ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ನಲ್ಲೇ ವಿರೋಧ; ನಿವೃತ್ತಿಗೆ ಮುಂದಾದ ಮೈಸೂರು ಭಾಗದ ಶಾಸಕ!
ಮೈಸೂರು, ಆಗಸ್ಟ್ 22: ಲೋಕಸಭಾ ಚುನಾವಣೆಗೆ 20 ಸ್ಥಾನಗಳ ಟಾರ್ಗೆಟ್ ಹಾಕಿಕೊಂಡಿದ್ದು, ಆಪರೇಷನ್ ಹಸ್ತಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಶಿರಸಿ ಶಾಸಕರ ನಂತರ ಇದೀಗ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ 'ಆಪರೇಷನ್ ಹಸ್ತ' ನಡೆಸುವ ಅವಶ್ಯಕತೆ ಇಲ್ಲ. ಜನ ನಮಗೆ 135 ಸ್ಥಾನ ಕೊಟ್ಟು ಪೂರ್ಣ ಬಹುಮತ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಪರೇಷನ್ ಹಸ್ತದ ಅವಶ್ಯಕತೆಯಿಲ್ಲ ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಇದೆ. ಆದ್ರೂ ರಾಜೀನಾಮೆ ನೀಡಿ ಜನರ ಬಳಿ ಹೋಗೋದು ಎಷ್ಟು ಸರಿ..? ಎಂದು ಪ್ರಶ್ನಿಸಿದ್ದಾರೆ.

ಈಗಿನ ರಾಜಕೀಯ ಸನ್ನಿವೇಶ, ಪರಿಸ್ಥಿತಿ ಯಾವುದೂ ಸರಿಯಿಲ್ಲ. ಹೀಗಾಗಿಯೇ ನಾನು ರಾಜಕೀಯ ನಿವೃತ್ತಿಗೆ ಮುಂದಾಗಿದ್ದೇನೆ ಎಂದು ಹೇಳುವ ಮೂಲಕ ಆಪರೇಷನ್ ಹಸ್ತದ ಬಗ್ಗೆ ಶಾಸಕ ತನ್ವೀರ್ ಸೇಠ್ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದು, ಆಪರೇಷನ್ ಕಮಲ ಅನ್ನೋದನ್ನು ತಂದಿದ್ದೇ ಬಿಜೆಪಿಯವರು. ಈ ವಿಚಾರಕ್ಕೆ ಹೆಚ್ಚಿನ ಮನ್ನಣೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಕಾವೇರಿ ವಿಚಾರವಾಗಿ ಮಾಧ್ಯನಮ್ಮ ಸರ್ಕಾರ ಮಾತ್ರ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ತಮಿಳುನಾಡಿಗೆ ನೀರು ಬಿಡಲಾಗಿದೆ. ನೀರು ಹಂಚಿಕೆಯಲ್ಲಿ ಪ್ರಾಧಿಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕು. ಇದೇ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ. ಆಗಸ್ಟ್ ತಿಂಗಳ 23ರಂದು ಸರ್ವ ಪಕ್ಷಗಳ ಸಭೆ ನಡೆಯಲಿದೆ. ಸರ್ವ ಪಕ್ಷ ಸಭೆಯಲ್ಲಿ ಮುಂದೇನು ಮಾಡ್ಬೇಕೆಂದು ತೀರ್ಮಾನಿಸಲಾಗುತ್ತೆ. ಕಾವೇರಿ ವಿಚಾರ ಇಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು. ಸರ್ವ ಪಕ್ಷಗಳ ಸಭೆಗೆ ಆಹ್ವಾನ ಬಂದರೆ ನಾನು ಕೂಡ ಹೋಗುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಜನ ಕಾಂಗ್ರೆಸ್ ಮೇಲೆ ನಂಬಿಕೆಯಿಟ್ಟು 135 ಸ್ಥಾನವನ್ನ ಕೊಟ್ಟಿದ್ದಾರೆ . ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ಕೊಡುತ್ತಿದೆ. ಇನ್ನಷ್ಟು ಜನಸ್ನೇಹಿ ಆಡಳಿತ ಕೊಡುವುದೇ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ಜನರು ಕೂಡ ಸರ್ಕಾರದ ಕಾರ್ಯವೈಖರಿಗೆ ಸಂತಸಗೊಂಡಿದ್ದಾರೆ ಅಂತ ಹೇಳಿದ್ರು. ಗ್ಯಾರಂಟಿಗಳು ಜನ ಮನಗೆದ್ದಿದೆ. ಆ.30 ಕ್ಕೆ ಗೃಹಲಕ್ಷ್ಮೀ ಕೂಡ ಘೋಷಣೆ ಆಗಲಿದ್ದು, ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಂಡಿದೆ ಎಂದರು.
ಕಾಂಗ್ರೆಸ್ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ: ಆರ್.ಅಶೋಕ್
ಇಂಡಿಯ ಪಾಲುದಾರ ಪಕ್ಷವನ್ನು ಖುಷಿ ಪಡಿಸಲು ರಾಜ್ಯದ ಕಾಂಗ್ರೆಸ್ ಸರಕಾರವು ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ. ತಮಿಳುನಾಡಿನ ಸರಕಾರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಪ್ರೀತಿ ಸಂಪಾದಿಸಲು ನಮ್ಮ ಬೆಳೆಗಳು, ಬೆಂಗಳೂರಿನ ಕುಡಿಯುವ ನೀರಿಗೆ ಬೇಕಾದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಹಿಂದೆ ಮೇಕೆದಾಟು ವಿಚಾರವಾಗಿ ರಸ್ತೆಯಲ್ಲಿ ಓಡಾಡಿ ಹೋರಾಟ ಮಾಡುವುದಾಗಿ ಹೇಳುತ್ತಿದ್ದವರು ಈಗ ತಮಿಳುನಾಡಿಗೆ ಫೇವರ್ ಮಾಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಕಟುವಾಗಿ ಟೀಕಿಸಿದರು.
ಇದರ ವಿರುದ್ಧವಾಗಿ ಮಂಡ್ಯ- ಮೈಸೂರು ಬಾಗದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 23ರಂದು ನಡೆಯುವ ಸರಕಾರದ ಸಭೆಯಲ್ಲಿ ನಾವು ಸರಕಾರದ ನಿಲುವನ್ನು ವಿರೋಧಿಸುತ್ತೇವೆ. ಸರಕಾರದ ವಿರುದ್ಧ ಇದೇ 29ರಂದು ತೀವ್ರತರದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.












Click it and Unblock the Notifications