ಗೃಹಲಕ್ಷ್ಮಿಯರಿಗೆ ಇಂತಹ ಭಾಗ್ಯವೇ?: ಬಿಜೆಪಿ ಹೇಳಿದ್ದೇನು?

ಬೆಂಗಳೂರು, ಜನವರಿ 13: ಬೆಳಗಾವಿಯ ಒಬ್ಬ ಮಹಿಳೆಯ ಅಮಾನವೀಯ ಕಿರುಕುಳ ಮತ್ತು ದೌರ್ಜನ್ಯ, ಮತ್ತೊಬ್ಬ ಮಹಿಳೆಯ ಮೂಗಿಗೆ ಕತ್ತರಿ, ಈಗ ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ.ಗೃಹಲಕ್ಷ್ಮಿಯರಿಗೆ ಇಂತಹ ಭಾಗ್ಯವೇ? ಎಂದು ರಾಜ್ಯ ಬಿಜೆಪಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ಮಹಿಳೆಯರನ್ನು ಸುರಕ್ಷಿತವಾಗಿಸಬೇಕಿದ್ದ ಹೊದಿಕೆಯ ತುಂಬಾ ರಂಧ್ರಗಳೇ ತುಂಬಿವೆ. ಕರ್ನಾಟಕವನ್ನು ಕಾಂಗ್ರೆಸ್ ತಾಲಿಬಾನ್ ಅನ್ನಾಗಿಸುತ್ತಿದೆಯೇ? ಎಂದು ಪ್ರಶ್ನಿಸಿದೆ.

There Is No Guarantee For The Safety Of Women In Karnataka Says BJP

ಗಾಂಧಿ ತತ್ವದ ಬಗ್ಗೆ ಭಾಷಣ ಮಾಡುವ ಸಿದ್ದರಾಮಯ್ಯನವರೆ, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಘನತೆಯ ಆದರ್ಶ ನಿಮ್ಮ ನಾಯಕತ್ವದಲ್ಲಿ ಛಿದ್ರ ಛಿದ್ರವಾಗಿದೆ. ನಮ್ಮ ತಾಯಂದಿರ, ಸಹೋದರಿಯರ, ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರಂಟಿ ಇಲ್ಲದಾಗ, ನಿಮ್ಮ ಗ್ಯಾರಂಟಿಗಳು ಇನ್ನೆಷ್ಟು ಯೋಗ್ಯ ಅನಿಸಿಕೊಳ್ಳುತ್ತವೆ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಇನ್ನೊಂದು ಟ್ವೀಟ್‌ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಈಗ ಬಿಜೆಪಿ ಪರ ಮತ್ತು ಮೋದಿ ಸರ್ಕಾರದ ಪರವಾದ ಅಲೆ ಇದೆ. ಇದನ್ನು ಕಂಡು ಕಾಂಗ್ರೆಸ್ಸಿಗರು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಕುಂಠಿತಗೊಂಡಿರುವ ಅಭಿವೃದ್ಧಿ ಕಾರ್ಯಗಳು, ರೈತರ ಆತ್ಮಹತ್ಯೆ, ಬರಗಾಲ, ವಿದ್ಯುತ್ ನೀಡುವಲ್ಲಿ ವೈಫಲ್ಯ ಇವೆಲ್ಲವನ್ನೂ ನೋಡುತ್ತಿರುವ ರಾಜ್ಯದ ಜನತೆ ಆಕ್ರೋಶಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+