ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಿಂದೂ ಶಬ್ದ ವಿದೇಶಿಯರಿಂದ ಬಂದ ಬಳುವಳಿ' : ಮೊಯ್ಲಿ

|
Google Oneindia Kannada News

ಬೆಂಗಳೂರು, ಸೆ. 22 : 'ಹಿಂದೂ ಶಬ್ದ ವಿದೇಶದ್ದು, ಅದು ಮಹಮ್ಮದೀಯರಿಂದ ಬಂದದ್ದು. ಈ ನೆಲದ ಮಣ್ಣಿನಲ್ಲಿ ಹುಟ್ಟಿದ ಪದ ಅಲ್ಲ' ಎಂದು ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಪದದ ಬಗ್ಗೆ ಮಾತನಾಡುವ ಮೂಲಕ ಮಾಜಿ ಕೇಂದ್ರ ಸಚಿವರು ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

ಭಾನುವಾರ ಬಸವ ಕೇಂದ್ರ ಮತ್ತು ಅನಿಕೇತನ ಕನ್ನಡ ಬಳಗ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಪುಸ್ತಕಗಳ ಲೋಕಾರ್ಪಣೆ ಹಾಗೂ ಸಾಹಿತ್ಯ ಕೃಷಿ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ವೀರಪ್ಪ ಮೊಯ್ಲಿ ಈ ಕುರಿತು ಮಾತನಾಡಿದ್ದಾರೆ. [ಲವ್ ಜಿಹಾದ್ ಎಂದರೇನು?]

Veerappa Moily

'ಹಿಂದು ಎಂಬ ಶಬ್ದ ನಮ್ಮದಲ್ಲ. ವೇದ- ಪುರಾಣಗಳಲ್ಲೂ ಈ ಪದದ ಉಲ್ಲೇಖವಿಲ್ಲ. ದೇಶ ವಿಭಜನೆ ವೇಳೆ ಮಹಮ್ಮದೀಯರಿಂದ ಆ ಪದ ಬಂದಿದೆ. ನಂತರ ಅದು ನಮ್ಮದೇ ಪದ ಎನ್ನುವಂತೆ ಬಳಸಲಾಗುತ್ತಿದೆ. ಭಾರತೀಯತೆಯ ತಳಪಾಯ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ' ಎಂದು ವೀರಪ್ಪ ಮೊಯ್ಲಿ ಹೇಳಿದರು. [ಹಿಂದುತ್ವ ಹೇಳಿಕೆ ವಿವಾದದಲ್ಲಿ ಆರೆಸ್ಸೆಸ್ ಮುಖ್ಯಸ್ಥ]

'ಜಾತಿ ವ್ಯವಸ್ಥೆ ನಿರಾಕರಿಸಿದ ವಿಶ್ವದ ಮೊದಲ ರಾಷ್ಟ್ರ ನಮ್ಮದು. ಆದರೆ, ನಮ್ಮ ಸ್ವಾರ್ಥದಿಂದಾಗಿ ಇಂದಿಗೂ ಭಾರತದಲ್ಲಿ ಜಾತಿ ವ್ಯವಸ್ಥೆ ಉಳಿದಿದೆ. ಸಂವಿಧಾನ ರಚಿಸುವಾಗಲೇ ಜಾತಿ ವ್ಯವಸ್ಥೆಯನ್ನು ನಿಷೇಧಿಸಬೇಕಿತ್ತು ಅಥವಾ ಅಸ್ಪೃಶ್ಯತೆ ನಿಷೇಧಿಸಿ ಸಂವಿಧಾನ ತಿದ್ದುಪಡಿ ಮಾಡಿದಾಗಲೇ ಜಾತಿ ವ್ಯವಸ್ಥೆಯನ್ನು ಕೈಬಿಡಬೇಕಿತ್ತು' ಎಂದರು.

ಅಂಧಕ್ಕಾರಕ್ಕೆ ಬಲಿ : ಮಠಾಧೀಶರ ಬಗ್ಗೆಯೂ ಮಾತನಾಡಿದ ಮೊಯ್ಲಿಯವರು, 'ಅನೇಕ ಮಠಾಧೀಶರು ಅಧ್ಯಯನ ಮಾಡದೆ ಅಂಧಕಾರಕ್ಕೆ ಬಲಿಯಾಗಿದ್ದಾರೆ, ಸಮಾಜಕ್ಕೂ ಅಂಧಕಾರವನ್ನೇ ಪ್ರಚಾರ ಮಾಡುತ್ತಿದ್ದಾರೆ. ಇದು ಅಪಾಯಕಾರಿ. ಇಂಥವರು ವಚನ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಮುರುಘಾಶರಣರನ್ನು ಆದರ್ಶವಾಗಿ ಪಡೆಯಬೇಕು' ಎಂದು ಮೊಯ್ಲಿ ಕರೆ ನೀಡಿದರು.

ಸಮಾರಂಭದಲ್ಲಿ ಮುರಘಾಶರಣರ ಪ್ರಚಲಿತ, ಮುನ್ನೋಟ ಮತ್ತು ವಚನ ವಿವೇಕ ಎಂಬ ಮೂರು ಪುಸ್ತಕಗಳನ್ನು ವೀರಪ್ಪ ಮೊಯ್ಲಿ ಬಿಡುಗಡೆ ಮಾಡಿದರು. ಚಿತ್ರದುರ್ಗದ ಎಸ್‌.ಜೆ.ಎಂ. ವಿದ್ಯಾಪೀಠದ ಉಪಾಧ್ಯಕ್ಷ ಪ್ರೊ.ಎಸ್‌.ಎಚ್‌. ಪಟೇಲ್‌, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಮಾಯಣ್ಣ, ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಿ.ಎಸ್‌. ಮಲ್ಲಿಕಾರ್ಜುನಪ್ಪ ಮುಂತಾದವರು ಉಪಸ್ಥಿತರಿದ್ದರು.

English summary
'There is no mention of the word Hindu in our Vedas and Upanishads, the word 'Hindu' was invented by the Muslims in the medieval age' said Former union minister M.Veerappa Moily at a function in Bangalore on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X