ಕೋವಿಡ್ ವಾರಿಯರ್ಸ್‌ಗೆ ಕಠಿಣ ಕ್ವಾರಂಟೈನ್‌ನಿಂದ ಮುಕ್ತಿ
ಬೆಂಗಳೂರು, ಮೇ 16: ಕೋವಿಡ್ ವಾರಿಯರ್ಸ್‌ಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದೆ.
''ಪಿಪಿಇ ಕಿಟ್‌ನೊಂದಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಹೆಲ್ತ್ ಕೇರ್ ವರ್ಕರ್ಸ್‌ಗೆ ಕ್ವಾರಂಟೈನ್ ಅಗತ್ಯ ಇಲ್ಲ'' ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಶನಿವಾರ ಸುತ್ತೋಲೆ ಹೊರಡಿಸಿದ್ದಾರೆ.
ಹೆಲ್ತ್ ಕೇರ್ ವರ್ಕರ್ಸ್ (ವೈದ್ಯರು, ನರ್ಸ್, ಟೆಕ್ನಿಷಿಯನ್ ಹಾಗೂ ಡಿ ದರ್ಜೆ ನೌಕರರು) ಸದ್ಯ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಒಂದು ವಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ನಂತರ ಅವರನ್ನು 14 ದಿನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ.

ಈ ನಿಯಮಗಳಿಗೆ ಮಾರ್ಪಾಡು ಮಾಡಿರುವ ಆರೋಗ್ಯ ಇಲಾಖೆ ಹೆಲ್ತ್ ಕೇರ್ ವರ್ಕರ್ಸ್ ಎಲ್ಲರೂ ಪಿಪಿಇ ಕಿಟ್ ಗಳನ್ನು ಬಳಸುತ್ತಿರುವುದರಿಂದ ಅವರಿಗೆ ಸಾಂಸ್ಥಿಕ ಕ್ವಾರಂಟೈನ್ ಅವಶ್ಯಕತೆ ಇಲ್ಲ. ಬದಲಿಗೆ ಅವರು ತಮ್ಮ ಕೆಲಸದ ಅವಧಿಯಲ್ಲಿ ನಿಯಮಿತವಾಗಿ ಸ್ಕ್ರೀನಿಂಗ್ ಗೆ ಒಳಪಟ್ಟರೆ ಸಾಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೋವಿಡ್ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡದೇ ಸಂಪೂರ್ಣ ಪಿಪಿಇ ಕಿಟ್ ಧರಿಸಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವವರಿಗೆ ಕ್ವಾರಂಟೈನ್ ಅಗತ್ಯ ಇಲ್ಲ. ಆದರೆ, ಅವರು ಸ್ವ ನಿಯಂತ್ರಣಕ್ಕೆ ಒಳಪಡಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಮೇರೆಗೆ ಹಾಗೂ ತಜ್ಞರ ತಂಡದ ಅಭಿಪ್ರಾಯದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ಜಾವೇದ್ ಅಕ್ತರ್ ತಿಳಿಸಿದ್ದಾರೆ.












Click it and Unblock the Notifications