Into The Sale Of Vice Chancellor Post For Rs 5 Crore D k Shivakumar Said

ಸರ್ಕಾರದಲ್ಲಿ ಯಾರಿಗೆ ಈ ಹಣ ತಲುಪಿದೆ? ಮಂತ್ರಿಗಳಿಗೆ ತಲುಪಿದೆಯೋ? ಅಧಿಕಾರಿಗಳಿಗೆ ತಲುಪಿದೆಯೋ? ಎಂಬುದು ಚರ್ಚೆ ಆಗಬೇಕು. ಅದಕ್ಕಾಗಿ ವಿಧಾನ ಪರಿಷತ್ ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಾಗಿದೆ. ಕೂಡಲೇ ಲೋಕಾಯುಕ್ತ, ಇಡಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ನಮ್ಮ ಮೇಲೆ ದಾಳಿ ಮಾಡಿ ತನಿಖೆ ಮಾಡುವವರು ಇವರ ಹೇಳಿಕೆ ವಿಚಾರದಲ್ಲೂ ತನಿಖೆ ಮಾಡಬೇಕು. ಸಿಬಿಐನವರು ನನ್ನ ಜತೆ ವ್ಯವಹಾರ ಇಟ್ಟುಕೊಂಡವರಿಗೆಲ್ಲ ನೊಟೀಸ್ ನೀಡಿ ವಿಚಾರಣೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಚರ್ಚೆ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.

ಶಿಕ್ಷಣ ವ್ಯವಸ್ಥೆಯ ಹುದ್ದೆ ಮಾರಾಟ ಭ್ರಷ್ಟಾಚಾರದ ವಿಚಾರವಾಗಿದ್ದು, ಬಿಜೆಪಿ ಸಂಸದರು ಹೇಳಿರುವ ವಿಚಾರವನ್ನು ನಾವು ಚರ್ಚೆ ಮಾಡದಿದ್ದರೆ ನಮ್ಮ ಕರ್ತವ್ಯದಲ್ಲಿ ಲೋಪ ಆಗಲಿದೆ. ಹೀಗಾಗಿ ಈ ವಿಚಾರ ತನಿಖೆ ಆಗಬೇಕು, ಜನರಿಗೆ ವಿಚಾರ ತಿಳಿಯಬೇಕು.

ಕುಲಪತಿ ನೇಮಕ್ಕೆ ಲಂಚ ನೀಡಬೇಕೆಂದು ಪ್ರತಾಪ್ ಸಿಂಹ ಹೇಳಿಕೆ; ಮೇಲ್ಮನೆಯಲ್ಲಿ ಪ್ರತಿಧ್ವನಿ

ವಿಶ್ವವಿದ್ಯಾಅಲಯ ಉಪಕುಲಪತಿ ಹುದ್ದೆ ನೇಮಕಕ್ಕೆ ಕೋಟ್ಯಂತರ ರೂಪಾಯಿ ಲಂಚ ನೀಡಬೇಕೆಂದಿರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೇಳಿಕೆ ಬುಧವಾರ ವಿಧಾನ ಪರಿಷತ್ ನಲ್ಲೂ ಪ್ರತಿಧ್ವನಿಸಿತ್ತು.

ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕ ಬಿ.ಕೆ ಹರಿ ಪ್ರಸಾದ್ ಈ ವಿಚಾರವನ್ನ ಪ್ರಸ್ತಾಪಿಸಿದ್ದು, ಕುಲಪತಿ ನೇಮಕ ವಿಚಾರವಾಗಿ ಲಂಚ ನೀಡುವುದರ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕೆಂದರು ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+