ಆರ್‌ಎಸ್‌ಎಸ್ ಬ್ಯಾನ್ ಮಾಡಿ ಪ್ರಯೋಜನವಿಲ್ಲ, ಅಲ್ಲಿರೋರಿಗೆ ಬಸವಣ್ಣನ ವಿಚಾರ ಹೇಳ್ಬೇಕು: ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು, ಮೇ 29: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್), ಬಜರಂಗ ದಳ ನಿಷೇಧದ ಕುರಿತು ಕರ್ನಾಟಕದಲ್ಲಿ ನೂತನವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚರ್ಚೆ ಹೆಚ್ಚಾಗಿದ್ದು, ಈ ಬಗ್ಗೆ ಈಗ ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ, ಹಿಜಾಬ್, ಆರ್‌ಎಸ್‌ಎಸ್, ಬಜರಂಗ ದಳ ನಿಷೇಧ ವಿಷಯದ ಕುರಿತು ಮಾತನಾಡಿದ ಅವರು, ಈ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕು, ಬೇಗ ಯಾವುದು ಇಲ್ಲಿ ಮಾಡಲಾಗಲ್ಲ, ಅದರ ಕುರಿತು ಸಾಧಕ ಬಾಧಕ ಬಗ್ಗೆ ನೋಡಬೇಕು, ಈ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಒಳಗೆ ಚರ್ಚೆ ನಡೆದು ನಂತರ ಕ್ರಮ ಜರುಗಿಸಬೇಕಿರುವುದರಿಂದ ತಕ್ಷಣಕ್ಕೆ ಯಾವುದೇ ಕ್ರಮವಿಲ್ಲ ಎಂದರು.

ಅದು ಪೂರ್ಣ ಪ್ರಮಾಣದಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಬೇಕು. ಬೆಳಗಾವಿಯಲ್ಲಿ ಗೂಂಡಾಗಿರಿಯ ಬಗ್ಗೆಯೂ ತನಿಖೆಯನ್ನು ನಾವು ಮಾಡುತ್ತೇವೆ, ಆರ್‌ಎಸ್‌ಎಸ್‌ನವರನ್ನು ಬಜರಂಗದಳವನ್ನು ಅಲ್ಲಿ ಇರೋರನ್ನು ಹೊರಗೆ ತೆಗೆದು ರಿಪೇರಿ ಮಾಡಬೇಕು ಅಷ್ಟೇ. ಆರ್‌ಎಸ್‌ಎಸ್ ಬಜರಂಗ ದಳವನ್ನು ಬ್ಯಾನ್ ಮಾಡಿ ಪ್ರಯೋಜನವಿಲ್ಲ.
ಅವರಿಗೆ ನನ್ನ ಐಡಿಯಾ ಪ್ರಕಾರ ಸಂಘ ಬ್ಯಾನ್ ಮಾಡಿ ಪ್ರಯೋಜನವಿಲ್ಲ, ಸಂಘ ಬ್ಯಾನ್ ಮಾಡಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಅಲ್ಲಿರುವ ಶೂದ್ರರನ್ನು ಹೊರ ತಂದಯ ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಹೇಳಿ ಅವರ ಮನಪರಿವರ್ತನೆ ಮಾಡಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ್ದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸಂಘಟನೆಯಾದರೂ ಕೂಡ ನಮ್ಮ ಶಾಂತಿಯ ತೋಟವನ್ನು ನಾಶ ಮಾಡಲು ಹೊರಟರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಯಾಕೆ ಬಿಜೆಪಿಯವರು ತಾಕತ್ತಿದ್ದರೆ ಬ್ಯಾನ್ ಮಾಡಿನೋಡಿ ಎಂದು ಧಮ್ಕಿ ಹಾಕುತ್ತಾರೆ. ಯಾಕೆ ಅವರು ತಮ್ಮ ಬಾಯಿಂದ ಸಂವಿಧಾನವನ್ನು ಪಾಲನೆ ಮಾಡುತ್ತೇವೆ ಎಂದು ಹೇಳಲ್ಲ. ಅವರಿಗೆ ನಾನು ಹೇಳುವುದೆಂದರೆ ನೀವು ತಾಕತ್ತಿದ್ದರೆ ಕಾನೂನು ಉಲ್ಲಂಘನೆ ಮಾಡಿನೋಡಿ ಆವಾಗ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ಏನು ಅಂತಾ ನಾವು ತೋರಿಸುತ್ತೇವೆ ಎಂದು ಹೇಳಿದ್ದರು.
ನಾವು ಏನು ಕಾನೂನು ಉಲ್ಲಂಘನೆ ಮಾಡಿದ್ರೆ ಸಮ್ಮನೇ ಬಿಡೋ ಮಾತೇ ಇಲ್ಲ ಕ್ರಮ ನಿಶ್ಚಿತ. ಬಿಜೆಪಿಯವರು ಮೊದಲು ಆತ್ಮಾಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು.












Click it and Unblock the Notifications